7th Pay Commission: 'ತುಟ್ಟಿ ಪರಿಹಾರ' (DR) ಹೆಚ್ಚಳ: ಕೇಂದ್ರ ನೌಕರರು ತಿಳಿಯಬೇಕಾದ 6 ಅಂಶಗಳು
ನವದೆಹಲಿ, ಮಾರ್ಚ್ 15: ಕೇಂದ್ರ ಸರ್ಕಾರಿ ನೌಕರರು ಏಳನೇ ವೇತನ ಆಯೋಗದಡಿ (7th Pay Commission) ಶೇಕಡಾ 4ರಷ್ಟು ತುಟ್ಟಿಭತ್ಯೆ (DA) ಹೆಚ್ಚಳ ಪಡೆಯಲಿದ್ದಾರೆ. ಈ ಸಂತಸದ ನಡುವೆ ಕೇಂದ್ರ ಸರ್ಕಾರವು ಪಿಂಚಣಿದಾರರ ಶೇಕಡಾ 4ರಷ್ಟು ತುಟ್ಟಿ ಪರಿಹಾರ (DR) ಏರಿಕೆ ಮಾಡಿದೆ.
ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರಗಳು ಶೇಕಡಾ 4ರಷ್ಟು ಏರಿಕೆ ಆಗಿವೆ. ಶೇಕಡಾ 50 ತಲುಪಿದ ಬಳಿಕ ಇವೆರಡನ್ನು ಸರ್ಕಾರ ವಿಲೀನ ಮಾಡಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಹಾಗಾದರೆ, ಇವೆರಡು ವಿಲೀನ ಆಗುತ್ತವೆಯೇ, ನೌಕರರು ತಿಳಿಯಲೇಬೇಕಾದ ಹಲವು ಅಂಶಗಳು ಇಲ್ಲಿವೆ ನೋಡಿ.

ಕೇಂದ್ರ ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ಹೆಚ್ಚಳವನ್ನು ಪಡೆಯಲು ಸಜ್ಜಾಗಿದ್ದಾರೆ. ಇತ್ತೀಚಿನ ಹೆಚ್ಚಳದ ತುಟ್ಟಿಭತ್ಯೆ (ಡಿಎ) ಶೇಕಡಾ 50ರಷ್ಟು ತಲುಪಿವೆ. ತುಟ್ಟಿಭತ್ಯೆ ಶೇಕಡಾ 50 ತಲುಪಿದ ಬಳಿಕ ನೌಕರರು ನಿಯಮದ ಪ್ರಕಾರ ಕೆಲವು ಸೌಲಭ್ಯಗಳ ಹೆಚ್ಚಳಗಳನ್ನು ಪಡೆಯಲಿದ್ದಾರೆ. ಡಿಎ ಮತ್ತು ಡಿಆರ್ ಏರಿಕೆ ಬಗ್ಗೆ ಇತ್ತೀಚೆಗೆ ಪಿಐಬಿ ವರದಿ ಮಾಡಿದೆ.
ಎಷ್ಟು ಲಕ್ಷ ನೌಕರರು, ಪಿಂಚಣಿದಾರರಿಗೆ ಲಾಭ?
ಡಿಎ ಜೊತೆಗೆ ಕೇಂದ್ರ ಸರ್ಕಾರವು ಬೆಲೆ ಏರಿಕೆಯ ಪರಿಣಾಮವನ್ನು ತಗ್ಗಿಸುವ ಉದ್ದೇಶದಿಂದ ಪಿಂಚಣಿದಾರರ ತುಟ್ಟಿ ಪರಿಹಾರವನ್ನು (ಡಿಆರ್) ಶೇಕಡಾ 4ರಷ್ಟು ಏರಿಕೆ ಮಾಡಿದೆ. ಪಿಐಬಿ ಮಾಹಿತಿ ಪ್ರಕಾರ, ಈ ಹೆಚ್ಚಳವು ಕೇಂದ್ರಕ್ಕೆ ವಾರ್ಷಿಕ ಸುಮಾರು ರೂ. 12,868.72 ಕೋಟಿ ವೆಚ್ಚ ಉಂಟು ಮಾಡಲಿದೆ. ಒಟ್ಟಾರೆ ಈ ಡಿಎ ಮತ್ತು ಡಿಆರ್ ಹೆಚ್ಚಳದಿಂದ ದೇಶದ ಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ ಎಂದು ತಿಳಿಸಿದೆ.

ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಹೆಚ್ಚಳವು ಇದೇ ವರ್ಷ ಜನವರಿ 2024ರಿಂದಲೇ ಅನ್ವಯವಾಗಲಿದೆ. ಹಾಗಾದರೆ ಮೂಲ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಿ ನೌಕರರು ತಿಳಿಯಬೇಕಾದ 06 ಅಂಶಗಳು ಇಲ್ಲಿವೆ.
* ನೌಕರರ ಮೂಲ ವೇತನ ಏರಿಕೆ
ತುಟ್ಟಿ ಭತ್ಯೆ (ಡಿಎ) ಏರಿಕೆಯು 2024ರ ಜನವರಿ 1 ರಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತುಟ್ಟಿಭತ್ಯೆ ದರಗಳು ಮೂಲ ವೇತನದ ಶೇಕಡಾ 46 ರಿಂದ 50 ಕ್ಕೆ ಏರುತ್ತದೆ ಎಂದು ಕೇಂದ್ರ ತಿಳಿಸಿದೆ.
* ಮೂಲ ವೇತನವನ್ನು ಅರ್ಥೈಸಿಕೊಳ್ಳಬೇಕು
ಪರಿಷ್ಕೃತ ವೇತನ ರಚನೆಯಲ್ಲಿ, ವಿಶೇಷ ವೇತನದಂತಹ ಇತರ ರೀತಿಯ ವೇತನಗಳನ್ನು ಹೊರತುಪಡಿಸಿ, ಸರ್ಕಾರವು ಅಂಗೀಕರಿಸಿದ 7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ಪೇ ಮ್ಯಾಟ್ರಿಕ್ಸ್‌ನಲ್ಲಿ ನಿಗದಿತ ಮಟ್ಟದಲ್ಲಿ ಪಡೆದ ವೇತನವನ್ನು ಉಲ್ಲೇಖಿಸುತ್ತದೆ.
* ವಿಶೇಷ ಅಂಶ
ತುಟ್ಟಿಭತ್ಯೆಯ ಸಂಭಾವನೆಯು ಪ್ರತ್ಯೇಕ ಅಂಶವಾಗಿ ಉಳಿದಿದೆ. ಈ ಅಂಶಗವನ್ನು FR 9(21) ವ್ಯಾಪ್ತಿಯಲ್ಲಿ ವೇತನವೆಂದು ಪರಿಗಣಿಸಲಾಗುವುದಿಲ್ಲ.
* ಪಾವತಿ ಪೂರ್ಣಾಂಕ
ತುಟ್ಟಿಭತ್ಯಯು 50 ಪೈಸೆಗೆ ಸಮಾನವಾದ ಅಥವಾ ಅದಕ್ಕಿಂತ ಹೆಚ್ಚಿನ ಭಿನ್ನತೆ ಹೊಂದಿರುವ ಪಾವತಿಯನ್ನು ಹತ್ತಿರದ ರೂಪಾಯಿಗೆ ಪೂರ್ಣಗೊಳಿಸಲಾಗುತ್ತದೆ (Roundep). ಆದರೆ 50 ಪೈಸೆಗಿಂತ ಕಡಿಮೆಯ ಭಿನ್ನತೆಗಳನ್ನು ಕಡೆಗಣಿಸಲಾಗುತ್ತದೆ.
* ಬಾಕಿ ಪಾವತಿ
ಮಾರ್ಚ್ 2024ರ ಸಂಬಳ ವಿತರಣೆಯ ದಿನಾಂಕದ ಮೊದಲು ತುಟ್ಟಿಭತ್ಯೆಯ ಬಾಕಿಯನ್ನು ವಿತರಿಸಲಾಗುವುದಿಲ್ಲ ಎಂಬುದನ್ನು ನೌಕರರು ಗಮನಿಸಬೇಕಿದೆ.
* ಇತರ ಉದ್ಯೋಗಿಗಳಿಗೆ ಅನ್ವಯಿಸುವಿಕೆ
ತುಟ್ಟಿಭತ್ಯೆ, ತುಟ್ಟಿ ಪರಿಹಾರ ಏರಿಕೆಯ ಆದೇಶಗಳು ರಕ್ಷಣಾ ಸೇವೆಗಳ ಅಂದಾಜುಗಳಿಂದ ಪಾವತಿಸಿದ ನಾಗರಿಕ ಉದ್ಯೋಗಿಗಳಿಗೆ ವಿಸ್ತರಣೆ ಆಗುತ್ತವೆ. ರಕ್ಷಣಾ ಸೇವೆಗಳ ಅಂದಾಜುಗಳ ಸಂಬಂಧಿತ ಮುಖ್ಯಸ್ಥರಿಗೆ ವೆಚ್ಚಗಳನ್ನು ವಿಧಿಸಲಾಗುತ್ತದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಮತ್ತು ರೈಲ್ವೆ ಉದ್ಯೋಗಿಗಳಿಗೆ ಕ್ರಮವಾಗಿ ರಕ್ಷಣಾ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯದಿಂದ ಪ್ರತ್ಯೇಕ ನಿರ್ದೇಶನಗಳನ್ನು ನೀಡಲಾಗುತ್ತದೆ.
ಇನ್ಣೂ ತುಟ್ಟಿಭತ್ಯೆ ಶೇಕಡಾ 50 ರಷ್ಟು ತಲುಪಿದ ಕೂಡಲೇ 7ನೇ ವೇತನ ಆಯೋಗದ ಶಿಫಾರಸುಗಳು ಅನ್ವಯ ನೌಕರರ ಇತರ ಭತ್ಯೆಗಳಲ್ಲಿ ಏರಿಕೆ ಆಗುತ್ತದೆ.












Click it and Unblock the Notifications