ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

40 ಹೋಟೆಲ್‌ಗಳು ಮುಚ್ಚಲು ಕಾರಣವಾಯ್ತು ಒಬ್ಬ ನರ್ಸ್ ಸಾವು: ಕೇರಳದಲ್ಲಿ ಫುಡ್ ಜಾಯಿಂಟ್‌ಗಳ ಮೇಲೆ ತೀವ್ರಗೊಂಡ ದಾಳಿ

|
Google Oneindia Kannada News

ತಿರುವನಂತಪುರಂ, ಡಿಸೆಂಬರ್‌ 4: ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಒಂದು ದಿನದ ನಂತರ ಕೇರಳದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಂಗಳವಾರ 40 ಹೋಟೆಲ್‌ಗಳನ್ನು ಬಂದ್ ಮಾಡಿ, 62 ಮಂದಿಗೆ ದಂಡ ವಿಧಿಸಿದ್ದಾರೆ.

ರಾಜ್ಯಾದ್ಯಂತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ 28 ಮಂದಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ ಆಡಳಿತಾರೂಢ ಸಿಪಿಐ(ಎಂ) ನ ಯುವ ಸಂಘಟನೆಯ ಸದಸ್ಯರು ಕೊಟ್ಟಾಯಂನ 'ಹೋಟೆಲ್ ಪಾರ್ಕ್' ಮೇಲೆ ದಾಳಿ ನಡೆಸಿದರು. ಅಲ್ಲಿ 33 ವರ್ಷದ ನರ್ಸ್ ರೇಶ್ಮಿ ರಾಜ್ ಅವರು ಡಿಸೆಂಬರ್‌ನಲ್ಲಿ ಅರೇಬಿಯನ್ ಚಿಕನ್ ಡಿಶ್ 'ಅಲ್ ಫಹಮ್' ಅನ್ನು ಆರ್ಡರ್ ಮಾಡಿದ್ದರು. ಅದನ್ನು ತಿಂದ ನಂತರ ಅವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಸೋಮವಾರ ನಿಧನರಾದರು.

40 Kerala hotels shut, 62 fined in raids after nurse dies of food poisoning

ಅದೇ ಹೋಟೆಲ್‌ನಲ್ಲಿ ಊಟ ಮಾಡಿದ ಇತರ 20 ಜನರು ವಿವಿಧ ಆಸ್ಪತ್ರೆಗಳಲ್ಲಿ ವೈದ್ಯಕೀಯ ನೆರವು ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್‌ನ ಪರವಾನಗಿಯನ್ನು ಅಮಾನತುಗೊಳಿಸಿದ್ದಾರೆ ಮತ್ತು ಅದನ್ನು ಮುಚ್ಚಲು ಆದೇಶಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ. ಕೆಲವು ವಿದೇಶಿ ಖಾದ್ಯಗಳ ಜೊತೆಗೆ ಸೇವಿಸುವ ಹಳಸಿದ 'ಮೇಯನೇಸ್' ಸುಲಭವಾಗಿ ವಿಷವಾಗಿ ಪರಿವರ್ತನೆಯಾಗುತ್ತದೆ ಎಂಬುದು ಅನೇಕ ಸಂದರ್ಭಗಳಲ್ಲಿ ನಿಜವಾಗಿದೆ. ಮಾಂಸವನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸದಿದ್ದರೆ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಕೊಟ್ಟಾಯಂನ ಸಹಾಯಕ ಆಹಾರ ಆಯುಕ್ತ ಸಿ ಆರ್ ರಂದೀಪ್ ಹೇಳಿದ್ದಾರೆ.

ಘಟನೆಯ ನಂತರ, ಆಹಾರ ಸುರಕ್ಷತಾ ಇಲಾಖೆಗೆ ಸಚಿವರ ನಿರ್ದೇಶನದ ಮೇರೆಗೆ ರಾಜ್ಯದ ಕೊಲ್ಲಂ, ತಿರುವನಂತಪುರಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಹಲವು ಫುಡ್ ಜಾಯಿಂಟ್‌ಗಳ ಮೇಲೆ ದಾಳಿ ನಡೆಸಲಾಯಿತು.

40 Kerala hotels shut, 62 fined in raids after nurse dies of food poisoning

ಸಚಿವಾಲಯ ಹೊರಡಿಸಿದ ಪ್ರಕಟಣೆಯ ಪ್ರಕಾರ, ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ರಾಜ್ಯಾದ್ಯಂತ ತಿನಿಸುಗಳನ್ನು ಪರಿಶೀಲಿಸಲು ಮತ್ತು ಕಲಬೆರಕೆ ಅಥವಾ ಅಶುಚಿಯಾದ ಆಹಾರವನ್ನು ಪೂರೈಸುವವರ ಪರವಾನಗಿಯನ್ನು ರದ್ದುಗೊಳಿಸುವಂತೆ ಆಹಾರ ಸುರಕ್ಷತಾ ಇಲಾಖೆಗೆ ಸೂಚಿಸಿದ್ದಾರೆ.

ಕಳೆದ ಒಂದು ತಿಂಗಳಿನಿಂದ ರಾಜ್ಯಾದ್ಯಂತ ಹಲವಾರು ವಿಷಹಾರ ಸೇವನೆ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿಗಳು ನಡೆದಿವೆ.

ಕಳೆದ ವಾರ, ಪತ್ತನಂತಿಟ್ಟದಲ್ಲಿ ಬ್ಯಾಪ್ಟಿಸಮ್ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿದ ನಂತರ 100 ಕ್ಕೂ ಹೆಚ್ಚು ಜನರು ಅಶ್ವಸ್ಥರಾಗಿದ್ದರು. ನಂತರ ಜಾರ್ಜ್ ಅವರು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದರು. ಕೋಝಿಕ್ಕೋಡ್‌ನಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಉಪಾಹಾರ ಗೃಹದಿಂದ ಆಹಾರವನ್ನು ಸೇವಿಸಿದ ನಂತರ ಸುಮಾರು 21 ಜನರು ಅಸ್ವಸ್ಥರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

English summary
The Kerala food safety department officials on Tuesday shut down 40 hotels, imposed a fine on 62, while 28 others were given a warning after raids were conducted across the state, a day after a nurse working at the medical college hospital in Kottayam died of suspected food poisoning,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X