ಹಾಸನಾಂಬೆ ಉತ್ಸವಕ್ಕೆ ತೆರೆ, ದೇಗುಲದ ಗರ್ಭಗುಡಿಗೆ ಬೀಗ

ಹಾಸನ, ಅಕ್ಟೋಬರ್ 21: ವರ್ಷಕ್ಕೊಂದು ಬಾರಿ ದರ್ಶನ ನೀಡೋ ಪುರಾಣ ಪ್ರಸಿದ್ಧ ಹಾಸನಾಂಬೆ ದೇವಾಲಯದ ಗರ್ಭಗುಡಿಗೆ ಇಂದು (ಶನಿವಾರ) ಬೀಗ ಹಾಕುವ ಮೂಲಕ ಈ ವರ್ಷದ ವರ್ಷದ ಉತ್ಸವಕ್ಕೆ ತೆರೆ ಬಿದ್ದಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಮ್ಮುಖದಲ್ಲಿ ಹಾಸನದ ಹಾಸನಾಂಬೆ ದೇಗುಲದ ಗರ್ಭಗುಡಿಗೆ ಬೀಗ ಹಾಕಲಾಯಿತು. ಈ ಸಂದರ್ಭದಲ್ಲಿ ಭಕ್ತರು ದೇವಿಯ ಜಯಘೋಷ ಹಾಕಿದರು. ಇದರೊಂದಿಗೆ 10 ದಿನಗಳ ವರೆಗೆ ನಡೆದ ಉತ್ಸವಕ್ಕೆ ವಿಧ್ಯುಕ್ತವಾಗಿ ತೆರೆ ಬಿತ್ತು.

ಈ ವರ್ಷ ದೀಪಾವಳಿ ಹಬ್ಬ ಪ್ರಯುಕ್ತ ಸಾಲು-ಸಾಲು ರಜೆಗಳಿದ್ದರಿಂದ ಸಹಸ್ರಾರು ಭಕ್ತರು ಹಾಸನಾಭೆ ದೇವಿಯ ದರ್ಶನ ಪಡೆದು ಪಾವನರಾದರು.

The week-long Hasanamba festival end, temple door closed today

ಅಕ್ಟೋಬರ್ 10 ರಂದು ಗುರುವಾರ ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿಯ ಬಾಗಿಲು ತೆರೆದು, ಅ.12ರಿಂದ 21ರ ತನಕ ಭಕ್ತರಿಗೆ ದೇವಿ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗಿತ್ತು.

ಈ ವರ್ಷ ಮೊದಲ ಬಾರಿಗೆ ಭಕ್ತರಿಗಾಗಿ ದಿನವಿಡೀ ತಾಯಿಯ ದರ್ಶನ ಭಾಗ್ಯವನ್ನು ಏರ್ಪಡಿಸಲಾಗಿತ್ತು. ದೇವಿಯ ದರ್ಶನ ಪಡೆಯಲು ಜಿಲ್ಲಾಡಳಿತ ವಿಶೇಷ ಪಾಸ್ ವ್ಯವಸ್ಥೆ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+