ಮೈಸೂರು: ಇಂದು ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ; ಡಾ. ರಾ.ಸ ಸತ್ಯನಾರಾಯಣ ಶತಮಾನೋತ್ಸವ

ಮೈಸೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಬದ್ರಹ್ಮವಿದ್ಯಾ ವತಿಯಿಂದ ಇಂದು ಶನಿವಾರ (ಮೇ 9ರಂದು) 'ಭಾರತೀಯ ಸಂಗೀತಶಾಸ್ತ್ರ ದಿನಾಚರಣೆ' ಹಾಗೂ ಡಾ. ರಾ ಸತ್ಯನಾರಾಯಣ ಅವರ 'ಶತಮಾನೋತ್ಸವ'ದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರು ವಿಶ್ವ ವಿದ್ಯಾಲಯದ ನಾಲ್ವಡಿ ಕೃಷ್ಣರಾಜ ಒಡೆಯರ ಭವನದಲ್ಲಿ (ಸೆನೆಟ್ ಹಾಲ್) ಸಂಜೆ 5.30ಕ್ಕೆ ಜರುಗಲಿದೆ.

ಶತಮಾನ ರಾಸ ಅಭಿವೃದ್ಧಿ ಪೂರ್ವದ ಉದ್ಘಾಟನೆ, ಸನ್ಮಾನ ಹಾಗೂ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಜರುಗಲಿವೆ. ಸಂಜೆ 5.30ರಿಂದ 6.15ರವರೆಗೆ ಮಹಾಮಹೋಪಾಧ್ಯಾಯ ಡಾ.ರಾ.ಸ ಸತ್ಯಾನಾರಯಣರ ವಿಶೇಷ ಕೃತಿಗಳ ಗೋಷ್ಠಿ ಗಾಯನ ನಡೆಯಲಿದೆ.

Mysuru

ಡಾ.ಅಹಲ್ಯ ಶರ್ಮರಿಂದ ಉದ್ಘಾಟನೆ

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸಂಗೀತ ವಿಶ್ವ ವಿದ್ಯಾಲಯದ ಕುಲಪತಿ ಡಾ.ಅಹಲ್ಯ ಶರ್ಮ ಅವರು ನೆರವೇರಿಸಲಿದ್ದಾರೆ. ವಾರಣಾಸಿಯ ಐಜಿಎನ್‌ಸಿಎ ಮಾಜಿ ನಿರ್ದೇಶಕರಾದ ಡಾ.ವಿಜಯ್ ಶಂಕರ್ ಶುಕ್ಲಾ ಅವರ ಅತಿಥಿ ಸಾನಿಧ್ಯವಿರಲಿದೆ. ಹಂಪಿಯ ಆನೆಗೊಂದಿ ಸಂಸ್ಥಾನದ ಪಟ್ಟದ ರಾಜ ಮಹಾರಾಜ ಶ್ರೀಕೃಷ್ಣ ದೇವರಾಯ, ಎಸ್‌ವಿವೈಎಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸವಿತಾ ಸುಲುಗೋಡು, ಮೈಸೂರಿನ ಮಾಜಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ, ಮೈಸೂರು ಅರಮನೆ ಬೋರ್ಡ್ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಲಿದ್ದಾರೆ.

Rain Alert: ಕರ್ನಾಟಕದ ಈ ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರೀ ಮಳೆ, ಉಳಿದೆಡೆ ಒಣಹವೆ ಮುನ್ಸೂಚನೆ
Rain Alert: ಕರ್ನಾಟಕದ ಈ ಜಿಲ್ಲೆಗಳಿಗೆ ಬಿರುಗಾಳಿ ಸಹಿತ ಭಾರೀ ಮಳೆ, ಉಳಿದೆಡೆ ಒಣಹವೆ ಮುನ್ಸೂಚನೆ

ಸಭಾಧ್ಯಕ್ಷರಾಗಿ ಖ್ಯಾತ ವಾಗ್ಗೇಯಕಾರ-ವೈಣಿಕರು ಡಾ.ರಾ.ವಿಶ್ವೇಶ್ವರನ್, ಶ್ರೀವಿದ್ಯಾಶಾಸ್ತ್ರಸೂರೀ ಪ್ರಶಸ್ತಿ ಪುರಸ್ಕೃತರಾದ ವಿದ್ವಾನ್ ರಾಜೇಶ್ವರಶಾಸ್ತ್ರಿ ಜೋಶಿ, ಸಂಸ್ಮರಣ ಪ್ರಶಸ್ತಿ ಪುರಸ್ಕೃತರಾದ ಡಾ.ವಸುಂಧರಾ ದೊರೆಸ್ವಾಮಿ (ಭರತನಾಟ್ಯ), ವಿದ್ವಾನ್ ಅನೂರು ಅನಂತ ಕೃಷ್ಣಶರ್ಮ (ಕರ್ನಾಟಕ ಸಂಗೀತ), ಡಾ. ಗ್ವೀಡೋ ಜಾಂಡರೀಗೋ (ಭಾರತೀಯ ಶಾಸ್ತ್ರ) ಇವರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಟ್ಯಗುರು ಡಾ. ಆಲೋಕಾ ಕನುಂಗೋ, ಸಂಗೀತ ವಿದ್ವಾನ್ ಡಾ.ಶ್ರೀಕಾಂತಂ ನಾಗೇಂದ್ರಶಾಸ್ತ್ರಿ, ವೀಣಾವಿದ್ವಾನ್ ಮಧುಕರಂ ಪ್ರಶಾಂತ್ ಅಯ್ಯಂಗಾರ್, ಡಿವಿಜಿ ಬಳಗ ಪ್ರತಿಷ್ಠಾನ ಸಂಚಾಲಕ ಶ್ರೀಕನಕರಾಜು ಅವರ ಉಪಸ್ಥಿತಿ ಇರಲಿದೆ.

ದಿಗ್ಗಜರೊಡನೆ ಫೋಟೋ ಕ್ಲಿಕ್ಕಿಸಿಕೊಳ್ಳಿ..

ಇನ್ನೂ ಸಾಂಸ್ಕೃತಿಕ ದಿಗ್ಗಜರೊಡನೆ ನಿಮ್ಮದೊಂದು ನೆನಪಿನ ಚಿತ್ರಕ್ಕೂ ಅವಕಾಶ ಇರಲಿದ್ದು, ಮಹಾರಾಜರು ಡಾ.ರಾ ಸತ್ಯನಾರಾಯಣ ಮತ್ತು ಡಿ.ವಿ.ಜಿ ಇವರೊಂದಿಗೆ ಛಾಯಾಚಿತ್ರ ಸೆರೆಹಿಡಿಯಲು ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅಂದು ಸಂಜೆ ಚಹಾ, ಕಾಫಿ ಮತ್ತು ರಾತ್ರಿ ಊಟದ ವ್ಯವಸ್ಥೆ ಸಹ ಮಾಡಲಾಗಿದೆ. ಸಂಗೀತಪ್ರಿಯರು ಈ ಅವಕಾಶ ತಪ್ಪಿಸಿಕೊಳ್ಳದೇ ಪಾಲ್ಗೊಳ್ಳಬೇಕೆಂದು ಎಂದು ಬ್ರಹ್ಮವಿದ್ಯಾ ಪ್ರಕಟಣೆಯಲ್ಲಿ ಕೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+