ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸಿಡ್ ದಾಳಿ ಸಂತ್ರಸ್ತೆಯರಿಗೆ ಉತ್ತರಾಖಂಡ್ ಸರ್ಕಾರದಿಂದ ಮಾಸಿಕ ಪಿಂಚಣಿ

By Coovercolly Indresh
|
Google Oneindia Kannada News

ಉತ್ತರಾಖಂಡ್, ಜನವರಿ 16: ಇಂದು ದೇಶದಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ಬಿಗಿ ಕಾನೂನುಗಳಿದ್ದರೂ ಮಹಿಳೆಯರ ಮೇಲೆ ನಡೆಯುತ್ತಿರುವ ಆಗುತ್ತಿರುವ ದೌರ್ಜನ್ಯಗಳೇನು ಕಡಿಮೆ ಆಗಿಲ್ಲ.

ಪ್ರತಿಯೊಬ್ಬ ಪುರುಷನ ಜನನಕ್ಕೆ ಹೆಣ್ಣು ಕಾರಣವಾಗಿದ್ದರೂ, ಅದೇ ರೀತಿಯಲ್ಲಿ ಪ್ರತಿ ಮನೆಯಲ್ಲಿ ಹೆಣ್ಣು ಇದ್ದರೂ ಕೂಡ ಪರ ಸ್ರ್ತೀಯರ ಬಗ್ಗೆ ಹೊಂದಿರುವ ವ್ಯಾಮೋಹ, ಕೀಳಿರಿಮೆ ಹಾಗೂ ಲಘು ಭಾವನೆಯೇ ದೌರ್ಜನ್ಯ ಹೆಚ್ಚಾಗಲು ಕಾರಣವಾಗಿದೆ.

ಆ್ಯಸಿಡ್ ಎರಚಿ, ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹಲ್ಲೆಆ್ಯಸಿಡ್ ಎರಚಿ, ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹಲ್ಲೆ

ದೇಶದಲ್ಲಿ ಮಹಿಳೆಯರ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆಸಿಡ್‌ ದಾಳಿಗಳನ್ನು ತಪ್ಪಿಸಲು ಸರ್ಕಾರ ಆಸಿಡ್ ಮಾರಾಟದ ಕುರಿತು ಅನೇಕ ನಿಬಂಧನೆಗಳನ್ನು ಬಹಳ ಹಿಂದೆಯೇ ಜಾರಿ ಮಾಡಲಾಗಿತ್ತು.

ಆಸಿಡ್ ದಾಳಿಯಿಂದ ಮುಖದ ಚಹರೆ ಬದಲು

ಆಸಿಡ್ ದಾಳಿಯಿಂದ ಮುಖದ ಚಹರೆ ಬದಲು

ಆದರೂ ಕೂಡಾ ಇನ್ನೂ ಆಸಿಡ್ ದಾಳಿಗಳು ನಿಂತಿಲ್ಲ ಎಂಬುದೇ ಕಳವಳಕಾರಿಯಾದ ವಿಷಯವಾಗಿದೆ. ಈ ಆಸಿಡ್‌ ದಾಳಿಯ ಸಂತ್ರಸ್ಥರಿಗೆ ಬದುಕು ಕಟ್ಟಿಕೊಳ್ಳಲು ಉತ್ತರಾಖಂಡ್ ಸರ್ಕಾರ ಉತ್ತಮ ಯೋಜನೆಯೊಂದನ್ನು ಪ್ರಕಟಿಸಿದೆ.

ಆಸಿಡ್ ದಾಳಿಯಿಂದ ಮುಖದ ಸೌಂದರ್ಯವನ್ನು ಕಳೆದುಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳದ ಸಂತ್ರಸ್ಥರಿಗೆ ಸ್ವತಂತ್ರ ಮತ್ತು ಆರ್ಥಿಕವಾಗಿ ಸದೃಢರಾಗಲು ಸಹಾಯ ಮಾಡಲು ನಿರ್ಧರಿಸಿದೆ.

ಉತ್ತರಾಖಂಡ್ ಸರ್ಕಾರ ಘೋಷಣೆ

ಉತ್ತರಾಖಂಡ್ ಸರ್ಕಾರ ಘೋಷಣೆ

ಆಸಿಡ್ ದಾಳಿಗೊಳಗಾದವರಿಗೆ ಸಹಾಯ ಮಾಡಲು ಉತ್ತರಾಖಂಡ ಸರ್ಕಾರ ತಿಂಗಳಿಗೆ 7000 ರಿಂದ 10,000 ರೂ.ಗಳವರೆಗೆ ಪಿಂಚಣಿ ನೀಡುವ ಪ್ರಸ್ತಾಪವನ್ನು ರೂಪಿಸಲಾಗಿದೆ ಎಂದು ಉತ್ತರಾಖಂಡದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ರೇಖಾ ಆರ್ಯ ಹೇಳಿದ್ದಾರೆ.

ಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನಮಹಿಳೆಯ ಗುಪ್ತಾಂಗಕ್ಕೆ ಆ್ಯಸಿಡ್ ಎರಚಿ ಹತ್ಯೆಗೆ ಯತ್ನ

ಪಿಂಚಣಿ ನೀಡುವ ಪ್ರಸ್ತಾಪ ನಮ್ಮ ಸರ್ಕಾರದ ಮುಂದಿದೆ. ಈ ಕ್ರಮದಿಂದ ಅವರ ಜೀವನ ಉತ್ತಮವಾಗಲಿದೆ ಎಂದು ನಾನು ನಂಬುತ್ತೇನೆ.

ಇದು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸಚಿವೆ ರೇಖಾ ಆರ್ಯ ತಿಳಿಸಿದರು.

ಗುರುತಿನ ಚೀಟಿ ತೋರಿಸಿ ಆಸಿಡ್ ಪಡೆಯಬೇಕು

ಗುರುತಿನ ಚೀಟಿ ತೋರಿಸಿ ಆಸಿಡ್ ಪಡೆಯಬೇಕು

ಅದೇ ರೀತಿ ಪರವಾನಗಿ ಇಲ್ಲದೆ ಆಸಿಡ್ ಮಾರಾಟ ಮಾಡುವ ಯಾರಾದರೂ ಇದ್ದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕೂಡ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎಲ್ಲಾದರೂ ಆಸಿಡ್ ಮಾರಾಟ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲಾ ಪೊಲೀಸ್ ಠಾಣೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ಆಸಿಡ್ ಖರೀದಿಸುವವರು ಫೋಟೋ ಗುರುತಿನ ಚೀಟಿಯನ್ನು ಇಟ್ಟುಕೊಂಡಿರಬೇಕಗುತ್ತದೆ ಮತ್ತು ಅವರ ವಿವರಗಳನ್ನು ರಿಜಿಸ್ಟರ್‌ನಲ್ಲಿ ನಿರ್ವಹಿಸಬೇಕು ಎಂದು ಆದೇಶಿಸಲಾಗಿದೆ.

ಸರ್ಕಾರದ ಈ ಕೆಲಸಕ್ಕೆ ಮೆಚ್ಚುಗೆ

ಸರ್ಕಾರದ ಈ ಕೆಲಸಕ್ಕೆ ಮೆಚ್ಚುಗೆ

ಆಸಿಡ್‌ ದಾಳಿ ಸಂತ್ರಸ್ಥೆಯರಿಗೆ ಮೊಟ್ಟ ಮೊದಲು ಪಿಂಚಣಿಯನ್ನು ಪ್ರಕಟಿಸಿದ್ದು ಹರ್ಯಾಣ ಸರ್ಕಾರ. ಅಲ್ಲಿ ಇದು ಕಳೆದ ವರ್ಷದ ಫೆಬ್ರವರಿಯಲ್ಲೇ ಯೋಜನೆಯನ್ನು ಜಾರಿಗೆ ತರಲಾಗಿದೆ.

ಆಸಿಡ್‌ ಸಂತ್ರಸ್ಥೆಯರು ದೇಹ ವೈಕಲಾಂಗಗೊಂಡ ಶೇಕಡವಾರು ಪ್ರಮಾಣವನ್ನು ಆಧರಿಸಿ ಕನಿಷ್ಟ 5 ರಿಂದ 10 ಸಾವಿರ ರುಪಾಯಿಗಳವರೆಗೆ ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಯೋಜನೆಯನ್ನು ದೇಶದ ಮಹಿಳಾ ಸಂಘಟನೆಗಳು, ಎನ್‌ಜಿಓ ಗಳು ಸ್ವಾಗತಿಸಿವೆ.

English summary
The Uttarakhand government has announced a good plan for survivors of the acid attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X