Bullet Train: ದೇಶದ ಮೊದಲ 'ಬುಲೆಟ್ ಟ್ರೈನ್' ಫಸ್ಟ್ ಲುಕ್ ಇದಲ್ಲ: ರೈಲ್ವೆ ಇಲಾಖೆ

ನವದೆಹಲಿ: ದೇಶದಲ್ಲೇ ಮೊದಲು ಬುಲೆಟ್ ರೈಲು ದೇಶದ ಮುಂಬೈ ಮತ್ತು ಅಹ್ಮದಾಬಾದ್ ನಡುವೆ ಇನ್ನೊಂದು ವರ್ಷದಲ್ಲಿ ಸಂಚರಿಸಲಿದೆ. ಇತ್ತೀಚೆಗೆ ಈ ಬುಲೆಟ್ ರೈಲಿನ ಪೋಟೋವೊಂದನ್ನು ದೆಹಲಿ ರೈಲು ಭವನದ ನಾಲ್ಕನೇ ದ್ವಾರದ ಬಳಿ ಹಾಕಲಾಗಿತ್ತು. ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುಲೆಟ್ ರೈಲಿನ ಅಂತಿಮ ವಿನ್ಯಾಸದ ಫೋಟೋವನ್ನು ರೈಲ್ವೆ ಇಲಾಖೆ ಲೋಕಾರ್ಪಣೆಗೊಳಿಸಿದೆ ಎಂದೆಲ್ಲ ಸುದ್ದಿ ಓಡಾಡಿದೆ.

ಭಾರತದ ಮೊದಲ ಬುಲೆಟ್ ರೈಲು 2027ರಲ್ಲಿ ಎರಡು ಪ್ರಮುಖ ನಗರಗಳ ಮಧ್ಯೆ ಸಂಚಾರ ಮಾಡಲಿದೆ. ಹೈಸ್ಪೀಡ್ ರೈಲಿನ ಕಾರ್ಯಾಚರಣೆ ನೋಡಲು ದೇಶವೇ ಕಾಯುತ್ತಿದೆ. ಯೋಜನೆ ಅಂತಿಮ ಕೆಲಸಗಳು ಪ್ರಗತಿಯಲ್ಲಿವೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ಮಹತ್ವ ಪಡೆಕೊಂಡಿದೆ. ಇದೀಗ ರೈಲ್ವೆ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.

Viral Bullet Train Photo

ಬುಲೆಟ್ ರೈಲಿನ ಅಂತಿಮ ವಿನ್ಯಾಸವಲ್ಲ

ರೈಲ್ವೆ ಭವನದಲ್ಲಿ ಅಳವಡಿಸಲಾದ ಚಿತ್ರದಲ್ಲಿ ಕಾಣುತ್ತಿರುವ ಬುಲೆಟ್ ರೈಲಿನ ಫೋಟೊ ಇದು ಮುಂಬೈ-ಅಹ್ಮದಾಬಾದ್ ಮಾರ್ಗದಲ್ಲಿ ಸಂಚರಿಸಬೇಕಿರುವ ಬುಲೆಟ್ ರೈಲಿನ ಅಂತಿಮ ವಿನ್ಯಾಸವಲ್ಲ. ಬದಲಾಗಿ ಇದೊಂದು ಮಾದರಿಯ ಬುಲೆಟ್ ರೈಲಿನ ವಿನ್ಯಾಸವಾಗಿದೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಆದರೆ ಕೆಲವು ಮಾಧ್ಯಮಗಳು ಇದನ್ನೇ ಅಂತಿಮ ವಿನ್ಯಾಸವೆಂದು ವರದಿ ಮಾಡಿವೆ.

ನಮ್ಮ ಮೆಟ್ರೋ ಇಂಧನ ಬಿಕ್ಕಟ್ಟು, ಟ್ರಾಫಿಕ್‌ಗೆ ಪರಿಹಾರ: 3 ನಿಮಿಷಕ್ಕೊಂದು ರೈಲು, 300 ಕಿಮೀ ಜಾಲ ವಿಸ್ತರಣೆ ಅಗತ್ಯ
ನಮ್ಮ ಮೆಟ್ರೋ ಇಂಧನ ಬಿಕ್ಕಟ್ಟು, ಟ್ರಾಫಿಕ್‌ಗೆ ಪರಿಹಾರ: 3 ನಿಮಿಷಕ್ಕೊಂದು ರೈಲು, 300 ಕಿಮೀ ಜಾಲ ವಿಸ್ತರಣೆ ಅಗತ್ಯ

ಹೈಸ್ಪೀಡ್ ರೈಲು ಆರಂಭದ ಬಗ್ಗೆ ಪ್ರಯಾಣಿಕರು ಉತ್ಸುಕರಾಗಿದ್ದಾರೆ. ರೈಲ್ವೆ ಜಾಲದಲ್ಲಿ ಬುಲೆಟ್ ರೈಲು ಯೋಜನೆ ಹೆಚ್ಚಿನ ಮಹತ್ವ ಪಡೆದಿದೆ. ಹೀಗಾಗಿಯೇ ಬುಲೆಟ್ ರೈಲಿನ ಫೋಟೋವನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ ರೈಲ್ವೆ ಇಲಾಖೆ ಇದು ಪಾತಿನಿಧಿಕ ಚಿತ್ರ ಅಷ್ಟೇ ಎಂದು ಸ್ಪಷ್ಟನೆ ನೀಡಿದೆ.

MAHSR ಯೋಜನೆ ಅಪ್ಡೇಟ್ಸ್

ಮುಂಬೈ-ಅಹ್ಮದಾಬಾದ್ ಹೈಸ್ಪೀಡ್ ರೈಲು ಯೋಜನೆ (MAHSR) ಕಾಮಗಾರಿ ಅಂತಿಮಗೊಳಿಸುವ ಕೆಲಸಗಳು ಬರದಿಂದ ಸಾಗಿವೆ. ಇವೆರಡು ನಗರಗಳ ಮಧ್ಯೆ ಇರುವ 508 ಕಿಲೋ ಮೀಟರ್ ದೂರವನ್ನು ಕೇವಲ ಎರಡು ಗಂಟೆಗಳ ಒಳಗೆ (1 ಗಂಟೆ 58 ನಿಮಿಷ) ತಲುಪಲಿದೆ. ಪ್ರತಿ ಗಂಟೆಗೆ 320 ಕಿಲೋ ಮೀಟರ್ ವೇಗದಲ್ಲಿ ಬುಲೆಟ್ ರೈಲು ಸಂಚಾರ ಮಾಡಲಿದೆ. ಜಪಾನ್ ಸರ್ಕಾರದ ತಾಂತ್ರಿಕ ಮತ್ತು ಆರ್ಥಿಕ ನೆರವಿನೊಂದಿಗೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

ಸೂಪರ್‌ಫಾಸ್ಟ್ ಅಲ್ಲ, ಸೂಪರ್ ಸ್ಲೋ ರೈಲು; ಹೊಸ ಬೆಂಗಳೂರು-ಮುಂಬೈ ರೈಲಿಗೆ ಪ್ರಯಾಣಿಕರ ಟೀಕೆ
ಸೂಪರ್‌ಫಾಸ್ಟ್ ಅಲ್ಲ, ಸೂಪರ್ ಸ್ಲೋ ರೈಲು; ಹೊಸ ಬೆಂಗಳೂರು-ಮುಂಬೈ ರೈಲಿಗೆ ಪ್ರಯಾಣಿಕರ ಟೀಕೆ

ಗುಜರಾತ್, ಮಹಾರಾಷ್ಟ್ರ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ, ಹವೇಲಿನಗರ ಮಾರ್ಗವಾಗಿ ಈ ರೈಲು ಮಾರ್ಗ ಸಾಗಲಿದೆ. ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲ್ಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ಸೇರಿ ಒಟ್ಟು 12 ನಿಲ್ದಾಣಗಳು ಈ ರೈಲಿನ ವ್ಯಾಪ್ತಿಗೆ ಬರುತ್ತವೆ.

ಸಮುದ್ರದ ಆಳದ ಸುರಂಗ ಮಾರ್ಗದಲ್ಲಿ ರೈಲು ಸಂಚಾರ

ವಿಶೇಷವೆಂದರೆ ಈ ಮಾರ್ಗದಲ್ಲಿ ಸುರಂಗ ಕೊರೆಯಲಾಗಿದೆ. ಬುಲೆಟ್ ರೈಲು ಸಮುದ್ರದ ಆಳದ ಸುರಂಗ ಮಾರ್ಗವಾಗಿ ಸಂಚಾರ ನಡೆಸಲಿದೆ. 4.8 ಕಿಲೋ ಮೀಟರ್ ಸುರಂಗ ಮಾರ್ಗ ನಿರ್ಮಾಣ ಪೂರ್ಣಗೊಂಡಿದೆ. ಒಟ್ಟು 21ಕಿಲೋ ಮೀಟರ್ ಸುರಂಗ ಮಾರ್ಗವು ಸಾಗರದ ಆಳದಲ್ಲಿ ನಿರ್ಮಾಣವಾಗಲಿದೆ. ಇಲ್ಲಿ ಯಶಸ್ವಿಯಾಗುವ ತಾಂತ್ರಿಕ ಕೆಲಸಗಳು ದೇಶದಲ್ಲಿ ರೈಲ್ವೆ ಜಾಲದ ಭವಿಷ್ಯಕ್ಕೆ ನಾಂದಿ ಹಾಡುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+