2005ರ ದೆಹಲಿ ಸರಣಿ ಸ್ಫೋಟದ ರೂವಾರಿಗೆ 10 ವರ್ಷ ಜೈಲು

Posted By:
Subscribe to Oneindia Kannada
ನವದೆಹಲಿ, ಫೆಬ್ರವರಿ 16: 2005ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಸರೋಜಿನಿ ನಗರ ಮತ್ತಿತರ ಪ್ರದೇಶಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟದ ರೂವಾರಿ ತಾರೀಕ್ ಅಹ್ಮದ್ ದಾರ್ ಗೆ ಇಲ್ಲಿನ ಪಟಿಯಾಲಾ ಹೌಸ್ ನ್ಯಾಯಾಲಯ 10 ವರ್ಷಗಳ ಶಿಕ್ಷೆ ನೀಡಿದೆ.

ಆದರೆ, ಇದೇ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಮೊಹಮ್ಮದ್ ರಫೀಕ್ ಶಾ ಹಾಗೂ ಮೊಹಮ್ಮದ್ ಹುಸೇನ್ ಫಾಜಿಲ್ ಅವರನ್ನು ಆರೋಪ ಮುಕ್ತಗೊಳಿಸಿದೆ. ಈ ಎಲ್ಲರೂ ಲಷ್ಕರ್ - ಎ-ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದವರೆಂಬುದೂ ಪ್ರಕರಣದಲ್ಲಿ ಸಾಬೀತಾಗಿದೆ.[ಬಾಂಬ್ ತಯಾರಿಕೆ ವೃತ್ತಿ ಹಾಗೂ ಜೀವನಾಧಾರವಾದರೆ!!]

2005 Delhi serial blast master mind sentenced for 10 years Jail

ಪ್ರಕರಣದ ಮೂರನೇ ಆರೋಪಿಯಾಗಿರುವ ತಾರೀಕ್ ಅಹ್ಮದ್ ದಾರ್, ಪ್ರಕರಣದ ವಿಚಾರಣೆ ಹಂತದಲ್ಲಿದ್ದಾಗಲೇ 12 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ.

2005ರ ಅಕ್ಟೋಬರ್ 29ರಂದು ದೆಹಲಿಯ ಸರೋಜಿನಿ ನಗರ, ಕಾಲ್ಕಾಜಿ ಹಾಗೂ ಪಹರ್ ಗಂಜ್ ಗಳಲ್ಲಿ ನಡೆದಿದ್ದ ಸರಣಿ ಸ್ಫೋಟದಲ್ಲಿ 67 ಜನರು ಸಾವಿಗೀಡಾಗಿದ್ದರಲ್ಲದೆ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Patiala house Court of Delhi has held Tariq Ahmed Dar guilty in 2005 Delhi Serial Bomb Blast and granted 10 years jail to him. But, it acquitted co-accused Mohammed Rafiq Shah and Mohammed Hussain Fazili from all charges.
Please Wait while comments are loading...