Get Updates
Get notified of breaking news, exclusive insights, and must-see stories!

Lok Sabha Election 2024: ಹಾಸನದಲ್ಲಿ ಅಂದು ಅಜ್ಜಂದರ ನಡುವೆ ಕಾದಾಟ, ಇಂದು ಮೊಮ್ಮಕ್ಕಳ ಮಧ್ಯೆ ಸೆಣಸಾಟ

ದೇಶದಲ್ಲಿ ಲೋಕಸಭಾ ಚುನಾವಣೆಗಳ ಕಾವು ದಿನೆ ದಿನೇ ಏರುತ್ತಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಕಾರ್ಯವನ್ನು ಭರದಿಂದ ನಡೆಸಿದ್ದಾರೆ. ಇನ್ನು ಹಲವೆಡೆ ಪ್ರಚಾರ ಸಹ ಜೋರಾಗಿದೆ. ಈ ಬಾರಿ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸವಾಲು ಎಸೆಯಲಿವೆ.

ಕರ್ನಾಟಕದಲ್ಲೂ ರಾಜಕೀಯ ಕಣ ರಂಗೇರಿದೆ. ಹಲವೆಡೆ ಪ್ರಚಾರದ ಭರಾಟೆ ಚುರುಕು ಪಡೆದಿದೆ. ಈ ಬಾರಿ ಹಲವು ಕ್ಷೇತ್ರಗಳು ರಾಜ್ಯದ ಚಿತ್ತವನ್ನು ತನ್ನತ್ತ ಸೆಳೆದಿದೆ. ಅದರಲ್ಲಿ ಪ್ರಮುಖವಾಗಿ ಕನಕಪುರ, ಮೈಸೂರು, ಮಂಡ್ಯ, ಬೆಳಗಾವಿ, ಚಿಕ್ಕೋಡಿ ಹಾಗೂ ಹಾಸನ ಕ್ಷೇತ್ರಗಳ ಎಲ್ಲರ ಚಿತ್ತವನ್ನು ಕದ್ದಿವೆ. ಹಾಸನ ಏಕೆ ರಾಜ್ಯದ ಚಿತ್ತವನ್ನು ಕದ್ದಿದೆ ಎಂಬುದಕ್ಕೆ ಉತ್ತರ ಇಲ್ಲಿದೆ.

Lok Sabha Election 2024 History Repeats Itself as Battle Shifts from Grandfathers to Grandsons in Hassan

ಎಚ್‌ಡಿಡಿಗೆ ಸೋಲು

ಹಾಸನ.. ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಕರ್ಮಭೂಮಿ. ಈ ಕ್ಷೇತ್ರದಿಂದಲೇ ಗೆದ್ದು ಅವರು ಸಂಸತ್ ಪ್ರವೇಶಿಸಿದ್ದಾರೆ. ಆದರೆ ದೇವೇಗೌಡರಿಗೂ ಈ ಕ್ಷೇತ್ರದಲ್ಲಿ ಒಮ್ಮೆ ಸೋಲು ಎದುರಾಗಿತ್ತು. 1999 ಲೋಕಸಭಾ ಚುನಾವಣೆಯಲ್ಲಿ ಎಚ್‌.ಡಿ.ದೇವೇಗೌಡ ಈ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಇವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟ ಸ್ವಾಮಿ ಗೌಡ ಸ್ಪರ್ಧಿಸಿದ್ದರು.

ಈ ಚುನಾವಣೆಯಲ್ಲಿ ಎಚ್‌ಡಿ ದೇವೇಗೌಡರಿಗೆ ನಿರಾಸೆ ಕಾದಿತ್ತು. ಅಂದು ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟ ಸ್ವಾಮಿ ಗೌಡ್ 398344 ಮತಗಳನ್ನು ಪಡೆದು ಜಯದ ಮಾಲೆಯನ್ನು ಧರಿಸಿದ್ದರು. ಎಚ್‌ಡಿಡಿ 1.41 ಲಕ್ಷ ಮತಗಳ ಅಂತರದಿಂದ ಸೋಲು ಕಂಡಿದ್ದರು. ಅಂದು ಅಜ್ಜಂದರ ಕದನಕ್ಕೆ ವೇದಿಕೆಯಾಗಿದ್ದ ಈಗ ಮೊಮ್ಮಕ್ಕಳ ಕದನಕ್ಕೆ ವೇದಿಕೆಯಾಗಿದೆ.

Lok Sabha Election 2024 History Repeats Itself as Battle Shifts from Grandfathers to Grandsons in Hassan

ಪ್ರಜ್ವಲ್‌, ಶ್ರೇಯಸ್‌ ಫೈಟ್‌

ಎಚ್‌ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಪುಟ್ಟ ಸ್ವಾಮಿ ಗೌಡ್‌ರ ಮೊಮ್ಮಗ ಶ್ರೇಯಾಂಕ್ ಪಾಟೀಲ್‌. ಈ ಅಂಶದಿಂದಲೇ ಈ ಕ್ಷೇತ್ರ ಈಗ ರಾಜ್ಯದ ಗಮನವನ್ನು ತನ್ನತ್ತ ಸೆಳೆದಿದೆ. 2019ರ ಚುನವಾಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಈ ಕ್ಷೇತ್ರದಲ್ಲಿ ಪ್ರಜ್ವಲ್‌ ಜಯ ಸಾಧಿಸಿದ್ದರು.

2024ರ ಚುನಾವಣೆಯಲ್ಲಿ ಸನ್ನಿವೇಶಗಳು ಬದಲಾಗಿವೆ. ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಪ್ರಜ್ವಲ್‌ ಎರಡನೇ ಬಾರಿಗೆ ಲೋಕಸಭೆಯನ್ನು ಪ್ರವೇಶಿಸುವ ಕನಸಿನಲ್ಲಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್‌ ತಂದೆ ಎಚ್‌ಡಿ ರೇವಣ್ಣ ಅವರ ವಿರುದ್ಧ ಸ್ಪರ್ಧಿಸಿದ್ದ ಶ್ರೇಯಾಂಕ್ ಸೋಲು ಕಂಡಿದ್ದರು. ಈ ಬಾರಿ ಅವರು ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಪ್ರಜ್ವಲ್‌ ರೇವಣ್ಣ ಗ್ರಾಮಂತರ ಪ್ರದೇಶಗಳಿಗೆ ಹೋಗಿ ಅವರ ಸಮಸ್ಯೆಗಳನ್ನು ಆಲಿಸುವುದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಲ್ಲದೆ ಕಳೆದ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಬಂದಿದ್ದು ಬಿಟ್ಟರು ಮತ್ತೆ ನಮ್ಮ ಊರಿನತ್ತ ಗಮನ ಹರಿಸಿಲ್ಲ ಎಂಬ ಆರೋಪವನ್ನು ಮತದಾರರ ಮಾಡುತ್ತಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮತದಾರ ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಹಾಸನದಲ್ಲಿ ವೀರಶೈವ ಲಿಂಗಾಯತರು ಹಾಗೂ ದಾಸ ಒಕ್ಕಗಲಿರು ಹೆಚ್ಚಾಗಿದ್ದು ಇವರ ಮತ ನಿರ್ಣಾಯಕ. ಶ್ರೇಯಸ್‌ ಸಹ ಈ ಸಮಾಜದ ಮುಖಂಡರೊಂದಿಗೆ ಚೆನ್ನಗಿ ಸಂಬಂಧವನ್ನು ಹೊಂದಿದ್ದಾರೆ. ಈ ಎರಡು ಪ್ರಮುಖ ಸಮಾಜದ ಮತಗಳು ತಮ್ಮ ಪಕ್ಷಕ್ಕೆ ಸೆಳೆಯಬೇಕು ಎಂದು ಕಾಂಗ್ರೆಸ್‌ ಮುಖಂಡರು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+