Namma metro: ಪಿಎಂ ಗತಿ ಶಕ್ತಿ ಯೋಜನೆ ವ್ಯಾಪ್ತಿಗೆ 'ಮಾಗಡಿ ರಸ್ತೆ- ORR ಮೆಟ್ರೋ ಕಾರಿಡಾರ್', ಅಪ್ಡೇಟ್ ತಿಳಿಯಿರಿ
ಬೆಂಗಳೂರು, ಫೆಬ್ರವರಿ 09: ಕರ್ನಾಟಕ ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-3 ರ ಅಡಿಯಲ್ಲಿ ಎರಡು ಕಾರಿಡಾರ್ ತ್ವರಿತ ಮಾರ್ಗವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಅಡಿಗೆ ತರಲಾಗಿದೆ.
ನಗರ ಸಾರಿಗೆ ಮೆಟ್ರೋ ಕಾರಿಡಾರ್ ಯೋಜನೆ ಕುರಿತು ಕೇಂದ್ರ ಮಟ್ಟದ ರಾಷ್ಟ್ರೀಯ ಯೋಜನಾ ಮಂಡಳಿಯ ಸಭೆಯಲ್ಲಿ DMRC (dehli metro) ಮೆಟ್ರೋ ಕಾರಿಡಾರ್‌ನೊಂದಿಗೆ ಬಸ್ ಮತ್ತು ರೈಲು ನಿಲ್ದಾಣಗಳು, ವಾಣಿಜ್ಯ ಮತ್ತು ಕೈಗಾರಿಕೆಗಳೊಂದಿಗೆ ಬಹು-ಮಾದರಿ ಏಕೀಕರಣ ತ್ವರಿತ ಕಾರ್ಯಯೋಜನೆ ವ್ಯಾಪ್ತಿಯಗೆ ತರಲಾಗಿದೆ ಎಂದು ಕೇಂದ್ರ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ ಎಂದು 'ಟೈಮ್ಸ್ ನೌ' ವರದಿ ಮಾಡಿದೆ.

ತ್ವರಿತಗತಿಯಲ್ಲಿ ಎರಡು ಕಾರಿಡಾರ್ ಕಾರ್ಯ
ಬೆಂಗಳೂರಿನ ಜೆಪಿ ನಗರದಿಂದ ಕೆಂಪಾಪುರ-ಹೊರ ವರ್ತುಲ ರಸ್ತೆವರೆಗೆ (ORR) ಹಾಗೂ ಹೊಸಹಳ್ಳಿಯಿಂದ ಕಡಬಗೆರೆ ಮಾಗಡಿ ರಸ್ತೆವರೆಗಿನ ಬೆಂಗಳೂರು ನಮ್ಮ ಮೆಟ್ರೋ ಎರಡು ಕಾರಿಡಾರ್‌ಗಳ ಬಗ್ಗೆ ಚರ್ಚೆ ಆಗಿದೆ. ಈ ಎರಡು ಕಾರಿಡಾರ್‌ಗಳು ತ್ವರಿತಗತಿಯಲ್ಲಿ ಸಾಗುತ್ತಿವೆ ಎಂದು ಸಭೆಗೆ ತಿಳಿಸಲಾಗಿದೆ.
ಈ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳ ಅನುಷ್ಠಾನದ ವ್ಯಾಪ್ತಿಯಲ್ಲಿ ಈ ಮೆಟ್ರೋ ಕಾರಿಡಾರ್‌ಗಳು ಒಳಪಡಲಿವೆ. ನಗರದ ರಸ್ತೆ, ಸಂಚಾರ ದಟ್ಟಣೆ, ಪ್ರಯಾಣದ ಸಮಯ ಉಳಿತಾಯ, ಇಂಧನ ವೆಚ್ಚ ಉಳಿತಾಯ, ವಿಶ್ವಾಸಾರ್ಹ ಕಾರ್ಯಾಚರಣೆ, ದಕ್ಷ ಸಾರಿಗೆ ಹಾಗೂ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಯೋಜಿಸಿದೆ.

ರಾಷ್ಟ್ರದ ಅಭಿವೃದ್ಧಿ ಸಾರಿಗೆ ಅಭಿವೃದ್ಧಿಯ ಕೊಡುಗೆ
ಸಭೆಯಲ್ಲಿ, ಸಾರಿಗೆಯ ಈ ಯೋಜನೆಗಳು ವಿವಿಧ ಸಾರಿಗೆ ವಿಧಾನಗಳನ್ನು ಸಂಯೋಜಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಗಣನೀಯ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ನೀಡುತ್ತವೆ. ಅಲ್ಲದೇ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ ಎಂಬುದನ್ನು ಕೇಂದ್ರ ಸಚಿವಾಲಯ ಪ್ರತಿಪಾದಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದಿಂದ ಗೋವಾ ರಾಜ್ಯದಲ್ಲಿ 45 ಕಿಲೋ ಮೀಟರ್‌ಗಳ NH-66 ನ ನಾಲ್ಕು ಪಥಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮತ್ತು ರಾಜ್ಯದಲ್ಲಿ 2-ಲೇನ್‌ನಿಂದ 4-ಲೇನ್‌ಗೆ ಪರಿವರ್ತನೆಯಗಳು ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಮತ್ತು ಉನ್ನತೀಕರಣವು ಈ ಸಭೆಯಲ್ಲಿ ಚರ್ಚೆ ಆಯಿತು.
ಬೆಂಗಳೂರಿನ ಈ ಎರಡು ಮೆಟ್ರೋ ಕಾರಿಡಾರ್ ಕೇಂದ್ರದ ಯೋಜನೆಗೆ ಸೇರಿದ ಬಳಿಕ ಯೋಜನೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications