ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5000 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ನರ್ಸ್ ತಮ್ಮ ಹೆರಿಗೆ ವೇಳೆ ಸಾವು

|
Google Oneindia Kannada News

ಮುಂಬೈ, ನವೆಂಬರ್ 17: ಬರೋಬ್ಬರಿ 5000 ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದ ನರ್ಸ್ ಒಬ್ಬರು, ತಮ್ಮ ಶಿಶುವಿಗೆ ಜನ್ಮವಿತ್ತ ಕೆಲವೇ ದಿನಗಳಲ್ಲಿ ನಿಧನರಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಜ್ಯೋತಿ ಗಾಫಿ (38) ಎಂಬ ಹೆಸರಿನ ನರ್ಸ್ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದ ನರ್ಸ್ ಆಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಎರಡನೇ ಮಗುವನ್ನು ಗರ್ಭದಲ್ಲಿ ಹೊತ್ತಿದ್ದ ಜ್ಯೋತಿ ಗಾಫಿ ನವೆಂಬರ್ 1ರವರೆಗೂ ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದಾರೆ.

ನಂತರ ನ.2ರಂದು ಜ್ಯೋತಿ ಗಾಫಿ ಅವರಿಗೆ ಅದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲಾಗಿದೆ. ಆದರೆ ಹೆರಿಗೆ ನಂತರ ಜ್ಯೋತಿ ಬೈಲ್ಯಾಟರಲ್ ನ್ಯುಮೋನಿಯಾದಿಂದ ಬಳಲಿದ್ದು, ಕಳೆದ ಭಾನುವಾರ ಕೊನೆಯುಸಿರೆಳೆದಿದ್ದಾರೆ.

Maharashtra: Nurse Who Helped 500 Women Of Deliver, Dies Of Post-delivery Complications In Hingoli District

ಹಿಂಗೋಲಿ ಆಸ್ಪತ್ರೆಗೆ ಸೇರುವ ಮುನ್ನ ಎರಡು ಆಸ್ಪತ್ರೆಗಳಲ್ಲಿ ಆರು ವರ್ಷ ಕೆಲಸ ಮಾಡಿದ್ದ ಜ್ಯೋತಿ ಗಾಫಿ, ಇದುವರೆಗೆ ಸುಮಾರು 5 ಸಾವಿರದಷ್ಟು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ್ದರು. ಆದರೆ ಅವರನ್ನು ನಾವಿಂದು ಬದುಕಿಸಿಕೊಳ್ಳಲು ಆಗಲಿಲ್ಲವೆಂದು ಹಿಂಗೋಲಿ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು ನೋವಿನಿಂದ ಹೇಳಿಕೊಂಡಿದ್ದಾರೆ.

English summary
Nurse who helped 500 women of deliver, dies of post-delivery complications in Hingoli district of Maharashtra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X