Neha Hiremath: ನನ್ನ ಮಗನಿಗೆ ಶಿಕ್ಷೆಯಾಗಲಿ, ಕರ್ನಾಟಕ ಜನತೆಗೆ ಕ್ಷಮೆ ಕೋರಿ ಕಣ್ಣೀರಿಟ್ಟ ಫಯಾಜ್ ತಾಯಿ
ಹುಬ್ಬಳ್ಳಿ, ಏಪ್ರಿಲ್ 21: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನೇಹಾ ಪರ ನ್ಯಾಯಕ್ಕಾಗಿ ತೀವ್ರ ಹೋರಾಟ ನಡೆಯುತ್ತಿದ್ದು, ಹಂತಕ ಫಯಾಜ್‌ಗೆ ಕಠಿಣ ಶಿಕ್ಷೆಯಾಗಲಿ ಎಂದು ತೀವ್ರ ಆಗ್ರಹಿಸುತ್ತಿದ್ದಾರೆ.
ನೇಹಾ ಮನೆಯಲ್ಲಿ ದುಃಖ ಮಡುಗಟ್ಟಿದ್ದರೆ, ಮತ್ತೊಂದೆಡೆ ಆರೋಪಿ ಫಯಾಜ್ ಮನೆಯಲ್ಲಿ ಪಶ್ಚಾತ್ತಾಪ ಮಡುಗಟ್ಟಿದೆ. ನೇಹಾಳ ಸಾವಿಗೆ ಕಣ್ಣೀರು ಹಾಕಿರುವ ಫಯಾಜ್ ತಾಯಿ, ಬಹಿರಂಗವಾಗಿ ಕೈ ಮುಗಿದು ಕರ್ನಾಟಕ ಜನತೆಗೆ ಕ್ಷಮೆ ಕೋರಿದ್ದಾರೆ.

ನನ್ನ ಮಗ ಮಾಡಿದ ತಪ್ಪಿಗೆ ನಾನು ಕರ್ನಾಟಕ ಜನತೆಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ. ನಮ್ಮನ್ನು ಕ್ಷಮಿಸಿ. ನಾನು ನೇಹಾಳ ತಂದೆ, ತಾಯಿಯ ಬಳಿಯೂ ಕ್ಷಮೆ ಕೇಳುತ್ತೇನೆ. ನೇಹಾಳ ತಂದೆ, ತಾಯಿಗೆ ಎಷ್ಟು ದುಃಖ ಆಗಿದೆ ಎನ್ನುವುದು ನನಗೆ ಅರ್ಥವಾಗುತ್ತದೆ. ನನ್ನ ಮಗಳು ಬೇರೆ ಅಲ್ಲ. ನೇಹಾ ಕೂಡ ಬೇರೆ ಅಲ್ಲ. ನನ್ನ ಮಗ ಮಾಡಿರುವುದು ತಪ್ಪು. ಯಾವ ಮಕ್ಕಳು ಮಾಡಿದ್ದರೂ ತಪ್ಪು ತಪ್ಪೇ. ಕಾನೂನಿನ ಪ್ರಕಾರ ಯಾವ ಶಿಕ್ಷೆಯಾಗಬೇಕೋ ನನ್ನ ಮಗನಿಗೆ ಶಿಕ್ಷೆಯಾಗಲಿ ಎಂದಿದ್ದಾರೆ.
ಫಯಾಜ್ ತುಂಬಾ ಚೆನ್ನಾಗಿ ಓದುತ್ತಿದ್ದ. ಲವ್‌ನಲ್ಲಿ ಬಿದ್ದು ಎಲ್ಲಾ ಹಾಳು ಮಾಡಿಕೊಂಡ. ಪ್ರೀತಿ, ಪ್ರೇಮದಲ್ಲಿ ಬಿದ್ದ ಮೇಲೆ ಅವನು ತಲೆಕೆಡಿಸಿಕೊಂಡಿದ್ದ. ಒನ್ ಸೈಡ್ ಲವ್ ಅಂತೂ ಅಲ್ಲ. ಇಬ್ಬರಲ್ಲೂ ಪ್ರೀತಿ ಇತ್ತು. ಯಾವ ಹುಡುಗಿ ಜೊತೆನೂ ತಾನಾಗಿಯೇ ಮಾತನಾಡುವನಲ್ಲ ಅವನು. ಆ ಹುಡುಗಿನೂ ತುಂಬಾ ಒಳ್ಳೆ ಹುಡುಗಿ. ಮಗನಿಂದ ಆದ ತಪ್ಪಿಗೆ ಶಿಕ್ಷಕಿಯಾಗಿ ನಾನು ತಲೆಬಾಗಿಸುವಂತಾಗಿದೆ. ನನ್ನ ಮಗ ತಪ್ಪು ಮಾಡಿದ್ದಾನೆ. ಅವನಿಗೆ ಶಿಕ್ಷೆಯಾಗಲಿ. ಕಾನೂನಿನ ಪ್ರಕಾರ ಅವನಿಗೆ ಯಾವ ಶಿಕ್ಷೆಯಾಗಬೇಕು ಆಗಲಿ ಎಂದು ಫಜಾಯ್ ತಾಯಿ ಕೂಡ ಒತ್ತಾಯಿಸುತ್ತಿದ್ದಾರೆ.












Click it and Unblock the Notifications