ಪಿಂಚಣಿ ಪಡೆಯಲು ಉದ್ಯೋಗದಾತರ ಅಪ್ಪಣೆ ಬೇಕಿಲ್ಲ

Subscribe to Oneindia Kannada

ನವದೆಹಲಿ, ಆಗಸ್ಟ್ , 19: ಕೇಂದ್ರ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಗೆ ಸಂಬಂಧಿಸಿದ 10-ಡಿ ಫಾರ್ಮ್ ಸರಳೀಕರಣಗೊಳಿಸಿದೆ.

ಇನ್ನು ಮುಂದೆ ಉದ್ಯೋಗದಾತರ(ಎಂಪ್ಲಾಯರ್) ದೃಢೀಕರಣ ಪಡೆಯದೇ ವಂತಿಗೆದಾರರು( ಎಂಪ್ಲಾಯ್) ತಮ್ಮ ಪಿಂಚಣಿ ಮೊತ್ತವನ್ನು ನಿಗದಿಪಡಿಸಬಹುದಾಗಿದೆ. 1995ರ ಪಿಂಚಣಿ ಯೋಜನೆ ಪ್ರಕಾರ, ವಂತಿಗೆದಾರರು ಪಿಂಚಣಿ ಕ್ಲೇಮ್ ಅರ್ಜಿಯನ್ನು ಉದ್ಯೋಗದಾತರ ದೃಢೀಕರಣ ಪಡೆದು ಸಲ್ಲಿಸಬೇಕಿತ್ತು. ಆದರೆ ಈಗ ಇದು ಮತ್ತಷ್ಟು ಸುಲಭವಾಗಲಿದೆ.[ದಿನಗೂಲಿ ಪರಿಷ್ಕರಣೆಗೆ ಮುಂದಾದ ಕೇಂದ್ರ ಸರ್ಕಾರ|]

Fix pension: No employer attestation needed, EPFO

ಎಂಪ್ಲಾಯ್ಸ್ ಪ್ರಾವಿಡೆಂಡ್ ಫಂಡ್ ಆರ್ಗನೈಜೇಶನ್ (ಇಪಿಎಫ್ ಒ) ತಿಳಿಸಿದೆ. ಭವಿಷ್ಯನಿಧಿ ಸದಸ್ಯತ್ವ ಪಡೆದಿದ್ದ ಕಾರ್ಮಿಕರು ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯನ್ನು ಯುಎಎನ್ ಜತೆಗೆ ಸೇರ್ಪಡೆಗೊಳಿಸಿ, ಉದ್ಯೋಗದಾತರ ದೃಢೀಕರಣದೊಂದಿಗೆ ಇಪಿಎಫ್ ಗೆ ಸಲ್ಲಿಕೆ ಮಾಡಬೇಕಿತ್ತು.[ಭವಿಷ್ಯ ನಿಧಿ ನೀತಿ ಬದಲು, ಸರ್ಕಾರ ಕೈ ಸುಟ್ಟಿಕೊಂಡಿದ್ದು ಹೇಗೆ?]

ಹೊಸ ನೀತಿ ಈ ಉದ್ಯೋಗದಾತರ ಒಪ್ಪಿಗೆ ಪಡೆಯುವುದಕ್ಕೆ ಅಂತ್ಯ ಹಾಡಲಿದ್ದು ನೇರವಾಗಿ ಸಲ್ಲಿಕೆ ಮಾಡುವ ಅವಕಾಶವನ್ನು ಕೊಡಮಾಡುತ್ತಿದೆ. ಹೊಸ ಯೋಜನೆ 7.34 ಕೋಟಿ ಸದಸ್ಯರಿಗೆ ಅನುಕೂಲ ಮಾಡಿಕೊಡಲಿದೆ ಎಂದು ಅಂದಾಜಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bringing relief to pension seekers, retirement fund body Employees' Provident Fund Organisation [EPFO] has introduced a simplified Universal Account Number based form - 10-D, for its subscribers for fixing their pension without employers attestation. So far, anyone seeking pension under Employees Pension Scheme 1995 had to get his or her pension claim application attested from the employer to fix the retirement benefit after superannuation. So far, more than 7.34 crore UAN have been allotted to EPF members.
Please Wait while comments are loading...