ಪರಿಷತ್ ಘಟನೆ ಬಳಿಕ ನೊಂದು ಹೋಗಿದ್ದ ಎಸ್. ಎಲ್. ಧರ್ಮೇಗೌಡ
ಚಿಕ್ಕಮಗಳೂರು, ಡಿಸೆಂಬರ್ 29; " ವಿಧಾನ ಪರಿಷತ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಘಟನೆ ಬಳಿಕ ಅಣ್ಣ ಮನನೊಂದಿದ್ದರು" ಎಂದು ಉಪ ಸಭಾಪತಿ ಎಸ್. ಎಲ್. ಧರ್ಮೇಗೌಡ ಸಹೋದರ ಎಸ್. ಎಲ್. ಭೋಜೇಗೌಡ ಹೇಳಿದ್ದಾರೆ.
ಸೋಮವಾರ ರಾತ್ರಿ ಎಸ್. ಎಲ್. ಧರ್ಮೇಗೌಡ (65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಪಾರ್ಥಿವ ಶರೀರವನ್ನು ಕಡೂರಿನ ಸಖರಾಯಪಟ್ಟಣಕ್ಕೆ ತರಲಾಗುತ್ತಿದೆ.
ಪಂಚಾಯಿತಿಯಿಂದ ಪರಿಷತ್ ತನಕ; ಎಸ್. ಎಲ್. ಧರ್ಮೇಗೌಡ ಪರಿಚಯ
ಎಸ್. ಎಲ್. ಧರ್ಮೇಗೌಡ ಸಹೋದರ, ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, "ವಿಧಾನ ಪರಿಷತ್ ಘಟನೆಯಿಂದ ಅಣ್ಣ ಮನ ನೊಂದಿದ್ದರು. ಬೇಸರವಾಗಿದ್ದರೆ ರಾಜೀನಾಮೆ ಕೊಡು. ಬೇಕಿದ್ದರೆ ನಾನೂ ರಾಜೀನಾಮೆ ಕೊಡುವುದಾಗಿ ಹೇಳಿದ್ದೆ" ಎಂದರು.
ಸಖರಾಯಪಟ್ಟಣಕ್ಕೆ ಧರ್ಮೇಗೌಡ ಪಾರ್ಥಿವ ಶರೀರ ಆಗಮನ: ಅಂತಿಮ ದರ್ಶನ ಪಡೆದ ಸಿಎಂ
"ಇವತ್ತು ರಾಜೀನಾಮೆ ಕೊಡಲು ಹೋಗೋಣ ಎಂದು ಹೇಳಿದ್ದೆ. ಅಷ್ಟರೊಳಗೆ ಅಣ್ಣ ನನಗೆ ಬಹಳ ಮೋಸ ಮಾಡಿಬಿಟ್ಟರು. ಅಷ್ಟು ಭೀಕರವಾಗಿ ಸಾಯಲು ಅವರಿಗೆ ಧೈರ್ಯವಾದರೂ ಹೇಗೆ ಬಂತು?" ಎಂದು ಭೋಜೇಗೌಡರು ಕಣ್ಣೀರು ಹಾಕಿದರು.
ಎಸ್. ಎಲ್. ಧರ್ಮೇಗೌಡ ಆತ್ಮಹತ್ಯೆ; ಕಂಬನಿ ಮಿಡಿದ ಜಿಟಿಡಿ