Manvita Kamath: ಹಸೆಮಣೆ ಏರಲಿದ್ದಾರೆ ಕೆಂಡಸಂಪಿಗೆ ನಟಿ ಮಾನ್ವಿತಾ, ವರ ಯಾರು ಗೊತ್ತೆ?

ಬೆಂಗಳೂರು, ಏಪ್ರಿಲ್. 13: ಕನ್ನಡ ಸಿನಿಮಾ ಲೋಕಕ್ಕೆ ಹೊಸ ಬಗೆಯ ಪ್ರಯೋಗ ಎಂದರೆ ಅದು ಕೆಂಡಸಂಪಿಗೆ ಸಿನಿಮಾ. ಈ ಸಿನಿಮಾ ಇಬ್ಬರು ಪ್ರತಿಭಾನ್ವಿತರನ್ನು ಚಂದನವನಕ್ಕೆ ಪರಿಚಯಿಸಿತ್ತು. ಅದರಲ್ಲಿ ಮಾನ್ವಿತಾ ಕಾಮತ್ ಒಬ್ಬರು. ಕೆಂಡಸಂಪಿಗೆ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಹೆಜ್ಜೆ ಇಟ್ಟು ಸಕ್ಸಸ್ ಫುಲ್ ನಟಿಯಾಗಿ ಹೊರಹೊಮ್ಮಿರುವವರು ಮಾನ್ವಿತಾ ಕಾಮತ್.

ಆರ್ ಜೆಯಾಗಿದ್ದ ಮಾನ್ವಿತಾ ಕಾಮತ್ ಸುಕ್ಕ ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರದಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಶಿವಣ್ಣನ ಟಗರು ಸಿನಿಮಾದಲ್ಲಿ ಬಣ್ಣ ಹಚ್ಚಿ ಟಗರು ಪುಟ್ಟಿಯಾಗಿ ಕರುನಾಡ ಪ್ರೇಕ್ಷಕರ ಮನ ಗೆದ್ದ ಈ ಸುಂದರಿ ಈಗ ಹಸೆಮಣೆ ಏರಲು ರೆಡಿಯಾಗಿದ್ದಾರೆ.

Kannada Actress Manvita Kamath to marry music producer Arun Kumar

ಮದುಮಗಳಾಗುತ್ತಿರುವ ಮಾನ್ವಿತಾ ಕಾಮತ್

ಟಗರು ಪುಟ್ಟಿ ಮಾನ್ವಿತಾ ಕಾಮತ್‌ಗೆ ಕಂಕಣ ಭಾಗ್ಯ ಕೂಡಿಬಂದಿದೆ. ಮೈಸೂರು ಮೂಲದ ಸಂಗೀತ ನಿರ್ಮಾಪಕರಾದ ಅರುಣ್ ಕುಮಾರ್ ಅವರನ್ನು ವರಿಸಲಿದ್ದಾರೆ. ಅರುಣ್ ಕುಮಾರ್ ಅವರೊಂದಿಗೆ ಮಾನ್ವಿತಾ ಕಾಮತ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೇ 1 ರಂದು ಮಾನ್ವಿತಾ ಮತ್ತು ಅರುಣ್ ಕುಮಾರ್ ವಿವಾಹ ಮಹೋತ್ಸವ ನಡೆಯಲಿದೆ.

Kannada Actress Manvita Kamath to marry music producer Arun Kumar

ನಟಿ ಮಾನ್ವಿತಾ ಕಾಮತ್ ಹಾಗೂ ಸಂಗೀತ ನಿರ್ಮಾಪಕ ಅರುಣ್ ಕುಮಾರ್ ಕೊಂಕಣಿ ಸಂಪ್ರದಾಯದಂತೆ ಮೇ 1 ಕ್ಕೆ ಹೊಸ ಬಾಳಿಗೆ ಹೆಜ್ಜೆ ಇಡಲಿದ್ದಾರೆ. ಮದುವೆಗೂ ಮುನ್ನ ಹಲವು ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿವೆ. ಅದರಲ್ಲಿ ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ, ಏಪ್ರಿಲ್ 30 ಅರಿಶಿನ ಶಾಸ್ತ್ರ ನಡೆಯಲಿದೆ. ಸಂಗೀತ ನಿರ್ಮಾಪಕರ ಮದುವೆಯಲ್ಲಿ ಸಂಗೀತ ಕಾರ್ಯಕ್ರಮ ಇಲ್ಲದಿದ್ದರೇ ಹೇಗೆ..? ಹಾಗಾಗಿಯೇ ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ನಡೆಯಲಿದೆ.

ಚಿಕ್ಕಮಗಳೂರಿನ ಕಳಸದಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ. ಇನ್ನು, ಅರುಣ್ ಕುಮಾರ್ Beatoven.ai ಎಂಬ ಸಂಗೀತ ಆಧಾರಿತ ಟೆಕ್ ಕಂಪನಿಯ ಇಂಜಿನಿಯರ್ ಆಗಿದ್ದಾರೆ. ಸಿನಿಮಾ ರಂಗಕ್ಕೆ ಹತ್ತಿರವಿರುವವರಾಗಿದ್ದು, ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೂ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳು ಶುಭ ಹಾರೈಲೆ ಸಲ್ಲಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+