ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದೇ ಎಲಾನ್ ಮಸ್ಕ್‌ಗೆ ಟ್ವಿಟ್ಟರ್ ಮಾರಾಟ ಸಾಧ್ಯತೆ!

|
Google Oneindia Kannada News

ಟ್ವಿಟ್ಟರ್ ಹಾಗೂ ಎಲಾನ್ ಮಸ್ಕ್ ನಡುವಿನ ವಹಿವಾಟು ಮಾತುಕತೆಯು ಇಂದು ಕೊನೆಯಾಗುವ ಸಾಧ್ಯತೆ ಇದೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಅಪ್ಲಿಕೇಷನ್ ಟ್ವಿಟ್ಟರ್ ಅನ್ನು 43 ಶತಕೋಟಿ ಡಾಲರ್‌ಗೆ ಖರೀದಿ ಮಾಡುವುದಾಗಿ ಆಫರ್ ನೀಡಿದ ಬಳಿಕ ನಡೆದ ಎಲ್ಲಾ ನಾಟಕೀಯ ಘಟನೆಗಳಿಗೆ ಇಂದು ತೆರೆ ಬೀಳುವ ಸಾಧ್ಯತೆ ಇದೆ.

ಟ್ವಿಟ್ಟರ್ ಸ್ವತಃ ತಾವೇ ಮಾರಾಟದ ಬಗ್ಗೆ ಮಸ್ಕ್ ಜೊತೆ ಮಾತನಾಡುತ್ತಿದೆ. ಇಂದೇ ಟ್ವಿಟ್ಟರ್ ಅನ್ನು ಎಲಾನ್ ಮಸ್ಕ್ ಖರೀದಿ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಫೋರ್ಬ್ಸ್‌ನ ಲೆಕ್ಕಾಚಾರದ ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಮಸ್ಕ್, ವೈಯಕ್ತಿಕ ಸಾಮರ್ಥ್ಯದಲ್ಲಿ ಟ್ವಿಟ್ಟರ್ ಅನ್ನು ಖರೀದಿಸಲು ಮಾತುಕತೆ ನಡೆಸುತ್ತಿದ್ದಾರೆ.

ಎಲಾನ್ ಮಸ್ಕ್ ಆಫರ್‌ಗೆ ಟ್ವಿಟ್ಟರ್ ಹೇಳಿದ್ದೇನು?ಎಲಾನ್ ಮಸ್ಕ್ ಆಫರ್‌ಗೆ ಟ್ವಿಟ್ಟರ್ ಹೇಳಿದ್ದೇನು?

ಟ್ವಿಟ್ಟರ್ ಭಾನುವಾರದಂದು ಮಸ್ಕ್ ಅವರ ಪ್ರಸ್ತಾಪವನ್ನು ಮರುಪರಿಶೀಲಿಸಲು ಪ್ರಾರಂಭಿಸಿದೆ. ಮಸ್ಕ್ ತನ್ನ ಪ್ರಸ್ತಾಪವನ್ನು ಮಂಡಳಿಗೆ ಮನವರಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಈ ವಾರದಲ್ಲೇ ಒಪ್ಪಂದ ನಡೆಯಬಹುದು ಎಂದು ಕೂಡಾ ವರದಿ ಉಲ್ಲೇಖ ಮಾಡಿದೆ.

Twitter likely to sell itself to Elon Musk on April 25

ಮಸ್ಕ್, ಟ್ವಿಟ್ಟರ್ ನಡುವೆ ನಡೆಯುತ್ತಿದೆ ಅಂತಿಮ ಮಾತುಕತೆ

ಬ್ಲೂಮ್‌ಬರ್ಗ್‌ನ ಇತ್ತೀಚಿನ ವರದಿಯ ಪ್ರಕಾರ, ಟ್ವಿಟ್ಟರ್ ಹಾಗೂ ಎಲಾನ್ ಮಸ್ಕ್ ನಡುವೆ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. ಟ್ವಿಟ್ಟರ್ ಸಂಸ್ಥೆಯು ವಹಿವಾಟಿನ ನಿಯಮಗಳ ಬಗ್ಗೆ ಪ್ರಸ್ತಾಪ ಮಾಡುತ್ತಿದೆ. ಮಾತುಕತೆ ಸುಗಮವಾಗಿ ನಡೆದರೆ ಸೋಮವಾರವೇ ಒಪ್ಪಂದ ನಡೆಯುಬಹುದು ಎಂದು ವರದಿಯು ಉಲ್ಲೇಖ ಮಾಡಿದೆ.

ಮಸ್ಕ್ ಆಫರ್‌ಗೆ ಮುನ್ನ ಟ್ವಿಟ್ಟರ್ ಮಾರಾಟಕ್ಕಿತ್ತಾ? ಇಲ್ಲಿದೆ ಡೀಟೇಲ್ಸ್ಮಸ್ಕ್ ಆಫರ್‌ಗೆ ಮುನ್ನ ಟ್ವಿಟ್ಟರ್ ಮಾರಾಟಕ್ಕಿತ್ತಾ? ಇಲ್ಲಿದೆ ಡೀಟೇಲ್ಸ್

ಮಸ್ಕ್ ಟ್ವಿಟ್ಟರ್‌ನ ಶೇಕಡ 9.2 ರಷ್ಟು ಪಾಲುದಾರಿಕೆಯನ್ನು ಹೊಂದಿದ್ದಾರೆ. ತಾನು ಉನ್ನತ ಷೇರುದಾರ ಎಂದು ಬಹಿರಂಗಪಡಿಸಿದ್ದರು. ಖರೀದಿಯ ಆಫರ್ ಕೂಡಾ ನೀಡಿದ್ದರು. ಮಸ್ಕ್ ಇಷ್ಟಕ್ಕೆ ಸುಮ್ಮನಾಗದೆ ಟ್ವಿಟ್ಟರ್ ಕಂಪನಿಯ ಹಲವು ಷೇರುದಾರರನ್ನ ಖಾಸಗಿಯಾಗಿ ಭೇಟಿ ಮಾಡಿದ್ದಾರೆ. ಈ ಬೆನ್ನಲ್ಲೇ ಮಸ್ಕ್ ಆಫರ್ ಅನ್ನು ಟ್ವಿಟ್ಟರ್ ಪರಿಗಣಿಸಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿ ಉಲ್ಲೇಖವಾಗಿದೆ.

ಇನ್ನು ಟ್ವಿಟ್ಟರ್ ಖರೀದಿಗೆ ಹೂಡಬೇಕೆಂದಿರುವ 46.5 ಬಿಲಿಯನ್ ಡಾಲರ್ ಹಣದ ಪೈಕಿ 33.5 ಬಿಲಿಯನ್ ಡಾಲರ್ ಹಣವನ್ನು ತಾವೇ ಖುದ್ದಾಗಿ ಹೊಂದಿಸಿದ್ದಾರೆ. ತಮ್ಮ ಟೆಸ್ಲಾ ಕಂಪನಿಯ ಷೇರುಗಳ ಮೇಲೆ ಸಾಲ ಮಾಡಿ ಒಂದಷ್ಟು ಹಣವನ್ನು ಒಟ್ಟು ಮಾಡಿದ್ದಾರೆ. ಮಾರ್ಗನ್ ಸ್ಟಾನ್ಸೀ ಎಂಬ ಖಾಸಗಿ ಹೂಡಿಕೆ ಸಂಸ್ಥೆಯು 13 ಬಿಲಿಯನ್ ಡಾಲರ್ ಹಣದ ಸಾಲ ನೀಡಲು ತಯಾರಾಗಿದೆ ಎಂದು ಕೂಡಾ ವರದಿಯಾಗಿದೆ.

ಟ್ವೀಟ್ ಮಾಡಿದ್ದ ಎಲಾನ್ ಮಸ್ಕ್

"ಮುಕ್ತ ಅಭಿವ್ಯಕ್ತಿಗೆ ಜಗತ್ತಿನ ಎಲ್ಲೆಡೆ ವೇದಿಕೆಯಾಗಬಲ್ಲ ಶಕ್ತಿ ಟ್ವಿಟರ್‌ಗೆ ಇದೆ ಎಂಬ ನಂಬಿಕೆಯಿಂದ ನಾನು ಟ್ವಿಟರ್‌ನಲ್ಲಿ ಹೂಡಿಕೆ ಮಾಡಿದ್ದೇನೆ. ಆದರೆ, ಟ್ವಿಟರ್ ಕಂಪನಿಯು ಈಗಿನ ಸ್ವರೂಪದಲ್ಲಿ ಈ ಉದ್ದೇಶವನ್ನು ಈಡೇರಿಸುವುದಿಲ್ಲ, ಬೆಳೆಯುವುದೂ ಇಲ್ಲ ಎಂಬುದು ನನಗೆ ಅರಿವಾಗಿದೆ. ಟ್ವಿಟರ್‌ಅನ್ನು ಖಾಸಗಿ ಕಂಪನಿಯನ್ನಾಗಿ ಪರಿವರ್ತಿಸಬೇಕು," ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು.

English summary
Elon Musk’s flirtation with Twitter may have an endgame after all. Twitter likely to sell itself to Elon Musk on April 25.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X