ಸಂಚಾರ ನಿಯಮ ಪಾಲಿಸದಿದ್ದರೆ ದಂಡ, ಈಶಾನ್ಯ ವಲಯ ಐಜಿಪಿ ಎಚ್ಚರಿಕೆ

Posted By: Nayana
Subscribe to Oneindia Kannada
ಸಂಚಾರ ನಿಯಮ ಪಾಲಿಸದಿದ್ದರೆ ದಂಡ | Oneindia Kannada

ಕಲಬುರಗಿ, ನವೆಂಬರ್ 21 : ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಕಾರು ಚಾಲಕರು ಸೀಟ್ ಬೆಲ್ಟ್ ಧರಿಸಿಯೇ ಕಾರು ಚಲಾಯಿಸಬೇಕು ಇದು ನವೆಂಬರ್ 24ರಿಂದಲೇ ಅನ್ವಯವಾಗುತ್ತದೆ. ಪಾಲಿಸದಿದ್ದರೆ ದಂಡ ಕಟ್ಟಬೇಕಾಗುತ್ತದೆ ಎಂದು ಕಲಬುರಗಿ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ, 25 ನಿಮಿಷದ ವಿಡಿಯೋ ನೋಡುವ ಶಿಕ್ಷೆ

ಆಟೋ ಚಾಲಕರು ಕಡ್ಡಾಯವಾಗಿ ತಮ್ಮ ಸಮವಸ್ತ್ರ ಹಾಕಿರಬೇಕು. ಇದರ ಜತೆಗೆ ಪ್ರತಿಯೊಬ್ಬರು ತಮ್ಮ ಡ್ರೈವಿಂಗ್ ಲೈಸನ್ಸ್ ಹೊಂದಿರಬೇಕು, ವಾಹನಗಳ ದಾಖಲೆಯ ಪ್ರತಿಯಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ನಿಗದಿತ ಮಿತಿಯಲ್ಲಿ ವಾಹನಗಳ ಸ್ಪೀಡ್ ಇರಬೇಕು. ನಿಯಮ ಪಾಲಿಸದಿದ್ದರೆ ದಂಡ ಕಟ್ಟಲು ಸಿದ್ಧರಾಗಿ ಎಂದು ಕಲಬುರಗಿ, ಯಾದಗಿರಿ, ಬೀದರ್ ಜನರಿಗೆ ಅಲೋಕ್ ಕುಮಾರ್ ಹೇಳಿದರು.

ಟ್ರಾಫಿಕ್ ನಿಯಮ ಉಲ್ಲಂಘಿಸಿ, ರಾಜ್ಯಾದ್ಯಂತ 'ಕ್ಯಾಶ್ ಲೆಸ್' ದಂಡ ಕಟ್ಟಿ

Helmet is compulsory for two wheel riders

ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಈಶಾನ್ಯ ಪೊಲೀಸ್ ವಲಯದ ಮೂರು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತತ್ಇದೆ. ಹೀಗಾಗಿ ಸಾರ್ವಜನಿಕರು ಕಾನೂನು ಪಾಲಿಸುವದರ ಜತೆಗೆ ತಮ್ಮ ಜೀವವನ್ನು ಉಳಿಸಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮೈಸೂರಿನಲ್ಲಿ ಆಪರೇಷನ್ ಚೀತಾದಿಂದ ಅರಿವು ಕಾರ್ಯಕ್ರಮ

ಕಲಬುರಗಿ, ಬೀದರ್, ಯಾದಗಿರಿ ಜಿಲ್ಲಾ ಕೇಂದ್ರಗಳ ಜತೆಗೆ ಜೇವರ್ಗಿ, ಶಹಪೂರ್, ಸುರಪುರ ಪಟ್ಟಣಗಳಿಗೂ ಇದು ಅನ್ವಯವಾಗುತ್ತದೆ. ಈಗಾಗಲೇ ಸುಗಮ ರಸ್ತೆ ಸಂಚಾರಕ್ಕಾಗಿ ಇದ್ದ ಅಡೆತಡೆಗಳನ್ನು ನಿವಾರಸಿಲಾಗಿದೆ. ಇನ್ನು ಸಾರ್ವಜನಿಕರು ಕುಂಟು ನೆಪಗಳನ್ನು ಹೇಳದೆ ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಬೇಕು ಎಂದು ಸೂಚನೆ ನೀಡಿದರು.

ಈಗಾಗಲೇ ಮೂರು ಜಿಲ್ಲೆಗಳಲ್ಲಿ ವೇಗದ ಚಾಲನೆ, ಕುಡಿದು ವಾಹನ ಚಾಲನೆ ಮಾಡುವದು, ಹೆಲ್ಮೆಟ್ ಧರಿಸದೇ ಚಾಲನೆ ಮಾಡುವದು ಸೇರಿದಂತೆ ಅನೇಕ ಪ್ರಕರಣಗಳಲ್ಲಿ ದಂಡ ಹಾಕಲಾಗುತ್ತಿದೆ. ಆದ್ರು ಕೂಡಾ ಸಾರ್ವಜನಿಕರು ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಹೀಗಾಗಿ ನವೆಂಬರ್ 24 ರಿಂದ ಸಂಚಾರಿ ನಿಮಯಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
North east IGP Alok Kumar passed an order to make compulsory helmet for two wheel riders and seat belt for car drivers.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ