ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.18ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ

By Mahesh
|
Google Oneindia Kannada News

Nationwide bank employees strike on Dec 18
ನವದೆಹಲಿ, ಡಿ.16: ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಮುಷ್ಕರಕ್ಕೆ ಬ್ಯಾಂಕ್ ನೌಕರರ ಒಕ್ಕೂಟಗಳು ಕರೆ ನೀಡಿವೆ. ಹೀಗಾಗಿ, ಬುಧವಾರ(ಡಿ.18) ದಂದು ಸಂಪೂರ್ಣವಾಗಿ ಬ್ಯಾಂಕ್ ವಹಿವಾಟು ವ್ಯತ್ಯಯಗೊಳ್ಳುವ ಸಾಧ್ಯತೆ ಇದೆ. ಸುಮಾರು 10 ಲಕ್ಷಕ್ಕೂ ಅಧಿಕ ಬ್ಯಾಂಕ್ ಸಿಬ್ಬಂದಿ ದೇಶವ್ಯಾಪಿ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಹಾಗೂ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘಗಳು ಜಂಟಿಯಾಗಿ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಎಲ್ಲಾ ಬ್ಯಾಂಕ್ ಸಿಬ್ಬಂದಿ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಗುರುಮೂರ್ತಿ ತಿಳಿಸಿದ್ದಾರೆ.

ಬೇಡಿಕೆಗಳು ಈಡೇರದಿದ್ದರೆ ಅನಿರ್ಧಿಷ್ಟ ಅವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಸಂಘಟನೆಗಳು ಎಚ್ಚರಿಸಿವೆ. ಮಂಗಳವಾರ ಈ ಬಗ್ಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಆರ್ ಬಿಐ ತನ್ನ ನಿಲುವು ಬದಲಾಯಿಸದಿದ್ದರೆ ಬುಧವಾರದ ಮುಷ್ಕರ ಖಚಿತ ಎಂದು ತಿಳಿದು ಬಂದಿದೆ.

ಬೇಡಿಕೆಗಳೇನು? : ವರ್ಷದಿಂದ ಬಾಕಿ ಉಳಿದಿರುವ ವೇತನ ಪರಿಷ್ಕರಣೆ ತಕ್ಷಣವೇ ಜಾರಿಗೊಳಿಸುವುದು, ವಿದೇಶಿ ಬ್ಯಾಂಕ್ ಗಳನ್ನು ರಾಷ್ಟ್ರೀಯ ಬ್ಯಾಂಕ್ ಗಳಂತೆಯೇ ಭಾರತೀಯ ರಿಸರ್ವ್ ಬ್ಯಾಂಕ್ ಪರಿಗಣಿಸುತ್ತಿರುವುದನ್ನು ನೌಕರರ ಸಂಘಟನೆಗಳು ಒಕ್ಕೊರಲಿನಿಂದ ಖಂಡಿಸಿವೆ.

ಬ್ಯಾಂಕುಗಳ ಖಾಸಗೀಕರಣ, ಬ್ಯಾಂಕುಗಳ ವಿಲೀನ, ಕಾರ್ಪೊರೇಟ್ ಹೌಸ್ ಗಳಿಗೆ ಲೈಸನ್ಸ್ ನೀಡಿಕೆ, ಕಾರ್ಪೊರೇಟ್ ಗಳಿಂದ ಸಾಲ ಹಿಂಪಡೆಯುವಿಕೆಯಲ್ಲಿ ವಿಳಂಬ ಇವೇ ಮುಂತಾದ ವಿಷಯಗಳ ಬಗ್ಗೆ 'ಆರ್ ಬಿಐ ಧೋರಣೆ ಖಂಡಿಸಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್ ವೆಂಕಟಾಚಲ ಅವರು ಬಾಂಬೆ ಷೇರುಪೇಟೆಗೆ ಮಾಹಿತಿ ನೀಡಿದ್ದಾರೆ.

ವಿದೇಶಿ ಬ್ಯಾಂಕ್ ­ಗಳಿಗೆ ರತ್ನಗಂಬಳಿ ಸ್ವಾಗತ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕ್ರಮ­ವನ್ನು ವಿರೋಧಿಸಿರುವ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ (ಯುಎಫ್ ಬಿಯು) ಡಿ. 18ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.[ಮಲ್ಯ ಸೇರಿ ಟಾಪ್ ದೊಡ್ಡ ಸಾಲಗಾರರ ಪಟ್ಟಿ]

ಬಂದ್ ಗೆ ಸಾರ್ವಜನಿಕ ರಂಗದ ಬ್ಯಾಂಕ್‌ಗಳು, ಖಾಸಗಿ ವಲಯದ ಬ್ಯಾಂಕ್‌ಗಳು, ವಿದೇಶಿ ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣಾ ಬ್ಯಾಂಕ್‌ಗಳ ಮತ್ತು ಸಹಕಾರಿ ಬ್ಯಾಂಕ್‌ಗಳು ಹೀಗೆ 9 ರಂಗದ ಬ್ಯಾಂಕ್ ಯೂನಿಯನ್ ಗಳು ಇದಕ್ಕೆ ಸಮ್ಮತಿಸಿದೆ.

ಬ್ಯಾಂಕ್‌ ಕೆಲಸಗಳನ್ನು ಹೊರಗುತ್ತಿಗೆ ನೀಡುವುದು, ಖಾಂಡೆಲ್‌ವಾಲ ಸಮಿತಿ ಶಿಫಾರಸ್ಸನ್ನು ವಜಾಗೊಳಿಸುವುದು, ಬ್ಯಾಂಕುಗಳಲ್ಲಿ ತನ್ನ ಪಾಲನ್ನು ಸರ್ಕಾರ ಕಡಿಮೆ ಮಾಡುವುದು ಮತ್ತು ವಿದೇಶಿ ಬ್ಯಾಂಕ್ ಹೂಡಿಕೆದಾರರಿಗೆ ಹೆಚ್ಚುವರಿ ಮತದಾನದ ಹಕ್ಕನ್ನು ನೀಡುವುದಕ್ಕೆ ಬ್ಯಾಂಕ್ ಯೂನಿಯನ್ ವಿರೋಧ ವ್ಯಕ್ತಪಡಿಸುತ್ತಿದೆ. [ ಓದಿ : ರಘುರಾಮ ರಾಜನ್ ಮುಂದಿರುವ 5 ಸವಾಲುಗಳು ]

English summary
One million bank employees across the country would go on strike on Wednesday(Dec.18), demanding early wage revision and a halt on banking reforms said general secretary, All India Banks Employees Association C.H Venkatachalam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X