ಕರ್ನಾಟಕದ ಈ ಮೂರು ಮಹಾನಗರಗಳಲ್ಲಿ ಜಿಯೋ 5G ಸೇವೆ ಆರಂಭ: ಯಾವುದು ತಿಳಿಯಿರಿ
ನವದೆಹಲಿ, ಜನವರಿ 12: ರಿಲಯನ್ಸ್ ಜಿಯೋ (Reliance Jio) ಮತ್ತು ಏರ್‌ಟೆಲ್ (Airtel) 5G ಸೇವೆಗಳು ಭಾರತದ ವಿವಿಧ ನಗರಗಳಲ್ಲಿ ಆರಂಭಗೊಂಡಿವೆ. ಜಿಯೋ ತನ್ನ 5G ಸೇವೆಯನ್ನು ಇತರ ಟೆಲಿಕಾಂ ಆಪರೇಟರ್‌ಗಳಿಗಿಂತ ವೇಗವಾಗಿ ವಿಸ್ತರಿಸುತ್ತಿದೆ.
ಜನವರಿ 10 ರಂದು, Reliance Jio ತನ್ನ 5G ಸೇವೆಯನ್ನು ಗುವಾಹಟಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ಚೆರ್ಟಾಲ, ವಾರಂಗಲ್, ಕರೀಂನಗರ ಮತ್ತು ಸೊಲ್ಲಾಪುರ ಸೇರಿದಂತೆ ದೇಶದ 8 ಹೊಸ ನಗರಗಳಲ್ಲಿ ಪ್ರಾರಂಭಿಸುವುದಾಗಿ ಘೋಷಿಸಿದೆ.
Jio ಇನ್ನೂ ನಿರ್ದಿಷ್ಟ 5G ಪ್ಲಾನ್‌ಗಳನ್ನು ಪ್ರಾರಂಭಿಸಿಲ್ಲ. ಆದರೆ, 239 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಗಳನ್ನು ಹೊಂದಿರುವ ಬಳಕೆದಾರರಿಗೆ ತಮ್ಮ 5G ಸಕ್ರಿಯಗೊಳಿಸಿದ ಫೋನ್‌ನಲ್ಲಿ 5G ಬಳಸಲು ಅನುಮತಿ ನೀಡಿದೆ. ಕಾಲ್ ಡ್ರಾಪ್ ಸಮಸ್ಯೆಯ ಜೊತೆಗೆ, 5G ನಲ್ಲಿರುವ ಬಳಕೆದಾರರು ಡೇಟಾ ಸಮಸ್ಯೆಗಳನ್ನು ಸಹ ಎದುರಿಸುತ್ತಿದ್ದಾರೆ.

5G ಚಾಲನೆಯಲ್ಲಿರುವ ಮೊಬೈಲ್ ಡೇಟಾ ಕಣ್ಣು ಮಿಟುಕಿಸುವುದರೊಳಗೆ ಮುಗಿದುಹೋಗುತ್ತದೆ. ಆದ್ದರಿಂದ, ನಿಮ್ಮ ಫೋನ್‌ನಲ್ಲಿ 5G ಗೆ ಬದಲಾಯಿಸಲು ನೀವು ಯೋಜಿಸುತ್ತಿದ್ದರೆ, ಒಮ್ಮೆ ಯೋಚನೆ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ. ದೇಶದ ಎಲ್ಲಾ ಭಾಗಗಳಲ್ಲಿ 5G ಲಾಂಚ್ ಆದ ನಂತರ ಈ ಸಮಸ್ಯೆಗಳು ಬಗಿಹರಿಯಬಹುದು ಎಂದು ಹೇಳಲಾಗುತ್ತಿದೆ.
Jio 5G ಲಭ್ಯವಿರುವ ಭಾರತದ ನಗರಗಳ ಪಟ್ಟಿ ಇಲ್ಲಿದೆ
-ಅಕ್ಟೋಬರ್ 4, 2022: ದೆಹಲಿ, ಮುಂಬೈ, ವಾರಣಾಸಿ, ಕೋಲ್ಕತ್ತಾ
-ಅಕ್ಟೋಬರ್ 22, 2022: ನಾಥದ್ವಾರ, ಚೆನ್ನೈ
-ನವೆಂಬರ್ 10, 2022: ಬೆಂಗಳೂರು, ಹೈದರಾಬಾದ್
-ನವೆಂಬರ್ 11, 2022: ಗುರುಗ್ರಾಮ್, ನೋಯ್ಡಾ, ಘಾಜಿಯಾಬಾದ್, ಫರಿದಾಬಾದ್
-ನವೆಂಬರ್ 23, 2022: ಪುಣೆ
-ನವೆಂಬರ್ 25, 2022: ಗುಜರಾತ್‌ನ 33-ಜಿಲ್ಲೆಗಳು
-ಡಿಸೆಂಬರ್ 14, 2022: ಉಜ್ಜಯಿನಿ ದೇವಾಲಯಗಳು

-ಡಿಸೆಂಬರ್ 20, 2022: ಕೊಚ್ಚಿ, ಗುರುವಾಯೂರ್ ದೇವಸ್ಥಾನ
-ಡಿಸೆಂಬರ್ 26, 2022: ತಿರುಮಲ, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು,
-ಡಿಸೆಂಬರ್ 28, 2022: ಲಕ್ನೋ, ತಿರುವನಂತಪುರ, ಮೈಸೂರು, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್, ದೇರಬಸ್ಸಿ
-ಡಿಸೆಂಬರ್ 29, 2022: ಭೋಪಾಲ್, ಇಂದೋರ್
-ಜನವರಿ 5, 2023: ಭುವನೇಶ್ವರ್, ಕಟಕ್
-ಜನವರಿ 6, 2023: ಜಬಲ್ಪುರ್, ಗ್ವಾಲಿಯರ್, ಲುಧಿಯಾನ, ಸಿಲಿಗುರಿ
-ಜನವರಿ 7, 2023: ಜೈಪುರ, ಜೋಧಪುರ, ಉದಯಪುರ
-ಜನವರಿ 9, 2023: ಆಗ್ರಾ, ಕಾನ್ಪುರ್, ಮೀರತ್, ಪ್ರಯಾಗರಾಜ್, ತಿರುಪತಿ, ನೆಲ್ಲೂರು, ಕೋಝಿಕ್ಕೋಡ್, ತ್ರಿಶೂರ್, ನಾಗ್ಪುರ, ಅಹಮದ್‌ನಗರ
-ಜನವರಿ 10, 2023: ಗುವಾಹಟಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ, ಚೆರ್ಟಾಲ, ವಾರಂಗಲ್, ಕರೀಂನಗರ, ಸೊಲ್ಲಾಪುರ
ಮಂಗಳೂರಿನ ಜಿಯೋ ವಕ್ತಾರರು ಹೇಳಿದ್ದೇನು?
ಈ ಸಂದರ್ಭದಲ್ಲಿ ಮಾತನಾಡಿರುವ ಮಂಗಳೂರಿನ ಜಿಯೋ ವಕ್ತಾರರು, 'ಮಂಗಳೂರು ನಗರದಲ್ಲಿ 5ಜಿ ಅನ್ನು ಹೊರತರಲು ನಾವು ಹೆಮ್ಮೆಪಡುತ್ತೇವೆ ಮತ್ತು ನಾವು ಟ್ರೂ 5ಜಿ ಸೇವೆಗಳನ್ನು ಹೊರತರಲು ಪ್ರಾರಂಭಿಸಿದ ನಂತರ ನಮ್ಮ ಅತಿದೊಡ್ಡ ಅನಾವರಣದಲ್ಲಿ ಇದೂ ಒಂದಾಗಿದೆ. ಜಿಯೋ ಟ್ರೂ 5ಜಿ ತಂತ್ರಜ್ಞಾನ ರೂಪಾಂತರದ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ' ಎಂದು ಹೇಳಿದ್ದಾರೆ.
'ಮಂಗಳೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರವಾಗಿದೆ. ಜಿಯೋದ ಟ್ರೂ 5ಜಿ ಸೇವೆಗಳ ಪ್ರಾರಂಭದೊಂದಿಗೆ, ಈ ಪ್ರದೇಶದ ಗ್ರಾಹಕರು ಕೇವಲ ಉತ್ತಮ ದೂರಸಂಪರ್ಕ ಜಾಲವನ್ನು ಪಡೆಯುತ್ತಾರಷ್ಟೇ ಅಲ್ಲ, ಜತೆಗೆ ಇ-ಆಡಳಿತ, ಶಿಕ್ಷಣ, ಆಟೋಮೇಷನ್, ಕೃತಕ ಬುದ್ಧಿಮತ್ತೆ, ಗೇಮಿಂಗ್, ಆರೋಗ್ಯ, ಕೃಷಿ, ಐಟಿ ಕ್ಷೇತ್ರಗಳಲ್ಲಿ ಮತ್ತು ಎಸ್ಎಂಇಗಳು ಅನಂತ ಬೆಳವಣಿಗೆಯ ಅವಕಾಶಗಳನ್ನು ಪಡೆಯುತ್ತವೆ' ಎಂದು ಹೇಳಿದ್ದಾರೆ.

'ಜಿಯೋ ಇಂಜಿನಿಯರ್ಗಳು ಟ್ರೂ-5ಜಿ ಪ್ರಯೋಜನಗಳನ್ನು ಪ್ರತಿಯೊಬ್ಬ ಭಾರತೀಯರಿಗೂ ತಲುಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರಿಂದ ನಮ್ಮ ಮಹಾನ್ ದೇಶದ ಪ್ರತಿ ನಾಗರಿಕರು ಈ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಮತ್ತು ಅದ್ಭುತ ಪ್ರಯೋಜನಗಳನ್ನು ಅನುಭವಿಸಬಹುದು.ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ,' ಎಂದು ತಿಳಿಸಿದ್ದಾರೆ.
ಜನವರಿ 10ರಿಂದ ಕರ್ನಾಟಕ (ಹುಬ್ಬಳ್ಳಿ-ಧಾರವಾಡ, ಬೆಳಗಾವಿ), ಕೇರಳ (ಚೇರ್ತಲ), ತೆಲಂಗಾಣ (ವಾರಂಗಲ್, ಕರೀಂನಗರ), ಅಸ್ಸಾಂ (ಗುವಾಹತಿ) ಮತ್ತು ಮಹಾರಾಷ್ಟ್ರ (ಸೋಲಾಪುರ) 5 ರಾಜ್ಯಗಳ ಮಂಗಳೂರು ಮತ್ತು 7 ಇತರ ನಗರಗಳಲ್ಲಿ ಜಿಯೋ ಬಳಕೆದಾರರನ್ನು ಆಹ್ವಾನಿಸಲಾಗುತ್ತದೆ. ಜಿಯೋ ವೆಲ್ಕಮ್ ಆಫರ್ ಮೂಲಕ ಗ್ರಾಹಕರು 1 ಜಿಬಿಪಿಎಸ್+ ವೇಗದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತ ಡೇಟಾ ಅನುಭವಿಸಬಹುದು.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ











Click it and Unblock the Notifications