ಹಾಸನಾಂಬೆ ದೇವಾಲಯದ ಹುಂಡಿ ಲೆಕ್ಕಾಚಾರ!

Posted By: Gururaj
Subscribe to Oneindia Kannada

ಹಾಸನ, ಅಕ್ಟೋಬರ್ 23 : ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಿದೆ. ದೇವಾಲಯದ ಹುಂಡಿ ಎಣಿಕೆ ಕಾರ್ಯವೂ ಮುಕ್ತಾಯವಾಗಿದೆ. 4 ಕೋಟಿ ಆದಾಯ ಬಂದಿದ್ದು, ಹುಂಡಿಯಲ್ಲಿ ಪ್ರೇಮಪತ್ರ, ಎಟಿಎಂ ಕಾರ್ಡ್ ಪತ್ತೆಯಾಗಿದೆ...!

ಶನಿವಾರ ಹಾಸನಾಂಬೆ ದೇವಾಲಯ ಬಾಗಿಲು ಮುಚ್ಚಲಾಗಿದೆ. ಭಾನುವಾರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಿತು. ಒಟ್ಟು 4,14,63,997 ರೂ. ಆದಾಯ ದೇವಾಲಯಕ್ಕೆ ಬಂದಿದೆ. ಕಳೆದ ಬಾರಿಗಿಂತ ಒಂದೂವರೆ ಕೋಟಿ ರೂ. ಹೆಚ್ಚು ಆದಾಯ ಈ ಬಾರಿ ಬಂದಿದೆ.

ಬಾಗಿಲು ತೆರೆದ ಐತಿಹಾಸಿಕ ಹಾಸನಾಂಬೆ ದೇವಾಲಯ

ಹುಂಡಿಯಲ್ಲಿ ಪ್ರೇಮಪತ್ರ, ವಿದೇಶಿ ಕರೆನ್ಸಿ, ನಿಷೇಧಿತ 500 ರೂ. ನೋಟು, ನಾನು ಪ್ರೀತಿಸಿದ ಹುಡುಗಿ ನನಗೆ ಸಿಗುವಂತೆ ಮಾಡು ಎಂಬ ಪ್ರೇಮಪತ್ರ, ಮಗನ ಆರೋಗ್ಯದ ಸಮಸ್ಯೆ ಬಗೆಹರಿಸು ಎಂಬ ಮನವಿ ಪತ್ರಗಳು ಸಿಕ್ಕಿವೆ.

ಹಾಸಬಾಂಬೆ ಸ್ಥಳ ಪುರಾಣ ಓದಿ

ಅಕ್ಟೋಬರ್ 12ರಂದು ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲನ್ನು ತೆರೆಯಲಾಗಿತ್ತು. ಅಕ್ಟೋಬರ್ 12ರಿಂದ 21ರ ತನಕ ದೇವಿಯ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು. ಲಕ್ಷಾಂತರ ಜನರು ದೇವಿಯ ದರ್ಶನ ಪಡೆದು ಪುನೀತರಾದರು.

ಹಾಸನಾಂಬೆ ಉತ್ಸವಕ್ಕೆ ತೆರೆ, ದೇಗುಲದ ಗರ್ಭಗುಡಿಗೆ ಬೀಗ

ಹುಂಡಿಯಿಂದ ಬಂದ ಆದಾಯ

ಹುಂಡಿಯಿಂದ ಬಂದ ಆದಾಯ

ಹಾಸನಾಂಬೆ ದೇವಿಯ ಹುಂಡಿಯಲ್ಲಿ 1,10,91,383 ರೂ. ಸಂಗ್ರಹವಾಗಿದೆ. ಸಿದ್ದೇಶ್ವರ ದೇವಿಯ ಹುಂಡಿಯಲ್ಲಿ 7,80,090 ರೂ. ಸಂಗ್ರಹವಾಗಿದೆ. ವಿಐಪಿ ದರ್ಶನದ ಟಿಕೆಟ್ ಮಾರಾಟ ಸೇರಿದಂತೆ ಇತರ ಮೂಲಗಳಿಂದ 2,96,04,494 ರೂ. ಆದಾಯ ಬಂದಿದೆ.

 'ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು'

'ನಾನು ಪ್ರೀತಿಸುವ ಹುಡುಗಿ ನನಗೆ ಸಿಗುವಂತೆ ಮಾಡು'

ಹುಂಡಿಯಲ್ಲಿನ ಹಣ ಎಣಿಸುತ್ತಿದ್ದ ಸಿಬ್ಬಂದಿಗೆ ಪ್ರೇಮ ಪತ್ರವೂ ಸಿಕ್ಕಿದೆ. 'ಶ್ರೀ ಹಾಸನಾಂಬೆ ದೇವಿ ಎಂದು ಆರಂಭವಾಗುವ ಪ್ರೇಮ ಪತ್ರದಲ್ಲಿ ನನ್ನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೋ. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳು ನನಗೆ ಸಿಗುವಂತೆ ಮಾಡು' ಎಂದು ಮನವಿ ಮಾಡಲಾಗಿದೆ.

500 ರೂ. ನೋಟು ಪತ್ತೆ

500 ರೂ. ನೋಟು ಪತ್ತೆ

ಹುಂಡಿಯಲ್ಲಿ ನಿಷೇಧಿತ 500 ರೂ. ನೋಟುಗಳು, 500 ರೂ. ನೋಟುಗಳು ಪತ್ತೆಯಾಗಿವೆ. ವಿದೇಶಿ ಕರೆನ್ಸಿ, ಚಿನ್ನದ ಆಭರಣಗಳು ಪತ್ತೆಯಾಗಿವೆ. 'ಮಗನ ಆರೋಗ್ಯ ಸರಿಪಡಿಸು' ಎಂದು ತಾಯಿಯು ಬರೆದ ಪತ್ರವೂ ಸಿಕ್ಕಿದೆ.

ದೇವಾಲಯಕ್ಕೆ ಬೀಗ

ದೇವಾಲಯಕ್ಕೆ ಬೀಗ

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಆಧಿದೇವತೆ ಹಾಸನಾಂಬೆ ದೇವಿಗೆ ಧಾರ್ಮಿಕ ನಿಯಮಗಳಂತೆ ಪೂಜೆ ಸಲ್ಲಿಸಿ ಶನಿವಾರ ಮಧ್ಯಾಹ್ನ 1.39 ಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರ ಉಪಸ್ಥಿತಿಯಲ್ಲಿ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Rs 4 crore hundi donations collected in Sri Hasanamba temple, Hassan during the time of October 12 to 21, 2017. ಹಾಸನಾಂಬೆ ದೇವಾಲಯದ ಹುಂಡಿಯಲ್ಲಿ ಸಿಕ್ಕಿದ್ದೆಷ್ಟು?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ