ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರಿ ಪೊಲೀಸರ ಜೊತೆ ಕಾಂಗ್ರೆಸ್‌ ನಾಯಕನ ಜಟಾಪಟಿ

By ಧಾರವಾಡ
|
Google Oneindia Kannada News

Recommended Video

ಧಾರವಾಡದಲ್ಲಿ ಟ್ರಾಫಿಕ್ ಉಲ್ಲಂಘನೆ ಮಾಡಿ ಪೊಲೀಸ್ ಜೊತೆ ಜಟಾಪಟಿ | Oneindia Kannada

ಧಾರವಾಡ, ಡಿಸೆಂಬರ್ 19 : ಕಾಂಗ್ರೆಸ್ ನಾಯಕನೊಬ್ಬ ಸಂಚಾರಿ ನಿಯಮವನ್ನು ಉಲ್ಲಂಘಿಸಿ, ಸಂಚಾರಿ ಪೊಲೀಸರ ಜೊತೆ ವಾಗ್ವಾದ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಬಿಎಂಡಬ್ಲ್ಯೂ ಕಾರಿನಲ್ಲಿ ಸಂಚರಿಸುವಾಗ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಇರ್ಮಾನ್ ಕಳ್ಳಿಮನಿ ಪೊಲೀಸರ ಜೊತೆ ರಾದ್ದಾಂತ ಮಾಡಿಕೊಂಡಿದ್ದಾನೆ.

ಸಂಚಾರ ಯೋಗ್ಯ ರಸ್ತೆ ಒಡೆದು ಹೊಸ ರಸ್ತೆ ನಿರ್ಮಾಣ : ಆಕ್ರೋಶಸಂಚಾರ ಯೋಗ್ಯ ರಸ್ತೆ ಒಡೆದು ಹೊಸ ರಸ್ತೆ ನಿರ್ಮಾಣ : ಆಕ್ರೋಶ

ಮಂಗಳವಾರ ಮಧ್ಯಾಹ್ನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರ ಕಚೇರಿ ಮುಂಭಾಗದಲ್ಲಿ ಈ ರಂಪಾಟ ನಡೆದಿದೆ. ಇದಕ್ಕೆ ನೂರಾರು ಜನರು ಮೂಕ ಸಾಕ್ಷಿಯಾಗಿದ್ದರು.

Congressmen violates traffic laws in Dharwad

ಧಾರವಾಡ ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮುರುಘೇಶ ಚನ್ನಣ್ಣವರ ಅವರೊಂದಿಗೆ ವಾಗ್ವದ ಮಾಡಿಕೊಂಡಿದ್ದಾರೆ. ಅರ್ಧಗಂಟೆಗೂ ಅಧಿಕ ಕಾಲ ವಾದ-ವಿವಾದ ನಡೆದಿದೆ.

ಸಂಚಾರ ನಿಯಮ ಪಾಲಿಸದಿದ್ದರೆ ದಂಡ, ಈಶಾನ್ಯ ವಲಯ ಐಜಿಪಿ ಎಚ್ಚರಿಕೆಸಂಚಾರ ನಿಯಮ ಪಾಲಿಸದಿದ್ದರೆ ದಂಡ, ಈಶಾನ್ಯ ವಲಯ ಐಜಿಪಿ ಎಚ್ಚರಿಕೆ

ಪೊಲೀಸ್ ಅಧಿಕಾರಿಯ ಜೊತೆ ಏಕವಚನಲ್ಲಿ ಇರ್ಮಾನ್ ಗಲಾಟೆ ಮಾಡಿದ್ದರಿಂದ ಮುರುಘೇಶ ಚನ್ನಣ್ಣನವರ್ ದಾಖಲೆಗಳನ್ನು ತೋರಿಸುವಂತೆ ಸೂಚಿಸಿದರು. ಇದರಿಂದ ಇನ್ನಷ್ಟು ಕುಪಿತಗೊಂಡ ಇರ್ಮಾನ್ ಕಳ್ಳಿಮನಿ, ನಿಮ್ಮ ವಾಹನ ಚಾಲಕ ಕೂಡ ಬೆಲ್ಟ್ ಹಾಕಿರಲಿಲ್ಲ. ಅವರ ಮೇಲೆ ಕೇಸ್ ಹಾಕಿ, ಅಲ್ಲದೆ, ಅವರಿಗೆ ಮೊದಲು ಚೆನ್ನಾಗಿ ಮಾತನಾಡಲು ಕಲಿಸಿ ಎಂದು ಸಲಹೆ ನೀಡಿದರು.

ಸ್ಥಳೀಯರು ಇಬ್ಬರನ್ನು ಸಮಾಧಾನಮಾಡಿ ಪ್ರಕರಣಕ್ಕೆ ತೆರೆ ಎಳೆಯಲು ಮುಂದಾದರು. ಇರ್ಮಾನ್ ಕಳ್ಳಿಮನಿಗೆ ಕಾರು ಚಾಲನೆ ಮಾಡುವಾಗ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ದಂಡ ಪಾವತಿಸುವಂತೆ ಪೊಲೀಸರು ಸೂಚಿಸಿದರು.

ಪೊಲೀಸರಿಗೆ ದಂಡ ಕಟ್ಟಲೂ ಬಂತು ಕಾರ್ಡ್ ಸ್ವೈಪಿಂಗ್ ಸೌಲಭ್ಯಪೊಲೀಸರಿಗೆ ದಂಡ ಕಟ್ಟಲೂ ಬಂತು ಕಾರ್ಡ್ ಸ್ವೈಪಿಂಗ್ ಸೌಲಭ್ಯ

ಸಂಚಾರ ನಿಯಮ ಉಲ್ಲಂಘನೆ, ಸೀಟ್ ಬೆಲ್ಟ್ ಧರಿಸದಿರುವುದು, ಎಮಿಶನ್ ಟೆಸ್ಟ್ ಪ್ರಮಾಣ ಪತ್ರ ಹಾಜರು ಪಡಿಸದ ಹಿನ್ನಲೆಯಲ್ಲಿ ದಂಡ ಕಟ್ಟಲು ಸೂಚಿಸಿದರು. ಆದರೆ, ನನ್ನ ಬಳಿ ಹಣವಿಲ್ಲ ಮೋದಿ ಸರ್ಕಾರ ಡಿಜಿಟಲ್ ಇಂಡಿಯಾ ಮಾಡುತ್ತಿದೆ. ಹೀಗಾಗಿ ನೀವು ಕಾರ್ಡ್ ಸ್ವೈಪ್‌ ಮಾಡಿಕೊಳ್ಳಿ ಮಾಡಿಕೊಳ್ಳಿ ಎಂದು ಮತ್ತೆ ತಗಾದೆ ತೆಗೆದದರು.

ಇದರಿಂದ ಇನ್ನಷ್ಟು ಕಂಗಾಲಾದ ಪೊಲೀಸರು, ಕೋರ್ಟಿಗೆ ಹೋಗಿ ದಂಡ ಕಟ್ಟುವಂತೆ ಸೂಚಿಸಿ ರಶೀದಿ ನೀಡಿದರು.

English summary
KPCC minority cell state vice president Imran Kallimani violate traffic laws in Dharwad on December 19, 20107 and denied to pay penalty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X