Bengaluru Power Cut: ಭಾನುವಾರ ಬೆಂಗಳೂರಿನ ಈ ಭಾಗಗಳಲ್ಲಿ ಕರೆಂಟ್ ಕಟ್, ಇಲ್ಲಿದೆ ವಿವರ
ಬೆಂಗಳೂರು: ವಾರಾಂತ್ಯದ ರಜೆಯ ಮಜಾ ಕಳೆಯಲು ಅಥವಾ ಮನೆಯಲ್ಲಿಯೇ ಉಳಿದು ನೆಮ್ಮದಿಯಾಗಿ ಕಾಲ ಕಳೆಯಲು ಯೋಚಿಸುತ್ತಿರುವ ಬೆಂಗಳೂರಿಗರಿಗೆ ಬೆಸ್ಕಾಂ (BESCOM) ತುರ್ತು ಕಾಮಗಾರಿಯ ಬಿಸಿ ತಟ್ಟಲಿದೆ. ಭಾನುವಾರ (ಮೇ 10) ರಾಜಧಾನಿ ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬರೋಬ್ಬರಿ 70ಕ್ಕೂ ಅಧಿಕ ಬಡಾವಣೆಗಳಲ್ಲಿ ಕರೆಂಟ್ ಇರುವುದಿಲ್ಲ.
ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಾಲಹಳ್ಳಿ ಹಾಗೂ ಸೊಲ್ಲದೇವನಹಳ್ಳಿ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ. ದಿನವಿಡೀ ಕರೆಂಟ್ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ನೀರು ಸರಬರಾಜು ಸೇರಿದಂತೆ ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗದಂತೆ ಮೊದಲೇ ಸಿದ್ಧತೆ ಮಾಡಿಕೊಳ್ಳಲು ಬೆಸ್ಕಾಂ ಮನವಿ ಮಾಡಿದೆ.

ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ? ಇಲ್ಲಿದೆ ವಿವರ
ಜಾಲಹಳ್ಳಿ ಉಪಕೇಂದ್ರದ ವ್ಯಾಪ್ತಿ
ಜಾಲಹಳ್ಳಿ ವಿಭಾಗದ 66/11 ಕೆ.ವಿ ಕೆ.ಎಚ್.ಬಿ ಸಬ್ ಸ್ಟೇಷನ್ (ಉಪಕೇಂದ್ರ) ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯ ನಡೆಯಲಿದೆ. ಹೀಗಾಗಿ ಗರುಡಾ ಮಾಲ್, ಪುಟ್ಟೇನಹಳ್ಳಿ, ಪಾವನಿ ರೆಸಿಡೆನ್ಸಿ, ಸಿಂಟಿಲ್ಲಾ ಅಪಾರ್ಟ್‌ಮೆಂಟ್, ಯಲಹಂಕ ಇಂಡಸ್ಟ್ರಿಯಲ್ ಏರಿಯಾ, ಪ್ರೆಸ್ಟೀಜ್ ಗಾರ್ಡನ್ ಬಾಯ್ ವಿಲ್ಲಾಸ್, ಚಿಕ್ಕಬೊಮ್ಮಸಂದ್ರ, ಅಲ್ಲಾಳಸಂದ್ರ, ಯಲಹಂಕ 'ಬಿ' ಸೆಕ್ಷನ್, ಜೆಪಿಎನ್ ಕಾಲೋನಿ, ದೊಡ್ಡಬಳ್ಳಾಪುರ ಮುಖ್ಯರಸ್ತೆ, ಐವಿಆರ್‌ಐ (IVRI), ಎಸ್‌ಎಫ್‌ಎಸ್ (SFS) 7ನೇ ಹಂತದ ಕೈಗಾರಿಕಾ ಪ್ರದೇಶ, ಚಿತ್ರಾ ಲೇಔಟ್, ಅಟ್ಟೂರು ಲೇಔಟ್, ಸಿಕ್ಯೂಎಎಲ್ (CQAL) ಲೇಔಟ್ ಹಾಗೂ ಬಿಎಂಟಿಸಿ ಪುಟ್ಟೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸೊಲ್ಲದೇವನಹಳ್ಳಿ ಉಪಕೇಂದ್ರದ ವ್ಯಾಪ್ತಿ
66/11 ಕೆ.ವಿ ಸೊಲ್ಲದೇವನಹಳ್ಳಿ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಬಹುತೇಕ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ. ಪ್ರಮುಖವಾಗಿ ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಹೆಸರಘಟ್ಟ, ಬಿಳಿಜಾಜಿ, ದ್ವಾರಕಾನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿನಗರ, ಬ್ರದರ್ಸ್ ಕಾಲೋನಿ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಸಾಸುವೆಘಟ್ಟ, ಬಜ್ಜಪ್ಪ ಲೇಔಟ್, ಶಿವಕುಮಾರ ಸ್ವಾಮೀಜಿ ಲೇಔಟ್, ಗುಡ್ಡದಹಳ್ಳಿ, ದಾಸೇನಹಳ್ಳಿ, ತೋಟಗೆರೆ ಬಸವಣ್ಣ ದೇವಸ್ಥಾನ, ಹೊಸಹಳ್ಳಿ ಪಾಳ್ಯ, ಸಿಡಿಪಿಒ, ಡ್ಯಾನಿಶ್ ಫಾರ್ಮ್, ಕೆಎಂಎಫ್, ಸೋಮಶೆಟ್ಟಿಹಳ್ಳಿ, ಗಾಣಿಗರಹಳ್ಳಿ, ಕೆರೆಗುಡ್ಡದಹಳ್ಳಿ ಲೈನ್ ಫೀಡರ್ ವ್ಯಾಪ್ತಿಯ ಪ್ರದೇಶಗಳು ಕತ್ತಲಲ್ಲಿ ಮುಳುಗಲಿವೆ.
ಅಲ್ಲದೆ, ಕೆ.ಟಿ.ಪುರ, ಐಐಎಚ್‌ಆರ್, ಮಠಕೂರು, ಐವರಕೊಂಡಪುರ, ಸೀತಕೆಂಪನಹಳ್ಳಿ, ರಾಜ್ಯ ಮೀನುಗಾರಿಕೆ ಇಲಾಖೆ ಪ್ರದೇಶ, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೇನಹಳ್ಳಿ ಶಿವಕೋಟೆ ಗ್ರಾಮ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿವೇಹಳ್ಳಿ, ಹುರುಳಿಚಿಕ್ಕನಹಳ್ಳಿ, ಕುರುಬರಹಳ್ಳಿ, ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ, ಬೈಲಕೆರೆ, ಆಚಾರ್ಯ ಕಾಲೇಜು ಮುಖ್ಯರಸ್ತೆ, ಅಚ್ಯುತ್ ನಗರ, ಸೋಲದೇವನಹಳ್ಳಿ ಹಾಗೂ ಸಾಸುವೆಘಟ್ಟದಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ವಿದ್ಯುತ್ ಸೇವೆ ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಜೆಯ ದಿನವಾದ್ದರಿಂದ ಮನೆಯಲ್ಲಿರುವವರು ಮುಂಚಿತವಾಗಿಯೇ ಕುಡಿಯುವ ನೀರು ಹಾಗೂ ಅಗತ್ಯ ವಿದ್ಯುತ್ ಸಾಧನಗಳನ್ನು ಚಾರ್ಜ್ ಮಾಡಿಕೊಳ್ಳುವುದು ಉತ್ತಮ. ಸಂಜೆ 6 ಗಂಟೆಯ ಬಳಿಕ ಎಂದಿನಂತೆ ವಿದ್ಯುತ್ ಸರಬರಾಜು ಸುಗಮಗೊಳ್ಳಲಿದೆ.












Click it and Unblock the Notifications