Balayya Assets: ಸಿನಿಮಾದಲ್ಲಿ ಕೋಟಿ ಕೋಟಿ ಬಾಚುವ ಬಾಲಯ್ಯ ಆಸ್ತಿ ಮೌಲ್ಯ ಎಷ್ಟು?
ಅಮರಾವತಿ, ಏಪ್ರಿಲ್. 21: ನಟ ಮತ್ತು ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ ಅವರು ಏಪ್ರಿಲ್ 19ರ (ಶುಕ್ರವಾರ) ಶ್ರೀ ಸತ್ಯಸಾಯಿ ಜಿಲ್ಲೆಯ ಹಿಂದೂಪುರದಿಂದ ಕ್ಷೇತ್ರದಿಂದ ತೆಲುಗು ದೇಶಂ ಪಕ್ಷದ (ಟಿಡಿಪಿ) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದೂಪುರದಿಂದ ಶಾಸಕರ ನಾಮಪತ್ರ ಸಲ್ಲಿಕೆ ಅಂಗವಾಗಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ನಂದಮೂರಿ ಬಾಲಕೃಷ್ಣ ಅವರು ತಮ್ಮ ಆಸ್ತಿ ವಿವರ ಘೋಷಿಸಿದ್ದಾರೆ. ಶಾಸಕರ ಜೊತೆಗೆ ಹಿಟ್ ಸಿನಿಮಾಗಳನ್ನು ನೋಡಿ, ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುವ ನಟ ಬಾಲಯ್ಯ ಅವರ ಆಸ್ತಿ ಎಷ್ಟಿದೆ ಎಂದು ತಿಳಿಸಿದ್ದಾರೆ.

ನಟ ಬಾಲಕೃಷ್ಣ ಅವರು ತಮ್ಮ ಪತ್ನಿ ವಸುಂಧರಾ ಹಾಗೂ ಪಕ್ಷದ ಹಿರಿಯ ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಬಂದು ಕಂದಾಯ ವಿಭಾಗೀಯ ಕಚೇರಿ ತಲುಪಿದರು. ಮೆರವಣಿಗೆಯಲ್ಲಿ ಟಿಡಿಪಿ, ಜೆಎಸ್‌ಪಿ ಮತ್ತು ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಟನ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು 'ಜೈ ಬಾಲಯ್ಯ' ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೂ ಮುನ್ನ ಸ್ಥಳೀಯ ಸೂಗೂರು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬಾಲಕೃಷ್ಣ ದಂಪತಿ ವಿಶೇಷ ಪೂಜೆ ಸಲ್ಲಿಸಿದ್ದರು.
ನಟ ಬಾಲಯ್ಯ ಆಸ್ತಿ ಎಷ್ಟು?
ಪ್ರತಿ ವರ್ಷ ಹಿಟ್ ಸಿನಿಮಾಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳುತ್ತಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಅವರು, ಅಫಿಡವಿಟ್‌ನಲ್ಲಿ 482 ಕೋಟಿ ಆಸ್ತಿ ಘೋಷಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಗೃಹಿಣಿಯಾಗಿರುವ ಬಾಲಕೃಷ್ಣ ಅವರ ಪತ್ನಿ ವಸುಂಧರಾ ಬಾಲಕೃಷ್ಣ ಅವರಿಗಿಂತ ಹೆಚ್ಚು ಚರಾಸ್ತಿ ಹೊಂದಿದ್ದಾರೆ.
ನಾಮಪತ್ರ ಸಲ್ಲಿಸುವಾಗ ಬಾಲಕೃಷ್ಣ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅವರು 81.63 ಕೋಟಿ ರೂ.ಗೂ ಹೆಚ್ಚು ಚರ ಆಸ್ತಿಯನ್ನು ಹೊಂದಿದ್ದು, ಅವರ ಪತ್ನಿಯ ಚರಾಸ್ತಿಯು ಬಾಂಡ್‌ಗಳು, ಡಿಬೆಂಚರ್‌ಗಳು/ಷೇರುಗಳು ಇತ್ಯಾದಿಗಳಲ್ಲಿ ಹೂಡಿಕೆ ಸೇರಿದಂತೆ 140.38 ಕೋಟಿ ರೂಪಾಯಿ ಘೋಷಿಸಿದ್ದಾರೆ. ಬಾಲಕೃಷ್ಣ ಅವರ ಕುಟುಂಬವು 5.9 ಕೆಜಿ ಚಿನ್ನ, 156 ಕೆಜಿ ಬೆಳ್ಳಿ ಮತ್ತು 580 ಕ್ಯಾರೆಟ್ ವಜ್ರಗಳನ್ನು ಹೊಂದಿದ್ದು, ಸುಮಾರು 7 ಕೋಟಿ ರೂಪಾಯಿ ಮೌಲ್ಯ ಹೊಂದಿದೆ.

ಬಾಲಕೃಷ್ಣ ಅವರ ಎಚ್‌ಯುಎಫ್ (ಹಿಂದೂ ಅವಿಭಜಿತ ಕುಟುಂಬ) 2.41 ಕೋಟಿ ರೂಪಾಯಿಗೂ ಹೆಚ್ಚು ಚರಾಸ್ತಿ ಹೊಂದಿದೆ. ಅವರ ಪುತ್ರ ಮೋಕ್ಷಜ್ಞ ತಾರಕ ರಾಮ ತೇಜ 58.63 ಕೋಟಿ ಚರ ಆಸ್ತಿ ಹೊಂದಿದ್ದಾರೆ. ಸದ್ಯ ಬಾಲಕೃಷ್ಣ ಅವರ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯ 103.35 ಕೋಟಿ ರೂ.ಗಳಾಗಿದ್ದು, ಅವರ ಪತ್ನಿಯ ಸ್ಥಿರಾಸ್ತಿಯ ಮೌಲ್ಯ 38.90 ಕೋಟಿ ರೂ. ಎಚ್‌ಯುಎಫ್‌ನ ಚರ ಆಸ್ತಿ ಮೌಲ್ಯ 46.52 ಕೋಟಿ ರೂಪಾಯಿ ಮತ್ತು ಮೋಕ್ಷಜ್ಞ ತಾರಕ ರಾಮ ತೇಜ ಅವರ ಮೌಲ್ಯ 11.11 ಕೋಟಿ ರೂಪಾಯಿ.
ಬಾಲಕೃಷ್ಣ, ಟಿಡಿಪಿ ಸಂಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ಅವರು 2022-23ರ ಅವಧಿಯಲ್ಲಿ 10.02 ಕೋಟಿ ರೂ.ಗಳ ಆದಾಯವನ್ನು ಘೋಷಿಸಿದ್ದರೆ ಅದೇ ಹಣಕಾಸು ವರ್ಷದಲ್ಲಿ ಅವರ ಪತ್ನಿಯ ಆದಾಯ 38.46 ಲಕ್ಷ ರೂ. ಎಚ್‌ಯುಎಫ್‌ನ ಆದಾಯ 19.02 ಲಕ್ಷ ಮತ್ತು ಅವರ ಅವಲಂಬಿತ ಮಗನ ಆದಾಯ 18.80 ಲಕ್ಷ ಎಂದಿದ್ದರು.
ಬಾಲಯ್ಯ ಈಗ ಟಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಿರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಬಾಲಯ್ಯ ತಮ್ಮ ಬಾಕ್ಸ್ ಆಫೀಸ್ ದಾಖಲೆಗೆ ಅನುಗುಣವಾಗಿ ಸಾಕಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವರದಿಗಳಿವೆ. ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬಾಲಕೃಷ್ಣ ಅವರು ಮೂರನೇ ಬಾರಿಗೆ ಹಿಂದೂಪುರದಿಂದ ಸ್ಪರ್ಧಿಸುತ್ತಿರುವುದಾಗಿ ತಿಳಿಸಿದ್ದಾರೆ.
"ನನ್ನ ತಂದೆ ಎನ್‌ಟಿ ರಾಮರಾವ್ ಅವರಿಂದ ಸ್ಫೂರ್ತಿ ಪಡೆದು ರಾಜಕೀಯಕ್ಕೆ ಕಾಲಿಟ್ಟಿದ್ದೇನೆ. ನಾನು ಅವರನ್ನು ಎಂದಿಗೂ ನಿರಾಶೆಗೊಳಿಸುವುದಿಲ್ಲ ಎಂದು ತಿಳಿದಿರುವ ಹಿಂದೂಪುರದ ಜನರು ನನ್ನ ಮೇಲೆ ತಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಸುರಿಸುತ್ತಿದ್ದಾರೆ. ಅಣ್ಣಾ ಕ್ಯಾಂಟೀನ್ ಹಿಂದೂಪುರದಲ್ಲಿ ಹೈಲೈಟ್ ಆಗಿ ಉಳಿದಿದೆ" ಎಂದು ಮತದಾರರ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.












Click it and Unblock the Notifications