ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೃಂಗೇರಿ ಆಸಿಡ್ ದಾಳಿ ಪ್ರಕರಣ, ಜೀವಾವಧಿ ಶಿಕ್ಷೆ, 5 ಲಕ್ಷ ದಂಡ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 15; ಶೃಂಗೇರಿಯಲ್ಲಿ ಮಹಿಳೆ ಮೇಲೆ ಆಸಿಡ್ ದಾಳಿ ನಡೆಸಿದ್ದ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2015ರ ಏಪ್ರಿಲ್‌ನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ಮೇಲೆ ಆಸಿಡ್ ದಾಳಿ ಮಾಡಲಾಗಿತ್ತು.

ಚಿಕ್ಕಮಗಳೂರು ಎರಡನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಲಯ 4 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ಮಂಗಳವಾರ ಆರೋಪಿಗಳ ಆರೋಪ ಸಾಬೀತಾಗಿತ್ತು. ಗುರುವಾರ ಶಿಕ್ಷೆ ಪ್ರಕಟಿಸಲಾಗಿದೆ.

Stories Of Strength; ಕೊರೊನಾ ರೋಗಿಗಳಿಗೆ ಹುರುಪು ತುಂಬುತ್ತಿರುವ ಆಸಿಡ್ ದಾಳಿ ಸಂತ್ರಸ್ತರು...Stories Of Strength; ಕೊರೊನಾ ರೋಗಿಗಳಿಗೆ ಹುರುಪು ತುಂಬುತ್ತಿರುವ ಆಸಿಡ್ ದಾಳಿ ಸಂತ್ರಸ್ತರು...

ಏಪ್ರಿಲ್ 18, 2015ರಲ್ಲಿ ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಸುಮನ ಎಂಬುವರು ಮದುವೆ ಆಗಲು ನಿರಾಕರಿಸಿದ್ದಕ್ಕೆ ಆಸಿಡ್ ದಾಳಿ ನಡೆಸಲಾಗಿತ್ತು. ಈ ಪ್ರಕರಣದಲ್ಲಿ ಗಣೇಶ್, ವಿನೋದ್, ಮಹಮದ್ ಕಬೀರ್, ಅಬ್ದುಲ್ ಮಜೀದ್ ಆರೋಪ ಸಾಬೀತಾಗಿದೆ.

ಆಸಿಡ್ ದಾಳಿ ಸಂತ್ರಸ್ತೆಯರಿಗೆ ಉತ್ತರಾಖಂಡ್ ಸರ್ಕಾರದಿಂದ ಮಾಸಿಕ ಪಿಂಚಣಿಆಸಿಡ್ ದಾಳಿ ಸಂತ್ರಸ್ತೆಯರಿಗೆ ಉತ್ತರಾಖಂಡ್ ಸರ್ಕಾರದಿಂದ ಮಾಸಿಕ ಪಿಂಚಣಿ

 Sringeri Acid Attack Case 4 Convicts Get Life Imprisonment

ಸುಮನ ಮೇಲೆ ಮನೆಯ ಬಳಿ ಆಸಿಡ್ ದಾಳಿ ನಡೆಸಲಾಗಿದ್ದು, ಮಹಿಳೆಗೆ ಗಂಭೀರ ಗಾಯಗಳಾಗಿದ್ದವು. ಪ್ರಕರಣ ಸಂಬಂಧ ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆಗಿನ ವೃತ್ತ ನಿರೀಕ್ಷಿಕ ಸುಧೀರ್ ಹೆಗ್ಡೆ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆಸಿಡ್‌ ದಾಳಿ, 25 ಜನ ಗಾಯಾಳುಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆಸಿಡ್‌ ದಾಳಿ, 25 ಜನ ಗಾಯಾಳು

Recommended Video

Sandesh Prince- ಸಾಕ್ಷ್ಯ ಬೇಕು ಅಂದ್ರೆ CCTV ಫೂಟೇಜ್ ಚೆಕ್ ಮಾಡಿ! | Oneindia Kannada

ನ್ಯಾಯಾಧೀಶರಾದ ಮಂಜುನಾಥ ಸಂಗ್ರೇಶಿ ಗುರುವಾರ ತೀರ್ಪು ನೀಡಿದ್ದು, ವಕೀಲರಾದ ಮಮತಾ ಬಿ. ಎಸ್. ವಾದ ಮಂಡಿಸಿದ್ದರು. ಸತತ ಆರು ವರ್ಷಗಳ ಬಳಿಕ ಸುದೀರ್ಘ ವಿಚಾರಣೆ ನಂತರ ನ್ಯಾಯಲಯ ತೀರ್ಪು ನೀಡಿದೆ.

English summary
Chikkamagaluru court sentenced to life imprisonment and fined Rs 5 lakh to each convicts in the acid attack case of Sringeri. Incident reported in 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X