ಅಂತಾರಾಷ್ಟ್ರೀಯ ದಾದಿಯರ ದಿನ: ಈ ತಾಯಂದಿರಿಗೆ ಜೀವದ ಭೀತಿಗಿಂತ ಕಾಯಕ ಪ್ರೀತಿ ಹೆಚ್ಚು
ಪ್ರಪಂಚದಾದ್ಯಂತ 2022ರ ಮೇ 12ರ ಈ ದಿನವನ್ನು ಅಂತರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ದಾದಿಯರ ಮಾನವೀಯತೆಯ ಸೇವೆಯನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶದಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಬ್ರಿಟಿಷ್ ಸಮಾಜ ಸುಧಾರಕ, ಸಂಖ್ಯಾಶಾಸ್ತ್ರಜ್ಞ ಮತ್ತು ಮಾಡರ್ನ್ ನರ್ಸಿಂಗ್‌ನ ಸಂಸ್ಥಾಪಕ ಫ್ಲೊರೆನ್ಸ್ ನೈಟಿಂಗೇಲ್ ಅವರ ಜನ್ಮ ವಾರ್ಷಿಕೋತ್ಸವ. ಈ ದಿನವನ್ನು ಹಗಲಿರುಳು ಎನ್ನದೇ ಜನರಿಗಾಗಿ ಶ್ರಮಿಸುವ ಆರೋಗ್ಯ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ದಾದಿಯರಿಗೆ ಸಮರ್ಪಿಸಲಾಗುತ್ತಿದೆ.
ಫ್ಲಾರೆನ್ಸ್ ನೈಟಿಂಗೇಲ್ ಅನ್ನು ಮಾಡರ್ನ್ ನರ್ಸಿಂಗ್‌ನ ಸಂಸ್ಥಾಪಕಿ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ದಾದಿಯರ ದಿನವಾಗಿ ಆಚರಿಸಲಾಯಿತು. 1974ರಲ್ಲಿ, ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸ್ ಪ್ರತಿ ವರ್ಷ ಮೇ 12 ಅನ್ನು ಅಂತರರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲು ಘೋಷಿಸಿತು.

ದಾದಿಯರಿಗೆ ವಿಶೇಷ ಕಿಟ್ ವಿತರಣೆ
ಅಂತಾರಾಷ್ಟ್ರೀಯ ದಾದಿಯರ ದಿನದಂದು ಅಂತಾರಾಷ್ಟ್ರೀಯ ದಾದಿಯರ ಸಮಿತಿಯು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ದಾದಿಯರಿಗೆ ಕಿಟ್‌ಗಳನ್ನು ವಿತರಿಸುತ್ತದೆ. ಈ ಕಿಟ್‌ಗಳು ದಾದಿಯರ ಕೆಲಸಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಒಳಗೊಂಡಿದೆ. ದಾದಿಯರ ಸಹಕಾರ ಮತ್ತು ಸೇವೆಯಿಲ್ಲದೆ ಆರೋಗ್ಯ ರಕ್ಷಣಾ ವ್ಯವಸ್ಥೆಯು ಅಪೂರ್ಣವಾಗುತ್ತದೆ. ಆದ್ದರಿಂದ ಅವರ ಬಗ್ಗೆ ಕೃತಜ್ಞತೆ ತೋರಿಸಲು ಈ ದಿನವನ್ನು ಸ್ಮರಿಸಲಾಗುತ್ತದೆ.

ಕೋವಿಡ್-19 ಕಾಲದಲ್ಲಿ ಯೋಧರಂತೆ ದುಡಿದ ದಾದಿಯರು
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಇಡೀ ಜಗತ್ತು ಪರಿತಪಿಸುವ ಸಂದರ್ಭದ ಮಧ್ಯೆಯೂ ಕೊರೊನಾ ಯೋಧರಂತೆ ದುಡಿದ ದಾದಿಯರು ಸಾಕಷ್ಟು ಜೀವಗಳನ್ನು ರಕ್ಷಿಸಿದ್ದಾರೆ. ಸಾರ್ವಜನಿಕರನ್ನು ರಕ್ಷಿಸುವ ಕಾಯಕದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟಿದ್ದಾರೆ. ಅದೆಷ್ಟೋ ಸಮಯದಲ್ಲಿ ತಮ್ಮ ಆತ್ಮೀಯರನ್ನೂ ಕಳೆದುಕೊಂಡಿದ್ದಾರೆ.
ನಾವು ಮುಂಚೂಣಿಯಲ್ಲಿರುವ ಕೊರೊನಾವೈರಸ್ ಯೋಧರ ಬಗ್ಗೆ ಮಾತನಾಡುತ್ತಿದ್ದೇವೆ. ಅವರು ತಮ್ಮ ಪ್ರಾಣದ ಅಪಾಯವನ್ನು ಲೆಕ್ಕಿಸದೇ ಸಾಮಾನ್ಯ ಜನರ ಜೀವ ರಕ್ಷಣೆಗಾಗಿ ವೈದ್ಯರು ಹಾಗೂ ದಾದಿಯರು ಅತ್ಯುತ್ತಮವಾಗಿ ಪ್ರಯತ್ನಿಸಿದ್ದಾರೆ.

ಕುಟುಂಬವೇ ದೂರ ದೂರ: ದಾದಿಯರ ಸೇವೆ ಮಹತ್ತರ
ಸಾಮಾನ್ಯವಾಗಿ ರೋಗಿಗಳನ್ನು ಗುಣಪಡಿಸುವಲ್ಲಿ ವೈದ್ಯರು ಮಹತ್ತರವಾದ ಪಾತ್ರವನ್ನು ವಹಿಸಿದರೆ, ದಾದಿಯರು ಹಗಲು ರಾತ್ರಿ ರೋಗಿಗಳ ಸೇವಾ ಕಾಯಕದಲ್ಲಿಯೇ ತಮ್ಮ ದಿನವನ್ನು ಕಳೆಯುತ್ತಾರೆ. ಸ್ವತಃ ಕುಟುಂಬ ಸದಸ್ಯರಿಂದಲೇ ಅಂತರ ಕಾಯ್ದುಕೊಳ್ಳಬೇಕಾದ ಸವಾಲಿನ ಸಮಯದಲ್ಲೂ ಬೇರೆ ರೋಗಿಗಳಿಗಾಗಿ ತಮ್ಮ ಕುಟುಂಬವನ್ನು ದೂರವಿಟ್ಟು, ಕೋವಿಡ್-19 ಸೋಂಕಿನ ವಿರುದ್ಧ ದಾದಿಯರು ಹೋರಾಡಿದ ರೀತಿಗೆ ಭಾರತೀಯರು ಸಲಾಂ ಎನ್ನಲೇಬೇಕು.
Recommended Video

ಜಗತ್ತಿನಲ್ಲಿ ದಾದಿಯರಿಗೆ ತಾಯಿಯ ನಂತರದ ಸ್ಥಾನ
ಕೊರೊನಾವೈರಸ್ ಇಲ್ಲದ ಕಾಲದಲ್ಲೂ ದಾದಿಯರ ಕಾಯಕ ಪ್ರೀತಿ ಕಡಿಮೆಯೇನೂ ಇರಲಿಲ್ಲ. ತಾಯಿ ತನ್ನ ಮಗುವನ್ನು ಹೇಗೆ ರಕ್ಷಿಸುವುದಕ್ಕೆ ಪರಿತಪಿಸುತ್ತಾಳೋ ಅದೇ ರೀತಿ ದಾದಿಯರು ತಮ್ಮ ರೋಗಿಗಳ ಆರೈಕೆಯಲ್ಲಿ ಯಾವುದೇ ಹಿಂಜರಿಕೆ ತೋರಿಸುವುದಿಲ್ಲ. ಹೀಗಾಗಿಯೇ ಜಗತ್ತಿನಲ್ಲಿ ದಾದಿಯರಿಗೆ ತಾಯಿಯ ಸ್ಥಾನವನ್ನೇ ನೀಡಲಾಗುತ್ತದೆ. ಇನ್ನು ಕೊರೊನಾವೈರಸ್ ಕಾಲದಲ್ಲಿ ಸೋಂಕು ಅಂಟಿದ ವ್ಯಕ್ತಿಯನ್ನು ಸಂಬಂಧಿಕರೇ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ದಾದಿಯರು ತೋರಿದ ಕಾಯಕ ಪ್ರೀತಿ ಎಲ್ಲರಿಗೂ ಮೆಚ್ಚುಗೆ ಆಗುವಂತಿತ್ತು.
ಕೋವಿಡ್ 19 ರೋಗಿಯ ದೇಹವನ್ನು ತೊಳೆಯುವುದು, ಬಟ್ಟೆ ಹಾಕುವುದು, ಔಷಧಿ ಮತ್ತು ಆಮ್ಲಜನಕವನ್ನು ನೀಡುವುದು, ನಾಡಿಮಿಡಿತ, ರಕ್ತದೊತ್ತಡದ ಮಟ್ಟ(ಬಿಪಿ), ಸಕ್ಕರೆಯ ಮಟ್ಟ(ಶುಗರ್), ಆಮ್ಲಜನಕದ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದರಲ್ಲಿ ದಾದಿಯರು ಮುಂದಿದ್ದರು. ಇದು ದಾದಿಯರ ಕರ್ತವ್ಯವಾಗಿದ್ದರೂ ಜೀವದ ಮೇಲಿನ ಭೀತಿಗಿಂತ ಕಾಯಕದ ಮೇಲಿನ ಪ್ರೀತಿ ಹೆಚ್ಚಾಗಿದೆ. ರೋಗಿಗಳ ಜೀವ ರಕ್ಷಣೆಯೇ ಇವರಿಗೆ ಅಚ್ಚು-ಮೆಚ್ಚಾಗಿದೆ. ಒಟ್ಟಾರೆ ಹೇಳುವುದಾದರೆ ದಾದಿಯರ ಸೇವೆಯನ್ನು ಉದಾತ್ತ ಕೆಲಸವೆಂದು ಪರಿಗಣಿಸಲಾಗುತ್ತದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications