ನಟಿ ಶಶಿರೇಖಾ ಕೊಲೆ ಹಂತಕರು ಕೊನೆಗೂ ಪತ್ತೆ!

Posted By:
Subscribe to Oneindia Kannada

ನವದೆಹಲಿ, ಫೆ. 08: ಕೆಲ ತಿಂಗಳುಗಳ ಹಿಂದೆ ಕಸದ ತೊಟ್ಟಿಯಲ್ಲಿ ರುಂಡ ರಹಿತವಾಗಿ ಪತ್ತೆಯಾಗಿದ್ದ ನಟಿ ಶಶಿರೇಖಾ ಕೊಲೆ ಪ್ರಕರಣಕ್ಕೆ ಚೆನ್ನೈ ಪೊಲೀಸರು ಹೇಳಿದ್ದಾರೆ. ಮೃತ ಶಶಿರೇಖಾಶ ಪತಿ 34ವರ್ಷದ ರಮೇಶ್ ಹಾಗೂ ಅವನ ಪ್ರೇಯಸಿ ಮತ್ತು ನಟಿ ಲಾಖಿಯಾ ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಹೇಳಿದ್ದಾರೆ.

ಕಿರುತೆರೆ ನಟಿ ಶಶಿರೇಖಾ (36) ಅವರ ಹತ್ಯೆ ಪ್ರಕರಣದಲ್ಲಿ ಆಕೆಯ ಪತಿ ರಮೇಶ್ ಶಂಕರ್ (36) ಹಾಗೂ ಆತನ ಗೆಳತಿ ಲಾಖಿಯಾ ಕಾಶಿವ್(32) ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರು. ಚೆನ್ನೈನ ಹೊರವಲಯದ ಕುಂದ್ರಾತೂರ್ ಬಳಿಯ ಮಾಧನಂಧಪುರಮ್ ನಲ್ಲಿ ನೆಲೆಸಿದ್ದರು. ರಮೇಶ್ ಅವರು ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಲಾಖಿಯಾ ಅವರು ಇನ್ನೂ ಚಿತ್ರೀಕರಣ ಹಂತದಲ್ಲಿದ್ದ ಕರುಪ್ಪಸಮಯ್ ಪುರಮ್ ಚಿತ್ರದಲ್ಲಿ ನಟಿಸುತ್ತಿದ್ದರು.

Tamil actor's headless body found in garbage bin identified

ಜನವರಿ 05ರಂದು ಕಸದ ತೊಟ್ಟಿಯೊಂದರಲ್ಲಿ ಶಶಿರೇಖಾ ಅವರ ಶವ ಪತ್ತೆಯಾಗಿತ್ತು. ಶಶಿರೇಖಾಳ ಪೋಷಕರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. 2012ರಿಂದ ಲಾಖಿಯಾಳ ಜೊತೆ ಇದ್ದ ರಮೇಶ್ ತನ್ನ ಗೆಳತಿ ಲಾಖಿಯಾಳನ್ನು ಮುಂದಿಟ್ಟುಕೊಂಡು ತಾನು ತಯಾರಿಸಲಿರುವ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಂಬಿಸಿ ಅನೇಕರಿಂದ ಹಣ ಪಡೆದಿದ್ದ.

ನಂತರ ಲಾಖಿಯಾಳನ್ನು ಬಿಟ್ಟು 8ವರ್ಷದ ಮಗು ಹೊಂದಿದ್ದ ಶಶಿರೇಖಾಳನ್ನು 2015ರಲ್ಲಿ ಮದುವೆ ಮಾಡಿಕೊಂಡಿದ್ದ. ನಂತರ ಇವಳನ್ನು ಬಿಟ್ಟು ಅವಳ ಬಳಿಗೆ ಹೋಗಿದ್ದ. ಆಗ ಶಶಿರೇಖ ರಮೇಶನ ವಿರುದ್ಧ ದೂರು ನೀಡಿದ್ದರು. ಇದರಿಂದ ಕೋಪಗೊಂಡ ರಮೇಶ್, ಶಶಿರೇಖಾ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ನಂತರ ರುಂಡ- ಮುಂಡವನ್ನು ಬೇರ್ಪಡಿಸಿ, ದೇಹವನ್ನು ಕತ್ತರಿಸಿ ಹಾಕಿದ್ದರು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A headless body was found in a garbage bin in Chennai nearly a month ago which has now been identified. According to Chennai Police, the headless body is of Tamil actress Sasirekha, who played the lead role in Tamil film.
Please Wait while comments are loading...