JP Nadda visits Hubballi: ನೇಹಾ ಹತ್ಯೆ ಕೇಸ್: ಹುಬ್ಬಳ್ಳಿಗೆ ಇಂದು ಜೆಪಿ ನಡ್ಡಾ ಭೇಟಿ

ಹುಬ್ಬಳ್ಳಿ ಏಪ್ರಿಲ್ 21: ನೇಹಾ ಹತ್ಯೆ ಪ್ರಕರಣ ದಿನ ಕಳೆದಂತೆ ಸಾಕಷ್ಟು ತಿರುವುಗಳನ್ನ ಪಡೆದುಕೊಳ್ಳುತ್ತಿದ್ದು ರಾಜಕೀಯಗೊಳಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು (ಏಪ್ರಿಲ್ 21)ಕ್ಕೆ ಹುಬ್ಬಳ್ಳಿಗೆ ಭೇಟಿ ನೀಡುತ್ತಿದ್ದಾರೆ.

ನೇಹಾ ಹಿರೇಮಠ್ ಹತ್ಯೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಸಂಬಂಧ ರಾಜ್ಯಾದ್ಯಾಂತ ಪ್ರತಿಭಟನೆ, ಆಕ್ರೊಶ ಭುಗಿಲೆದ್ದಿದೆ. ನೇಹಾ ಹತ್ಯೆಯ ಬಳಿಕ ಪ್ರಕರಣ ಖಂಡಿಸಿ ಮಠಾಧೀಶರು, ರಾಜಕಾರಣಿಗಳು ಮತ್ತು ನಾಗರೀಕರು ನೇಹಾ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಆರೋಪಿಯನ್ನು ಕೊಲ್ಲಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ.

Neha murder case JP Nadda visits Hubballi today

ಹುಬ್ಬಳ್ಳಿಯಲ್ಲಿ ನಡ್ಡಾ ಕಾರ್ಯಕ್ರಮಗಳು ಹೀಗಿವೆ:

ಹುಬ್ಬಳ್ಳಿಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಜೆಪಿ ನಡ್ಡಾ ಆಗಮಿಸುತ್ತಿದ್ದಾರೆ. ಅವರು ಮಧ್ಯಾಹ್ನ 2 ರಿಂದ ರಾತ್ರಿ 10 ಗಂಟೆವರೆಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹುಬ್ಬಳ್ಳಿಯ ಡೆನಿಸನ್ ಹೋಟೆಲ್‌ನಲ್ಲಿ ವಿವಿಧ ಸಮುದಾಯದ ಮುಖಂಡರೊಂದಿಗೆ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಸಲಿದ್ದಾರೆ.

ಬಳಿಕ ಪ್ರಲ್ಹಾದ್ ಜೋಶಿ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಐದು ಗಂಟೆಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ರಾತ್ರಿ ಒಂಬತ್ತಕ್ಕೆ ಡೆನಿಸನ್ ಹೋಟೆಲ್‌ನಲ್ಲಿ ಕೋರ್‌ ಕಮಿಟಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ನೇಹ ಕುಟುಂಬಕ್ಕೆ ಸಾಂತ್ವಾನ ನೀಡಲು ತೆರಳುತ್ತಾರಾ ಇಲ್ವಾ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ರಾಜಕೀಯ ತಿರುವು ಪಡೆದ ನೇಹಾ ಕೇಸ್...

ಈ ಘಟನೆ ಕುರಿತಂತೆ ರಾಜ್ಯಾಂದ್ಯ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದು ಲವ್ ಜಿಹಾದ್ ಪ್ರಕರಣ ಎಂದು ಬಿಜೆಪಿ ಆರೋಪಿಸಿದ್ದರೆ ಕಾಂಗ್ರೆಸ್ಸಿಗರು ಇದೊಂದು ವೈಯಕ್ತಿಕ ಘಟನೆ ಎಂದು ಹೇಳಿದ್ದರು. ಇನ್ನು ಆರೋಪಿ ಫಯಾಜ್ ನನ್ನು ಎನ್ ಕೌಂಟರ್ ಮಾಡಬೇಕು ಎಂಬ ಹೇಳಿಕೆಯೂ ಕೇಳಿಬಂದಿದೆ.

ಇದರ ಮಧ್ಯೆ ಕಿಡಿಗೇಡಿಗಳು ನೇಹಾ ಹತ್ಯೆಯನ್ನು ಸಮರ್ಥಿಸಿ ಪೋಸ್ಟ್ ಮಾಡಿದ್ದಾರೆ. ಸಾದಿಕ್ ತಡಕೋಡ ಮತ್ತು ಆದಿಲ್ ಎಂಬುವರು ಇನ್ ಸ್ಟಾಗ್ರಾಂನಲ್ಲಿ ನೇಹಾ, ಫಯಾಜ್ ಫೋಟೋ ಬಳಸಿ ಪೋಸ್ಟ್ ಮಾಡಿದ್ದಾರೆ. # NehaFayazTrueLove #JusticeforLove ಎಂದು ಈ ಇಬ್ಬರು ಕಿಡಿಗೇಡಿಗಳು ಪೋಸ್ಟ್ ಮಾಡಿದ್ದರು. ಇದರ ವಿರುದ್ಧ ಹಿಂದೂ ಸಂಘಟನೆ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಹಿಂದೂ ಯುವಕರು ನೇಹಾ ಹತ್ಯೆಯನ್ನು ಸಮರ್ಥಿಸಿ ಪೋಸ್ಟ್ ಮಾಡಿದ್ದ ಸಾದಿಕ್ ತಡಕೋಡ ಮತ್ತು ಆದಿಲ್ ಎಂಬುವರನ್ನು ಹಿಡಿದು ದಾವಣಗೆರೆಯ ವಿದ್ಯಾಗಿರಿ ಠಾಣೆಗೆ ಒಪ್ಪಿಸಿದ್ದಾರೆ.

ಪ್ರಕರಣವನ್ನು ಖಂಡಿಸಿದ ಸ್ಯಾಂಡಲ್‌ವುಡ್ ತಾರೆಯರು

ಇದೇ ಪ್ರಕರಣದ ಕುರಿತಾಗಿ ಸ್ಯಾಂಡಲ್‌ವುಡ್‌ ಸ್ಟಾರ್ಸ್ ದನಿಯೆತ್ತಿದ್ದಾರೆ. ನೇಹಾ ಹಿರೇಮಠ್‌ ಹತ್ಯೆ ಪ್ರಕರಣವನ್ನ ಕನ್ನಡ ನಟ ಶಿವರಾಜ್ ಕುಮಾರ್, ನಟ - ನಿರ್ದೇಶಕ ರಿಷಬ್ ಶೆಟ್ಟಿ, ನಟಿ ರಚಿತಾ ರಾಮ್ ಖಂಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+