Reliance: ರಿಲಯನ್ಸ್ ಎಂದು ಹೆಸರು ಬರಲು ಕಾರಣವೇನು? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
ದೇಶದ ಪ್ರತಿಷ್ಠಿತ ಉದ್ಯಮಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವುದು ರಿಲಯನ್ಸ್ ಇಂಡ್ರಸ್ಟ್ರೀಸ್. ಈ ಕಂಪನಿಗೆ ದೇಶದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ಹೆಸರಿದೆ. ತನ್ನ ವಿವಿಧ ಪ್ರೊಡಕ್ಟ್‌ಗಳಿಂದ ಹೆಸರುವಾಸಿಯಾಗಿರುವ ಕಂಪನಿಗೆ ರಿಲಯನ್ಸ್ ಎಂದು ಹೆಸರು ಏಕೆ ಬಂದಿತು ಎಂದು ಎಲ್ಲರೂ ತಲೆ ಕಡಿಸಿಕೊಳ್ಳುತ್ತಾರೆ.
ರಿಲಯನ್ಸ್ ವಿದ್ಯುತ್, ಪೆಟ್ರೋಕೆಮಿಕಲ್ಸ್, ಟೆಲಿಕಾಂನಿಂದ ಚಿಲ್ಲರೆ ವ್ಯಾಪಾರ, ಮಾಧ್ಯಮ ಮತ್ತು ಡಿಜಿಟಲ್ ಸೇವೆಗಳ ವರೆಗೂ ತನ್ನ ವ್ಯಾಪ್ತಿಯನ್ನು ಪಸರಿಸಿದೆ. ಈ ಬೃಹತ್ ಕಂಪನಿಗೆ ಮುಕೇಶ್ ಅಂಬಾನಿ ತಂದೆ ಧೀರೂಭಾಯಿ ಅಂಬಾನಿ ಅಡಿಪಾಯ ಹಾಕಿದರು. ಸಣ್ಣ ಉದ್ಯಮಿಯಾಗಿ, ವ್ಯಾಪಾರ ಪ್ರಾರಂಭಿಸಿದ ಅವರು. ತನ್ನ ಕಠಿಣ ಪರಿಶ್ರಮದ ಮೂಲಕ, ಅವರು ದೇಶದಲ್ಲಿ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದರು.

ಧೀರೂಭಾಯಿ ಅಂಬಾನಿ ಅವರ ಈ ಸತತ ಪರಿಶ್ರಮಕ್ಕೆ ಬೆಲೆಯೂ ಸಿಕ್ಕಿತ್ತು. ಆರಂಭದಲ್ಲಿ ದೇಶದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದು ಎಂದು ಹೆಸರು ಪಡೆದಿದ್ದ ರಿಲಯನ್ಸ್ ನಂತರ ತನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸಿತು. ಇದರಿಂದ ಧೀರೂಭಾಯಿ ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿತು. ದೇಶದಲ್ಲಿ ಇಷ್ಟು ದೊಡ್ಡ ಕಂಪನಿಯಾಗಿ ಬೆಳೆದ ರಿಲಯನ್ಸ್ ಎಂದು ಏಕೆ ನಾಮಕರಣವನ್ನು ಮಾಡಿದರು ಎಂಬ ಬಗ್ಗೆ ಇಂಟ್ರಸ್ಟಿಗ್ ಸ್ಟೋರಿ ಇದೆ.
ರಿಲಯನ್ಸ್ ಏಕೆ?
ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಮೂಲತಃ ರಿಲಯನ್ಸ್ ಕಮರ್ಷಿಯಲ್ ಕಾರ್ಪೊರೇಶನ್ ಎಂದು ಆರಂಭಿಸಲಾಯಿತು. ಧೀರೂಭಾಯಿ ಅಂಬಾನಿ 1958 ರಲ್ಲಿ ಈ ಕನಸಿನ ಕಂಪಿನಿಗೆ ಅಡಿಪಾಯ ಹಾಕಿದರು. ಕಂಪನಿಯು ಬಟ್ಟೆಗಳನ್ನು ಮಾರಾಟ ಮಾಡುವ ಮೂಲಕ ತನ್ನ ಕಾರ್ಯವನ್ನು ಆರಂಭಿಸಿತು. ಕಂಪನಿಯು ತನ್ನ ಉತ್ಪನ್ನಗಳು ಮತ್ತು ಅಸಾಧಾರಣ ಸೇವೆಗಾಗಿ ನಂಬಿಕೆಯ ಸಂಕೇತವಾಗಲಿದೆ ಎಂಬ ಕಲ್ಪನೆಯೊಂದಿಗೆ 'ರಿಲಯನ್ಸ್' ಹೆಸರನ್ನು ಆಯ್ಕೆ ಮಾಡಲಾಗಿದೆ.
ನಂಬಿಕೆ ಮತ್ತು ಸ್ವಾವಲಂಬನೆಯ ಮೌಲ್ಯಗಳನ್ನು ಸಾಕಾರಗೊಳಿಸುವ ದೃಷ್ಟಿಯಿಂದ ಧೀರೂಭಾಯಿ ಅಂಬಾನಿ ಕಂಪನಿಯ ಹೆಸರನ್ನು 'ರಿಲಯನ್ಸ್' ಎಂದು ಇಟ್ಟರು. ಈ ಕಂಪನಿಯ ಉದ್ದೇಶವು ಆತ್ಮವಿಶ್ವಾಸವನ್ನು ತುಂಬುವುದು ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವುದೇ ಆಗಿತ್ತು. ಈ ಕಂಪನಿಯು ಭಾರತದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬಹುದೆಂಬ ಕಲ್ಪನೆ ಆಗಿನ ಫೌಂಡರ್ ಧೀರೂಭಾಯಿ ಅವರಿಗಿತ್ತು. ಈ ಕಂಪನಿ ದೇಶದ ಕೈಗಾರಿಕಾ ವಲಯದಲ್ಲಿ ತನ್ನದೇ ಆದ ಗುರುತನ್ನ ಹೊಂದಲಿದೆ ಎಂಬ ನಂಬಿಕೆ ಅವರಲ್ಲಿತ್ತು.

ಸದ್ಯ ರಿಲಯನ್ಸ್ ಕಂಪನಿಯ ಸಂಪೂರ್ಣ ಹಿಡಿತ ಧೀರೂಭಾಯಿ ಅಂಬಾನಿ ಅವರ ಹಿರಿಯ ಪುತ್ರ ಮುಖೇಶ್ ಅಂಬಾನಿ ಕೈಯಲ್ಲಿದೆ. ಇವರು ಸಹ ಉದ್ಯಮ ರಂಗದಲ್ಲಿ ಪ್ರೀತಿ ಬೆಳೆಸು ಕೊಂಡು ತಮ್ಮ ಕಂಪನಿಯನ್ನು ಬೆಳೆಸುತ್ತಲೇ ಇದ್ದಾರೆ. ಇವರು ಮಕ್ಕಳು ಸಹ ಈಗಾಗಲೇ ಕಂಪನಿಯ ವಿವಿಧ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಮುಖೇಶ್ ಅಂಬಾನಿಯ ಪುತ್ರ ಅನಂತ್ ರಿಲಯನ್ಸ್‌ನಲ್ಲಿ ಪ್ರತ್ಯೇಕ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಆಕಾಶ್ ಮತ್ತು ಇಶಾ ರಿಲಯನ್ಸ್‌ನ ಟೆಲಿಕಾಂ ಕಂಪನಿ ಜಿಯೋ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಜಿಯೋ ಟೆಲಿಕಾಂ ಕ್ಷೇತ್ರದಲ್ಲಿ ಅತಿ ದೊಡ್ಡ ಕಂಪನಿ. ಇತ್ತೀಚಿಗೆ ಮುಕೇಶ್ ಅಂಬಾನಿ ಅವರ ಪುತ್ರನ ವಿವಾಹ ಪೂರ್ವ ಸಮಾರಂಭ ಜಾಮ್‌ನಗರದಲ್ಲಿ ನಡೆಯಿತು. ಈ ವೇಳೆ ವಿಶ್ವದ ಪ್ರಸಿದ್ಧ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನು ನೋಡಿದರೆ ಇವರದ್ದು ಎಷ್ಟು ದೊಡ್ಡ ಕಂಪನಿ ಎಂಬುದು ಅರಿವಾಗುತ್ತದೆ.












Click it and Unblock the Notifications