Priya Savadi: ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆ: ಕಣ್ಣೀರಿಟ್ಟು ಗೋಳಾಡಿದ ನಟಿ ಪ್ರಿಯಾ ಸವದಿ

ಹುಬ್ಬಳ್ಳಿ, ಏಪ್ರಿಲ್‌ 19: ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಫಯಾಜ್ ಎನ್ನುವಾತ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾಳನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆಯಾದ ಒಂದೇ ಗಂಟೆಯಲ್ಲಿ ವಿದ್ಯಾನಗರ ಠಾಣೆ‌ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಪ್ರಕರಣವನ್ನು ಖಂಡಿಸಿ ಹುಬ್ಬಳ್ಳಿ-ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ. ಎಬಿವಿಪಿ, ಹಿಂದೂ ಸಂಘಟನೆ ಪ್ರತಿಭಟನೆಗಿಳಿದಿದ್ದು, ಆರೋಪಿಯನ್ನು ಗಲ್ಲಿಗೇರಿಸುವಂತೆ ಆಗ್ರಹಿಸುತ್ತಿವೆ. ಈ ಪ್ರತಿಭಟನೆಯಲ್ಲಿ ಭಾಗಿಯಾದ ನಟಿ ಪ್ರಿಯಾ ಸವದಿ ಕಣ್ಣೀರಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Actress Priya Savadi Participated In Neha Hiremath Murder Case Protest

'ಆಕೆ ನನಗೆ ಸಂಬಂಧನೇ ಆಗಬೇಕಂದಿಲ್ಲ. ಇಲ್ಲಿ ಎಲ್ಲಾರೂ ನಮಗೆ ಅಕ್ಕಾ ತಂಗಿಯರೇ. ನನ್ನ ಅಕ್ಕ-ತಂಗಿನೇ ಬೇಕಾಗಿತ್ತಾ ಇವನಿಗೆ. ಅವಳು ನಮಗೆ ಏನೂ ಆಗಬೇಕಂದಿಲ್ಲ. ಇಲ್ಲಿ ಬಂದಿರುವ ಪ್ರತಿಯೊಬ್ಬರಿಗೂ ಆಕೆ ತಂಗಿ, ಅಕ್ಕ, ಮಗಳೇ.. ಆ ಆರೋಪಿಯನ್ನು ನಮಗೆ ಕೈಗೆ ಕೊಡಿ. ಅವನಿಗೆ ಶಿಕ್ಷೆ ಯಾರು ಕೊಡುತ್ತಾರೆ. ಹತ್ತು, ಇಪ್ಪತ್ತು ವರ್ಷ ಅವನಿಗೆ ಶಿಕ್ಷೆ ಕೊಡಬಹುದು. ಆದರೆ ಆಕೆಗೆ ಜೀವ ಕೊಡಲಾಗುತ್ತದೆಯೇ..? ಎಂದು ಪ್ರಶ್ನಿಸಿದ್ದಾರೆ.

ಮಾಸ್ಕ್‌ ಹಾಕಿಕೊಂಡು ಯಾಕೆ ಬರಬೇಕಿತ್ತವನು..ಬುರ್ಖಾ ಹಾಕಿಕೊಂಡು ಬರಬೇಕಿತ್ತವನು. ಅಷ್ಟು ಧಮ್‌ ಇದ್ದವನು ಆಕೆಯ ಮನೆಗೆ ಹೋಗಿ ಮದುವೆಯಾಗುತ್ತೇನೆ ಎಂದು ಕೇಳಬೇಕಿತ್ತು. ಆಕೆ ಪ್ರತಿಯೊಬ್ಬರಿಗೂ ಅಕ್ಕ, ತಂಗಿಯಂತೆ ಹೀಗಾಗಿ ಇಂದು ಇಷ್ಟೊಂದು ಜನ ಬಂದಿದ್ದಾರೆ. ಸರ್ಕಾರದವರು ಐದು, ಹತ್ತು ವರ್ಷ ಇರುತ್ತಾರೆ ಹೋಗುತ್ತಾರೆ. ಅವರಿಗೆ ಇದರ ನೆನಪು ಸಹ ಇರುವುದಿಲ್ಲ. ಎಲ್ಲಾ ಮುಚ್ಚಿ ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Actress Priya Savadi Participated In Neha Hiremath Murder Case Protest

ಇಂದು ಈಕೆ ಒಬ್ಬಳಿಗೋಸ್ಕರ ಇಷ್ಟೊಂದು ಜನ ಸೇರಿದ್ದೇವೆ. ನಾಳೆ ನನಗೂ ಈ ರೀತಿ ಆಗಬಹುದು, ಇವರಿಗೂ ಆಗಬಹುದು, ಎಷ್ಟು ಮಂದಿಗೋಸ್ಕರ ನಾವು ಅಳುತ್ತ ಕೂರುವುದು. ಎಷ್ಟು ಮಂದಿಗಂತ ಅಳಬೇಕು. ನಾವು ಹೀಗೆ ಅಳುತ್ತಾ ಕುಳಿತರೆ ನಮಗೆಲ್ಲಿದೆ ರಕ್ಷಣೆ. ಬುರ್ಖಾ ಹಾಕಿಕೊಂಡು ತಿರುಗಾಬೇಕು ನಾವು? ಎಂದು ಕಠಿಣವಾಗಿ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+