ದೀಪಾವಳಿ ಧಮಾಕಾ ಘೋಷಿಸಿದ ರಿಲಯನ್ಸ್ ಜಿಯೋ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 19: ಕೈಗೆಟುಕುವ ಸುಲಭ ಬೆಲೆಗಳಲ್ಲಿ ಜಿಯೋ ಡಿಜಿಟಲ್ ಲೈಫ್ ಸವಲತ್ತುಗಳನ್ನು ಮುಂದುವರೆಸಲಿರುವ ಹೊಸ ಧನ್ ಧನಾ ಧನ್ ಟ್ಯಾರಿಫ್ ಪ್ಲಾನುಗಳನ್ನು ಜಿಯೋ ಇಂದು ಪರಿಚಯಿಸಿದೆ.

ಬ್ಯಾಂಕಿಂಗ್ ವಲಯಕ್ಕೆ ಕಾಲಿಡಲಿರುವ ರಿಲಯನ್ಸ್ ಜಿಯೋ

ಅಕ್ಟೋಬರ್ 19ರಿಂದ ಜಾರಿಗೆ ಬರುವ ಈ ಪ್ಲಾನುಗಳು ಸದ್ಯದ ಜಿಯೋ ಚಂದಾದಾರರು ಹಾಗೂ ಹೊಸ ಗ್ರಾಹಕರೆಲ್ಲರಿಗೂ ಲಭ್ಯವಾಗಲಿವೆ.

ರಿಲಯನ್ಸ್ ಜಿಯೋನಿಂದ ಕ್ಯಾಶ್ ಬ್ಯಾಕ್

ದೀಪಾವಳಿಯ ಈ ಸಂದರ್ಭದಲ್ಲಿ ಜಿಯೋ ರೂ. 149ರ ಜನಪ್ರಿಯ ಪ್ಲಾನ್ ಅನ್ವಯ ಡಬಲ್ ಧಮಾಕಾ ನೀಡುತ್ತಿದೆ. ಈ ಪ್ಲಾನಿನಲ್ಲಿರುವ ಸದ್ಯದ ಎರಡು ಜಿಬಿ ಮಿತಿಯನ್ನು ಹೆಚ್ಚಿಸಿ ಇದೀಗ ಗ್ರಾಹಕರಿಗೆ ಪ್ರತಿ ಬಿಲ್ಲಿಂಗ್ ಸೈಕಲ್‌ನಲ್ಲೂ 4 ಜಿಬಿಗಿಂತ ಹೆಚ್ಚಿನ ಡೇಟಾವನ್ನು ನೀಡಲಾಗುತ್ತಿದೆ. ಅಪರಿಮಿತ ದೂರವಾಣಿ ಕರೆಗಳು ಹಾಗೂ ಜಿಯೋ ಆಪ್ಸ್ ಸೇವೆ ಹಿಂದಿನಂತೆಯೇ ಮುಂದುವರೆಯಲಿದೆ.

4ಜಿ ಫೋನ್ ಗ್ರಾಹಕರ ಕೈ ಸೇರುವುದು ಯಾವಾಗ?

ಪ್ಲಾನ್ ಕೊಡುಗೆಯಂತೆ ಅತಿವೇಗದ ಡೇಟಾ, ಎಫ್‌ಯುಪಿ ವೇಗದಲ್ಲಿ ಅಪರಿಮಿತ ಸಂಪರ್ಕ, ಅಪರಿಮಿತ ಲೋಕಲ್, ಎಸ್‌ಟಿಡಿ ಹಾಗೂ ರಾಷ್ಟ್ರೀಯ ರೋಮಿಂಗ್ ಕರೆಗಳ ಅನುಕೂಲವನ್ನು ಈ ಪ್ಲಾನುಗಳ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ರೂ. 459ರ ಹೊಸ ಪ್ಲಾನ್

ರೂ. 459ರ ಹೊಸ ಪ್ಲಾನ್

ಜಿಯೋ ಪ್ರೈಮ್ ಸದಸ್ಯರು ಮೂರು ತಿಂಗಳ ಅವಧಿಗೆ (ಪ್ರೀಪೇಯ್ಡ್ ಗ್ರಾಹಕರಿಗೆ 84 ದಿನಗಳು) ಪ್ರತಿ ದಿನವೂ ಒಂದು ಜಿಬಿ ಅತಿವೇಗದ ಡೇಟಾ, ಆನಂತರ ಸೀಮಿತ ವೇಗದ ಡೇಟಾ, ಅಪರಿಮಿತ ದೂರವಾಣಿ ಕರೆಗಳು ಹಾಗೂ ಜಿಯೋ ಆಪ್ಸ್ ಸೇರಿದ ಅಪರಿಮಿತ ಸೇವೆಗಳನ್ನು ಪಡೆಯಬಹುದಾಗಿದೆ.

509ರ ಪ್ಲಾನ್

509ರ ಪ್ಲಾನ್

ಹೆಚ್ಚಿನ ಡೇಟಾ ಬಳಸುವವರಿಗಾಗಿ ಜಿಯೋ ರೂ. 509ರ ಪ್ಲಾನ್ ಪರಿಚಯಿಸಿದ್ದು, ಇದರ ಅನ್ವಯ ಗ್ರಾಹಕರು 49 ದಿನಗಳವರೆಗೆ ಪ್ರತಿದಿನವೂ 2 ಜಿಬಿ ಅತಿವೇಗದ ಡೇಟಾ ಹಾಗೂ ಇತರ ಅಪರಿಮಿತ ಸೇವೆಗಳನ್ನು ಬಳಸಬಹುದಾಗಿದೆ.

ಈ ಪ್ಲಾನ್ ಅತಿವೇಗದ ಡೇಟಾ ಸಂಪರ್ಕವನ್ನು ಭಾರತೀಯ ದೂರಸಂಪರ್ಕ ಕ್ಷೇತ್ರದಲ್ಲೇ ಅತ್ಯಂತ ಕಡಿಮೆ ಬೆಲೆಗೆ - ಪ್ರತಿ ಜಿಬಿಗೆ ರೂ. 5.2 ಮಾತ್ರ - ನೀಡುತ್ತಿದೆ ಎನ್ನುವುದು ವಿಶೇಷ. ಯಾವುದೇ ಮಿತಿಗಳಿಲ್ಲದೆ ಹೆಚ್ಚು ವೇಗದ ಡೇಟಾ ಬೇಕು ಎನ್ನುವವರಿಗೆ ಜಿಯೋ ದೀರ್ಘಾವಧಿಯ ನಾನ್-ಎಫ್‌ಯುಪಿ ಪ್ಲಾನುಗಳನ್ನು ಪರಿಚಯಿಸಿದೆ.

ರೂ. 999 ಪ್ಲಾನ್

ರೂ. 999 ಪ್ಲಾನ್

ರೂ. 999 ಪ್ಲಾನ್ 3 ತಿಂಗಳ ಅವಧಿಗೆ 60 ಜಿಬಿ ಅತಿವೇಗದ ಡೇಟಾ ಸಂಪರ್ಕ ನೀಡಿದರೆ ರೂ. 1999 ಪ್ಲಾನ್ ಅನ್ವಯ 6 ತಿಂಗಳ ಅವಧಿಗೆ ಯಾವುದೇ ಮಿತಿಗಳಿಲ್ಲದ 125 ಜಿಬಿ ಅತಿವೇಗದ ಡೇಟಾ ಸಂಪರ್ಕ ದೊರಕಲಿದೆ. ಗ್ರಾಹಕರು ರೂ. 4999ರ ವಾರ್ಷಿಕ ಪ್ಲಾನ್ ಅನ್ನೂ ಆಯ್ದುಕೊಳ್ಳಬಹುದಾಗಿದ್ದು ಆ ಮೂಲಕ ಪ್ಲಾನ್ ಅವಧಿಯಲ್ಲಿ 350 ಜಿಬಿ ಅತಿವೇಗದ ಡೇಟಾವನ್ನು ಯಾವುದೇ ಮಿತಿಗಳಿಲ್ಲದೆ ಬಳಸಬಹುದಾಗಿದೆ.

ದೈನಿಕ ಹಾಗೂ ಸಾಪ್ತಾಹಿಕ ಪ್ಯಾಕ್‌

ದೈನಿಕ ಹಾಗೂ ಸಾಪ್ತಾಹಿಕ ಪ್ಯಾಕ್‌

ಸಣ್ಣ ಮೊತ್ತದ ರೀಚಾರ್ಜ್‌ಗಳಿಗೆ ಅನ್ವಯವಾಗುವಂತೆ ಜಿಯೋ ಸುಲಭ ಬೆಲೆಯ ದೈನಿಕ ಹಾಗೂ ಸಾಪ್ತಾಹಿಕ ಪ್ಯಾಕ್‌ಗಳನ್ನೂ ಪರಿಚಯಿಸಿದೆ. ಈ ಪ್ಲಾನುಗಳ ಅನ್ವಯ ದಿನಕ್ಕೆ ರೂ. 19, ವಾರಕ್ಕೆ ರೂ. 52 ಅಥವಾ ಎರಡು ವಾರಗಳಿಗೆ ರೂ. 98 ಪಾವತಿಸುವ ಮೂಲಕ ಗ್ರಾಹಕರು ಉಚಿತ ಕರೆ, ಎಸ್ಸೆಮ್ಮೆಸ್ ಹಾಗೂ ಅಪರಿಮಿತ ಡೇಟಾ (ದಿನಕ್ಕೆ 0.15 ಜಿಬಿ) ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance Jio has come with a new set of Dhan Dhana Dhan plans which will cost more than the previous plans

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ