ನಾರಾಯಣಮೂರ್ತಿ ಮನವಿ ತಿರಸ್ಕರಿಸಿದ ಇನ್ಫೋಸಿಸ್ ಆಡಳಿತ ಮಂಡಳಿ

ಇಸ್ರೇಲ್ ಸಂಸ್ಥೆ ಖರೀದಿಯ ವಿಚಾರದಲ್ಲಿನ ತನಿಖಾ ವರದಿಯನ್ನು ಬಹಿರಂಗಗೊಳಿಸಬೇಕು ಎನ್ನುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಮನವಿಯನ್ನು ಸಂಸ್ಥೆಯ ಆಡಳಿತ ಮಂಡಳಿ ತಿರಸ್ಕರಿಸಿದೆ.

ಬೆಂಗಳೂರು, ಆ 4: ಇಸ್ರೇಲ್ ಸಂಸ್ಥೆ ಖರೀದಿಯ ವಿಚಾರದಲ್ಲಿನ ತನಿಖಾ ವರದಿಯನ್ನು ಬಹಿರಂಗಗೊಳಿಸಬೇಕು ಎನ್ನುವ ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ಮನವಿಯನ್ನು ಸಂಸ್ಥೆಯ ಆಡಳಿತ ಮಂಡಳಿ ತಿರಸ್ಕರಿಸಿದೆ.

ಇಸ್ರೇಲ್ ಮೂಲದ ಪನಯಾ ಸಂಸ್ಥೆಯನ್ನು ಇನ್ಫೋಸಿಸ್ 1,300 ಕೋಟಿ ರೂಪಾಯಿಗೆ ಖರೀದಿಸಿತ್ತು. ಈ ವ್ಯವಹಾರದಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿತ್ತು ಎಂದು ಅನಾಮಧೇಯ ವ್ಯಕ್ತಿಗಳು ಷೇರು ಪೇಟೆ ನಿಯಂತ್ರಣ ಮಂಡಳಿಗೆ ಪತ್ರ ಬರೆದಿದ್ದರು.

ಈ ಪತ್ರ ಬಹಿರಂಗವಾಗುತ್ತಿದ್ದಂತೇ ಇನ್ಫೋಸಿಸ್ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿತ್ತು. ತನಿಖಾ ವರದಿಯಲ್ಲಿ ಇಸ್ರೇಲ್ ಕಂಪೆನಿ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಈ ಡೀಲ್ ಪಾರದರ್ಶಕವಾಗಿದೆ ಎನ್ನುವ ವರದಿ ಬಂದಿತ್ತು.

Infosys has turned down Narayana Murthy plea on probe report

ವರದಿಯಲ್ಲಿನ ಅಂಶಗಳನ್ನು ಬಹಿರಂಗಗೊಳಿಸಬೇಕೆಂದು ನಾರಾಯಣಮೂರ್ತಿ ಆಡಳಿತ ಮಂಡಳಿಗೆ ಮೂರು ವಾರದ ಹಿಂದೆ ಪತ್ರ ಬರೆದಿದ್ದರು. ಮೂರ್ತಿ ಮನವಿಯನ್ನು ಇನ್ಫೋಸಿಸ್ ತಿರಸ್ಕರಿಸುವ ಮೂಲಕ, ಸಂಸ್ಥೆಯಲ್ಲಿನ ಆಡಳಿತ ಮಂಡಳಿಯ ಕಲಹ ಮತ್ತೆ ಬಹಿರಂಗವಾಗಿದೆ.

ವೈಯಕ್ತಿಕ ಹಾಗೂ ಔದ್ಯೋಗಿಕ ಜೀವನದಲ್ಲೇ ಇನ್ಫೋಸಿಸ್ ಅಧ್ಯಕ್ಷ ಸ್ಥಾನ ತ್ಯಜಿಸಿದ್ದು ತುಂಬ ವಿಷಾದಕರವಾದ ನಿರ್ಧಾರ. ಅಧ್ಯಕ್ಷ ಸ್ಥಾನದಿಂದ 2014ರಲ್ಲಿ ಕೆಳಗೆ ಇಳಿಯುವಾಗ ಸಹ ಸಂಸ್ಥಾಪಕರ ಮಾತು ಕೇಳಬೇಕಾಗಿತ್ತು. ಅದು ನನ್ನ ಜೀವನದಲ್ಲಿನ ಅತಿ ದೊಡ್ಡ ವಿಷಾದದ ನಿರ್ಧಾರ ಎಂದು ಎನ್ ಆರ್ ನಾರಾಯಣಮೂರ್ತಿ ಇತ್ತೀಚೆಗೆ ಹೇಳಿದ್ದನು ಸ್ಮರಿಸಿಕೊಳ್ಳಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+