ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾಮಸ್ತಕಾಭಿಷೇಕದಲ್ಲಿ ಬಾಡಿಗೆ ಬೈಕ್ ಸೇವೆ ಲಭ್ಯ

|
Google Oneindia Kannada News

ಹಾಸನ, ಜನವರಿ 16 : ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಪ್ರವಾಸಿಗರಿಗೆ ಬಾಡಿಗೆ ಬೈಕ್ ಸೇವೆ ಸಿಗಲಿದೆ. ಬೈಕ್ ಬಾಡಿಗೆಗೆ ಪಡೆದು ಶ್ರವಣಬೆಳಗೊಳದ ಸುತ್ತಮುತ್ತಲ ಸ್ಥಳಗಳು ಹಾಗೂ ಜೈನ ಬಸದಿಗಳ ವೀಕ್ಷಣೆ ಮಾಡಬಹುದಾಗಿದೆ.

ಬೆಂಗಳೂರು ಮೂಲದ ಮೆಟ್ರೋ ಬೈಕ್ ಸಂಸ್ಥೆಯು ಪ್ರವಾಸಿಗರಿಗೆ ದಿನದ ಲೆಕ್ಕದಲ್ಲಿ ದ್ವಿಚಕ್ರ ವಾಹನಗಳನ್ನು ಬಾಡಿಗೆ ನೀಡುವ ಯೋಜನೆಯನ್ನು ರೂಪಿಸಿದೆ. ವಿವಿಧ ಕಂಪನಿಯ ಸುಮಾರು 500 ಬೈಕ್‌ಗಳನ್ನು ಇದಕ್ಕಾಗಿ ಶ್ರವಣಬೆಳಗೊಳಕ್ಕೆ ತರಲಾಗುತ್ತದೆ.

ಮಹಾಮಸ್ತಕಾಭಿಷೇಕಕ್ಕೂ ಮುನ್ನ ಶ್ರವಣಬೆಳಗೊಳದಲ್ಲಿ ಮತ್ತೊಬ್ಬ ಬಾಹುಬಲಿಮಹಾಮಸ್ತಕಾಭಿಷೇಕಕ್ಕೂ ಮುನ್ನ ಶ್ರವಣಬೆಳಗೊಳದಲ್ಲಿ ಮತ್ತೊಬ್ಬ ಬಾಹುಬಲಿ

ಪ್ರತಿದಿನಕ್ಕೆ ರೂ.150 ದರದಲ್ಲಿ ವಿವಿಧ ಬಗೆಯ ಬೈಕ್‌ಗಳನ್ನು ಬಾಡಿಗೆಗೆ ನೀಡಲಾಗುತ್ತದೆ. ಬಾಡಿಗೆ ಪಡೆಯುವವರು ತಮ್ಮ ಆಧಾರ್ ಕಾರ್ಡ್ ಹಾಗೂ ವಾಹನ ಚಾಲನಾ ಪರವಾನಗಿಯನ್ನು ಹೊಂದಿರಬೇಕ.

Bike rent service during Mahamastakabhisheka

ಬಾಡಿಗೆ ಪಡೆಯುವ ಸಮಯದಲ್ಲಿ ಆಧಾರ್ ಕಾರ್ಡ್ ಹಾಗೂ ವಾಹನ ಚಾಲನಾ ಪರವಾನಗಿಯನ್ನು ಸಂಸ್ಥೆಯು ನಿಯೋಜಿಸಿರುವ ಅಧಿಕಾರಿಗಳಿಗೆ ನೀಡಿದರೆ ಅವರು ತಮ್ಮ ಬಳಿ ಇರುವ ಮೊಬೈಲ್‍ನ ಆಪ್‍ನಲ್ಲಿ ಡೌನ್‍ಲೋಡ್ ಮಾಡಿದ ನಂತರ ಬಾಡಿಗೆದಾರರಿಗೆ ಒಟಿಪಿ ಬರುತ್ತದೆ. ನಂತರ ಬೈಕ್ ಬಾಡಿಗೆಗೆ ಸಿಗಲಿದೆ.

ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಿಲ್ಲಾಡಳಿತದಿಂದ ಕ್ಯಾಬ್ ಸೇವೆಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಿಲ್ಲಾಡಳಿತದಿಂದ ಕ್ಯಾಬ್ ಸೇವೆ

24 ಗಂಟೆಗಳ ಕಾಲ ಜನರು ವಾಹನವನ್ನು ಬಾಡಿಗೆಗೆ ಬಳಸಿಕೊಳ್ಳಬಹುದಾಗಿದೆ. ಪೆಟ್ರೋಲ್ ವೆಚ್ಚವನ್ನು ಪ್ರವಾಸಿಗರು ಪಾವತಿಸಬೇಕು. ಬೈಕ್‌ಗಳಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾಗಿದ್ದು, ಕಳ್ಳತನವಾದಂತೆ ಎಚ್ಚರ ವಹಿಸಲಾಗಿದೆ.

Bike rent service during Mahamastakabhisheka

ಪ್ರವಾಸಿಗರಿಗೆ ಅನುಕೂಲವಾಗಲಿ ಎಂದು ಜಿಲ್ಲಾಡಳಿತ ಜೈನ ಬಸದಿಗಳು ಹಾಗೂ ಪ್ರವಾಸಿ ತಾಣಗಳ ನೀಲಿನಕ್ಷೆ ಇರುವ ಕೈಪಿಡಿಯನ್ನು ಸಿದ್ದಪಡಿಸಿದೆ. ಹೋಗಬೇಕಾಗಿರುವ ದಾರಿ, ಸಾಗಬೇಕಿರುವ ದೂರದ ವಿವರಗಳನ್ನು ಇದು ಹೊಂದಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಯನ್ನು ತೆರೆಯಲಾಗುತ್ತದೆ.

English summary
Tourist will get bike rent service during Mahamastakabhisheka in Shravanabelagola, Hassan. Mahamastakabhisheka will be held in the month of February 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X