Get Updates
Get notified of breaking news, exclusive insights, and must-see stories!

Reliance Scholorship: ರಿಲಯನ್ಸ್ ಫೌಂಡೇಶನ್‌ನಿಂದ 5,000 ಪದವಿ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ವಿದ್ಯಾರ್ಥಿವೇತನ

27 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳ 5,000 ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನಲ್ಲಿ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ರೂ.ವರೆಗೆ ಅನುದಾನ ಪಡೆಯುತ್ತಾರೆ ಮತ್ತು ಈಗಾಲೇ ಸಕ್ರಿಯವಾಗಿರುವ ಹಳೆಯ ವಿದ್ಯಾರ್ಥಿಗಳ ನೆಟ್‌ವರ್ಕ್‌ನ ಭಾಗವಾಗುವ ಅವಕಾಶವನ್ನು ಪಡೆಯಲಿದ್ದಾರೆ.

ಈ ಕುರಿತು ಮಾತನಾಡಿರುವ ರಿಲಯನ್ಸ್ ಫೌಂಡೇಶನ್ ಸಿಇಒ ಜಗನ್ನಾಥ ಕುಮಾರ್, "ಉತ್ತಮ ಶಿಕ್ಷಣವನ್ನು ಪಡೆಯುವ ಯುವ ಜನರ ಕನಸಿಗೆ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿ ವೇತನವು ರೆಕ್ಕೆಗಳನ್ನು ನೀಡಲಿದೆ ಎಂದು ಆಶಿಸುತ್ತೇವೆ. ಇದು ವೈವಿಧ್ಯಮಯ ವಿದ್ಯಾರ್ಥಿಗಳ ಗುಂಪು, ಏಕೆಂದರೆ ವಿವಿಧ ಅಧ್ಯಯನ ವಿಭಾಗಗಳಿಂದ, ಭಾರತದ ಬಹುತೇಕ ಎಲ್ಲಾ ರಾಜ್ಯಗಳಿಂದ ಆಯ್ಕೆಯಾಗಿದ್ದಾರೆ ಮತ್ತು ಹುಡುಗಿಯರು ಮತ್ತು ಹುಡುಗರನ್ನು ಸಮಾನವಾಗಿ ಪ್ರತಿನಿಧಿಸುತ್ತಿದ್ದಾರೆ," ಎಂದರು.

 Reliance Foundation Announces Scholarship of 2 Lakhs For 5000 Degree Students

"ಆಯ್ಕೆಯಾದ ಪ್ರತಿಯೊಬ್ಬರನ್ನು ನಾವು ಅಭಿನಂದಿಸುತ್ತೇವೆ ಮತ್ತು ಅವರು ಭಾರತದ ಪ್ರಗತಿಗೆ ಕೊಡುಗೆ ನೀಡುವುದರೊಂದಿಗೆ ಅವರು ತಮಗಾಗಿ ಬಲವಾದ ಭವಿಷ್ಯವನ್ನು ನಿರ್ಮಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ," ಎಂದು ಲಯನ್ಸ್ ಫೌಂಡೇಶನ್ ಸಿಇಒ ಜಗನ್ನಾಥ ಕುಮಾರ್ ತಿಳಿಸಿದರು.

ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿ ವೇತನವನ್ನು ಯಾವುದೇ ಅಧ್ಯಯನದ ಸ್ಟ್ರೀಮ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ನೀಡಲಾಗುತ್ತದೆ. ಈ ವರ್ಷಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಎಂಜಿನಿಯರಿಂಗ್/ತಂತ್ರಜ್ಞಾನ, ವಿಜ್ಞಾನ, ವೈದ್ಯಕೀಯ, ವಾಣಿಜ್ಯ, ಕಲೆ, ವ್ಯಾಪಾರ/ಮ್ಯಾನೇಜ್‌ಮೆಂಟ್, ಕಂಪ್ಯೂಟರ್ ಅಪ್ಲಿಕೇಶನ್‌ಗಳು, ಕಾನೂನು, ಶಿಕ್ಷಣ, ಆತಿಥ್ಯ, ವಾಸ್ತುಶಿಲ್ಪ ಮತ್ತು ಇತರ ವೃತ್ತಿಪರ ಪದವಿಗಳಿಂದ ಬಂದವರಾಗಿದ್ದಾರೆ.

 Reliance Foundation Announces Scholarship of 2 Lakhs For 5000 Degree Students

2022-23ನೇ ಸಾಲಿನಲ್ಲಿ 4,984ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 40,000 ವಿದ್ಯಾರ್ಥಿಗಳ ಅರ್ಜಿಗಳಲ್ಲಿ ಕಠಿಣ ಆಯ್ಕೆ ಪ್ರಕ್ರಿಯೆಯ ಮೂಲಕ 5,000 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಶೇ.51ರಷ್ಟು ಹುಡುಗಿಯರೇ ಇರುವುದು ವಿಶೇಷ.

ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮರ್ಥ್ಯ ಪರೀಕ್ಷೆ, 12ನೇ ತರಗತಿ ಅಂಕಗಳು ಮತ್ತು ಇತರ ಅರ್ಹತಾ ಮಾನದಂಡಗಳು ಒಳಗೊಂಡಿದೆ. ಕಾರ್ಯಕ್ರಮಕ್ಕೆ ಅಂತರ್ಗತವಾಗಿರುವ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ಈ ಸುತ್ತಿನಲ್ಲಿ 99 ವಿಕಲಚೇತನ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕಾಗಿ ಆಯ್ಕೆ ಮಾಡಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ತನ್ನ ಬದ್ಧತೆಯನ್ನು ಬಲಪಡಿಸುವ ಮೂಲಕ ರಿಲಯನ್ಸ್ ಫೌಂಡೇಶನ್ ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುವುದಾಗಿ ಘೋಷಿಸಿತ್ತು. ಈ ಸ್ಕಾಲರ್‌ಶಿಪ್‌ ಎಲ್ಲರಿಗೂ ಶಿಕ್ಷಣದ ಪ್ರವೇಶವನ್ನು ಸುಲಭಗೊಳಿಸುವ ಮತ್ತು ಭಾರತದ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪೋಷಿಸುವ ರಿಲಯನ್ಸ್‌ನ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ.

1996ರಿಂದ ಉದ್ಯಮಿ ಧೀರೂಭಾಯಿ ಅಂಬಾನಿ ವಿದ್ಯಾರ್ಥಿ ವೇತನವನ್ನು ಮೆರಿಟ್-ಕಮ್-ಮೀನ್ಸ್ ಆಧಾರದ ಮೇಲೆ ಸುಮಾರು 13,000 ಪದವಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅದರಲ್ಲಿ 2,720 ವಿದ್ಯಾರ್ಥಿಗಳು ವಿಕಲಚೇತನರು.

ಆಯ್ದ ವಿದ್ಯಾರ್ಥಿಗಳು ತಮ್ಮ ಆಯ್ಕೆ ಮತ್ತು ಹೆಚ್ಚಿನ ವಿವರಗಳ ಬಗ್ಗೆ ನೇರವಾಗಿ ಸಂವಹನವನ್ನು ಸ್ವೀಕರಿಸುತ್ತಾರೆ. ಅರ್ಜಿದಾರರು ತಮ್ಮ ಅರ್ಜಿಗಳ ಫಲಿತಾಂಶವನ್ನು ತಿಳಿಯಲು www.reliancefoundation.org ಗೆ ಭೇಟಿ ನೀಡಬಹುದು.

2022-23ಕ್ಕೆ ಆಯ್ಕೆಯಾದ ರಿಲಯನ್ಸ್ ಫೌಂಡೇಶನ್ ಸ್ನಾತಕೋತ್ತರ ವಿದ್ಯಾರ್ಥಿವೇತನ ಪ್ರಕಟಣೆ ಜುಲೈನಲ್ಲಿ ಹೊರಬರಲಿದೆ. ರಿಲಯನ್ಸ್ ಫೌಂಡೇಶನ್ ಪದವಿ ವಿದ್ಯಾರ್ಥಿ ವೇತನದ (2023-24) ಮುಂದಿನ ಸುತ್ತಿನ ಅರ್ಜಿಗಳನ್ನು ಮುಂಬರುವ ತಿಂಗಳುಗಳಲ್ಲಿ ನೀಡಲಾಗುವುದು.

ರಿಲಯನ್ಸ್ ಫೌಂಡೇಶನ್ ಕುರಿತು:

ರಿಲಯನ್ಸ್ ಫೌಂಡೇಶನ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಲೋಕೋಪಕಾರಿ ಅಂಗವಾಗಿದ್ದು, ನವೀನ ಮತ್ತು ಸುಸ್ಥಿರ ಪರಿಹಾರಗಳ ಮೂಲಕ ಭಾರತದ ಅಭಿವೃದ್ಧಿ ಸವಾಲುಗಳನ್ನು ಎದುರಿಸುವಲ್ಲಿ ವೇಗವರ್ಧಕ ಪಾತ್ರವನ್ನು ವಹಿಸುವ ಗುರಿಯನ್ನು ಹೊಂದಿದೆ.

ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರ ನೇತೃತ್ವದಲ್ಲಿ ಸಾಮಾನ್ಯ ಜನರ ಯೋಗಕ್ಷೇಮ ಮತ್ತು ಉತ್ತಮ ಗುಣಮಟ್ಟದ ಜೀವನಕ್ಕಾಗಿ ಪರಿವರ್ತಕ ಬದಲಾವಣೆಗಳನ್ನು ಸುಲಭಗೊಳಿಸಲು ಪಟ್ಟುಬಿಡದೆ ಕೆಲಸ ಮಾಡುತ್ತಿದೆ.

ರಿಲಯನ್ಸ್ ಫೌಂಡೇಶನ್ ಗ್ರಾಮೀಣ ಪರಿವರ್ತನೆ, ಶಿಕ್ಷಣ, ಆರೋಗ್ಯ, ಅಭಿವೃದ್ಧಿಗಾಗಿ ಕ್ರೀಡೆ, ಮಹಿಳಾ ಸಬಲೀಕರಣ, ವಿಪತ್ತು ನಿರ್ವಹಣೆ, ನಗರ ನವೀಕರಣ ಮತ್ತು ಕಲೆ, ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ.

ಭಾರತದಾದ್ಯಂತ 54,200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಮತ್ತು ಹಲವು ನಗರಗಳಲ್ಲಿ ಸುಮಾರು 69.5 ಮಿಲಿಯನ್ ಜನರ ಜೀವನವನ್ನು ತಲುಪಿದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಭೇಟಿ ನೀಡಿ https://www.reliancefoundation.org/.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+