NEET Re Exam : ಮರು ಪರೀಕ್ಷಾ ಕೇಂದ್ರಗಳ ಮಾಹಿತಿ ಪ್ರಕಟಸಿದ ಎನ್ಟಿಎ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬಹುನಿರೀಕ್ಷಿತ 'ನೀಟ್-ಯುಜಿ 2026' ಮರುಪರೀಕ್ಷೆಯ ಸಿಟಿ ಇಂಟಿಮೇಷನ್ ಸ್ಲಿಪ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ವೈದ್ಯಕೀಯ ಕೋರ್ಸ್ಗಳ ಪ್ರವೇಶಾತಿಗಾಗಿ ನಡೆಯುವ ಈ ಮಹತ್ವದ ಪ್ರವೇಶ ಪರೀಕ್ಷೆ ಬರೆಯಲು ಸಜ್ಜಾಗಿರುವ ಲಕ್ಷಾಂತರ ವಿದ್ಯಾರ್ಥಿಗಳು, ಈಗ ತಮ್ಮ ಪರೀಕ್ಷಾ ಕೇಂದ್ರ ಯಾವ ನಗರದಲ್ಲಿದೆ ಎಂಬುದನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬಹುದು.
ಅಭ್ಯರ್ಥಿಗಳು ಎನ್ಟಿಎಯ ಅಧಿಕೃತ ವೆಬ್ಸೈಟ್ ಆದ http://neet.nta.nic.in ಗೆ ಭೇಟಿ ನೀಡಿ, ತಮ್ಮ ಅಪ್ಲಿಕೇಶನ್ ನಂಬರ್ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗುವ ಮೂಲಕ ಈ ಸಿಟಿ ಇಂಟಿಮೇಷನ್ ಸ್ಲಿಪ್ ಅನ್ನು ವೀಕ್ಷಿಸಬಹುದು ಹಾಗೂ ಡೌನ್ಲೋಡ್ ಮಾಡಿಕೊಳ್ಳಬಹುದು.

ಇದು ಅಡ್ಮಿಟ್ ಕಾರ್ಡ್ ಅಲ್ಲ!
ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಸಿಟಿ ಇಂಟಿಮೇಷನ್ ಸ್ಲಿಪ್ ಅನ್ನು ಕೇವಲ ವಿದ್ಯಾರ್ಥಿಗಳ ಪ್ರಯಾಣದ ಅನುಕೂಲಕ್ಕಾಗಿ ಮಾತ್ರ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ಬರೆಯಲು ಯಾವ ನಗರಕ್ಕೆ ಹೋಗಬೇಕು ಎಂದು ಮುಂಚಿತವಾಗಿ ತಿಳಿದುಕೊಂಡು, ಬಸ್ ಅಥವಾ ರೈಲು ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಇದನ್ನೇ ಪ್ರವೇಶ ಪತ್ರ ಅಥವಾ 'ಅಡ್ಮಿಟ್ ಕಾರ್ಡ್' ಎಂದು ಭಾವಿಸಬಾರದು ಎಂದು ಎನ್ಟಿಎ ಸ್ಪಷ್ಟಪಡಿಸಿದೆ. ಪರೀಕ್ಷೆಯ ದಿನಾಂಕ ಹತ್ತಿರವಾದಾಗ ಅಡ್ಮಿಟ್ ಕಾರ್ಡ್ ಅನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುತ್ತದೆ. ಅಡ್ಮಿಟ್ ಕಾರ್ಡ್ನಲ್ಲಿ ಪರೀಕ್ಷಾ ಕೇಂದ್ರದ ನಿಖರ ವಿಳಾಸ, ಸಮಯ ಮತ್ತು ಇತರ ಕಡ್ಡಾಯ ನಿಯಮಗಳ ಮಾಹಿತಿ ಇರುತ್ತದೆ.
ಹಿಂದಿನ 'ಪ್ರಶ್ನೆಪತ್ರಿಕೆ ಸೋರಿಕೆ' ವಿವಾದ
ಈ ಬಾರಿಯ ನೀಟ್ ಪರೀಕ್ಷೆ ತೀವ್ರ ಕುತೂಹಲ ಹಾಗೂ ಅಷ್ಟೇ ಬಿಗಿ ಭದ್ರತೆಯ ನಡುವೆ ನಡೆಯುತ್ತಿದೆ. ಏಕೆಂದರೆ, ಹಿಂದೆ ನಡೆದ ನೀಟ್-ಯುಜಿ ಪರೀಕ್ಷೆಯ ವೇಳೆ ಭಾರಿ ಅಕ್ರಮಗಳು ಮತ್ತು 'ಪ್ರಶ್ನೆಪತ್ರಿಕೆ ಸೋರಿಕೆ' ಪ್ರಕರಣಗಳು ದೇಶಾದ್ಯಂತ ಸಂಚಲನ ಮೂಡಿಸಿದ್ದನ್ನು ನಾವು ಸ್ಮರಿಸಬಹುದು. ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯತೆಯ ಬಗ್ಗೆಯೇ ದೊಡ್ಡ ಅನುಮಾನ ಮೂಡುವಂತಾಗಿತ್ತು. ಬಿಹಾರ, ಗುಜರಾತ್ ಸೇರಿದಂತೆ ಹಲವೆಡೆ ಪೇಪರ್ ಲೀಕ್ ಜಾಲಗಳು ಬಯಲಾಗಿದ್ದವು. ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದರು.
ಬಿಗಿ ಭದ್ರತೆ ಮತ್ತು ಎನ್ಟಿಎ ಎಚ್ಚರಿಕೆ
ಹಿಂದಿನ ಈ ಪೇಪರ್ ಲೀಕ್ ವಿವಾದಗಳಿಂದ ಪಾಠ ಕಲಿತಿರುವ ಕೇಂದ್ರ ಸರ್ಕಾರ ಮತ್ತು ಎನ್ಟಿಎ, ಈ ಬಾರಿಯ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿವೆ. ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತೆ, ತಪಾಸಣೆ ಸೇರಿದಂತೆ ಹತ್ತಾರು ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.
📢 NEET-UG 2026 | City Intimation Slip is now LIVE
— National Testing Agency (@NTA_Exams) June 7, 2026
Candidates can now check their allotted examination city for NEET-UG 2026. Log in with your Application Number and password to view and download your slip.
🔗 Visit: https://t.co/lQbedgXNVO
⚠️ Please note: This is the City… pic.twitter.com/xvtpUvJl7A
ಜೊತೆಗೆ ವಿದ್ಯಾರ್ಥಿಗಳಿಗೆ ಎನ್ಟಿಎ ವಿಶೇಷ ಸೂಚನೆ ನೀಡಿದ್ದು, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಅಧಿಕೃತ ಮಾಹಿತಿಗಾಗಿ ಕೇವಲ ಎನ್ಟಿಎಯ ವೆಬ್ಸೈಟ್ ಮತ್ತು ಅವರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳನ್ನು ಮಾತ್ರ ನಂಬಬೇಕು ಎಂದು ಸ್ಪಷ್ಟಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳು ಅಥವಾ ಹಣ ಪಡೆದು ಪ್ರಶ್ನೆಪತ್ರಿಕೆ ನೀಡುತ್ತೇವೆ ಎಂದು ಹೇಳುವ ವಂಚಕರ ಜಾಲಕ್ಕೆ ಬಲಿಯಾಗಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ. ವಿದ್ಯಾರ್ಥಿಗಳು ಈಗಲೇ ತಮ್ಮ ಸಿಟಿ ಇಂಟಿಮೇಷನ್ ಸ್ಲಿಪ್ ಪರಿಶೀಲಿಸಿ, ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿಕೊಳ್ಳಬಹುದಾಗಿದೆ.












Click it and Unblock the Notifications