Bengaluru Rain: ಬೆಂಗಳೂರು ಹವಾಮಾನ ಮುನ್ಸೂಚನೆ ಹೀಗಿದೆ

Bengaluru Weather Forecast: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ಸುರಿದ ಮಳೆಯು ಮುಂದಿನ 48 ಗಂಟೆಗಳ ಕಾಲ ಮುಂದುವರಿಯಲಿದೆ. ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ, ಕೆಲವೆಡೆ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಎರಡು ದಿನ ಬೆಂಗಳೂರು ನಗರಕ್ಕೆ 'ಯೆಲ್ಲೋ ಅಲರ್ಟ್'‌ ಘೋಷಿಸಿದೆ.

ಬ್ಯಾಟರಾಯನಪುರದಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ ಮಳೆ ಸುರಿದಿದೆ. ಉಳಿದಂತೆ ಬಾಣಸವಾಡಿ, ನಾಗಪುರ, ಹೆಬ್ಬಾಳ, ಯಲಹಂಕ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸೋಮವಾರ ಜೋರು ಮಳೆ ಸುರಿದಿದೆ. ಸಂಚಾರ ಅಸ್ತವ್ಯಸ್ತವಾಯಿತು. ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಸಿತು.

Bengaluru Rains

ಬಿಸಿಲ ಝಳಕ್ಕೆ ಸಾಕಾಗಿದ್ದ ಬೆಂಗಳೂರಿನ ಜನರು ಮುಂದಿನ ಎರಡು ದಿನ ಧಾರಾಕಾರ ಮಳೆಗೆ ಸಾಕ್ಷಿಯಾಗಲಿದ್ದಾರೆ. ಮಳೆ ತಂಪೆರೆದರೂ ಸಹಿತ ನಗರಾದ್ಯಂತ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಇದು ಜನರನ್ನು ಹೈರಾಣಾಗಿಸಲಿದೆ. ಹೆಚ್ಚಾಗಿ ಸಂಜೆ ಬರುವ ಮಳೆಯುವ ವಾಹನ ಸಂಚಾರ, ವ್ಯಾಪಾರಕ್ಕೆ ಅಡಚಣೆ ಉಂಟು ಮಾಡಲಿದೆ.

Bengaluru Weather: ಬೆಂಗಳೂರಿಗೆ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್
Bengaluru Weather: ಬೆಂಗಳೂರಿಗೆ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್

ಬೆಂಗಳೂರು ಹವಾಮಾನ, ತಾಪಮಾನ ಮುನ್ಸೂಚನೆ

ಹವಾಮಾನ ಇಲಾಖೆ ಪ್ರಕಾರ, ಗುರುವಾರವರೆಗೆ (ಮೇ 21) ರವರೆಗೆ ವ್ಯಾಪಕ ಮಳೆ ಆಗಲಿದೆ. ಈ ವೇಳೆ ನಗರದ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ 34 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ. ನಿತ್ಯ ಬೆಳಗ್ಗೆ ಮಧ್ಯಾಹ್ನವರೆಗೆ ತಾಪಮಾನ ಸಾಮಾನ್ಯವಾಗಿರಲಿದೆ. ಮಧ್ಯಾಹ್ನ ನಂತರ ಮಬ್ಬು ಕವಿದು ಮಳೆ ಆಗುವ ಸಾಧ್ಯತೆ ಇದೆ. ಕೆಲವು ಬಡಾವಣೆಗಳಲ್ಲಿ ತಡರಾತ್ರಿವರೆಗೂ ಮಳೆ ಮುಂದುವರಿಯುವ ನಿರೀಕ್ಷೆ ಇದೆ.

ಅರಬ್ಬಿ ಸಮುದ್ರದ ಆಗ್ನೇಯ ಭಾಗ ಹಾಗೂ ಬಂಗಾಳಕೊಲ್ಲಿ ನೈಋತ್ಯ ಮತ್ತು ಆಗ್ನೇಯ ಭಾಗ, ಲಕ್ಷದ್ವೀಪದ ಸಮೀಪ ಸಮುದ್ರ ಭಾಗದಲ್ಲಿ ವಾಯು ಚಂಡಮಾರುತ ಪರಿಚಲನೆ ಉಂಟಾಗಿದೆ. ಅದರ ಪ್ರಭಾವ ತಮಿಳುನಾಡು ಕರಾವಳಿ ಹಾಗೂ ಕರ್ನಾಟಕದ ಬೆಂಗಳೂರು ಸೇರಿ ಕೆಲವೆಡೆ ಉಂಟಾಗಿದೆ. ಇದರಿಂದ ಬೆಂಗಳೂರು ಸೇರಿ ವಿವಿಧ ಭಾಗಗಳಲ್ಲಿ ಮಳೆ ಚುರುಕು ಪಡೆದಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಎಷ್ಟು ಮಳೆ?

ಬ್ಯಾಟರಾಯಪುರ: 65.5 ಮಿ.ಮೀ.

ಬಾಣಸವಾಡಿ: 61.6 ಮಿ.ಮೀ.

ಎಚ್‌ಎಸ್‌ಆರ್ ಬಡಾವಣೆ : 61.5 ಮಿ.ಮೀ.

ಮನೋರಾಯನಪಾಳ್ಯ: 55.5ಮಿ.ಮೀ.

ವಿ.ನಾಗೇನಹಳ್ಳಿ: 46.5 ಮಿ.ಮೀ.

ಪುಲಕೇಶಿನಗರ: 46 ಮಿ.ಮೀ.

ಕಮ್ಮನಹಳ್ಳಿ: 43 ಮಿ.ಮೀ.

ಹೊಯ್ಸಳನಗರ: 43 ಮಿ.ಮೀ.

ಹೊರಮಾವು: 40.5 ಮಿ.ಮೀ.

ನಾಗಪುರ: 37 ಮಿ.ಮೀ.

ಕೊಡಿಗೇಹಳ್ಳಿ: 35 ಮಿ.ಮೀ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+