ದೇಶದ ಟಾಪ್‌ 10 ಅತಿ ದೊಡ್ಡ ಸಾಲಗಾರರ ಪಟ್ಟಿ- ಮಾಹಿತಿ

ನವದೆಹಲಿ, ನವೆಂಬರ್‌, 28: ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಅತೀ ಹೆಚ್ಚು ಸಾಲ ಮಾಡುವವರು ಸಾಮಾನ್ಯ ಜನರಲ್ಲ, ಬದಲಾಗಿ ದೊಡ್ಡ, ದೊಡ್ಡ ಉದ್ಯಮಿಗಳೇ ಆಗಿರುತ್ತಾರೆ. ಹಾಗೆಯೇ ಭಾರತದ ಅತಿದೊಡ್ಡ ಸಾಲಗಾರರ ಪಟ್ಟಿ ಹಾಗೂ ಅವರ ಸಾಲದ ಹಣದ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇನ್ನು ಸಾಮಾನ್ಯ ಜನರು ಸಣ್ಣಪುಟ್ಟ ಸಾಲ ಮಾಡಿದರೆ ಸಾಕು ಅವರು ಅದನ್ನು ಯಾವಾಗಪ್ಪ ಮರುಪಾವತಿ ಮಾಡುವುದು ಎಂದು ಯೋಚನೆ ಮಾಡುತ್ತಾರೆ. ಅಂತಹದರಲ್ಲಿ ದೊಡ್ಡ ಮಟ್ಟದ ಸಾಲ ಸೋಲಕ್ಕೆ ಕೈ ಹಾಕುತ್ತಾರಾ? ಇಂತಹ ಕೆಲಸ ಏನಿದ್ದರೂ ದೊಡ್ಡ ದೊಡ್ಡ ಕುಳಗಳಂತಿರುವ ಉದ್ಯಮಿಗಳ ಕೆಲಸವೇ ಆಗಿರುತ್ತದೆ.

List of top 10 biggest debtors in India, know details

ಡಿಎನ್‌ಎ ವರದಿಯ ಪ್ರಕಾರ ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಅತಿಹೆಚ್ಚು ಸಾಲ ಹೊಂದಿದೆ ಎಂದು ತಿಳಿಸಿದೆ. ಇನ್ನು ಹಿಂಡನ್‌ಬರ್ಗ್ ರಿಸರ್ಚ್ ವರದಿ ಪ್ರಕಟಗೊಂಡ ಬಳಿಕ ಲಕ್ಷಾಂತರ ಕೋಟಿ ರೂನಷ್ಟು ಷೇರು ಸಂಪತ್ತು ನಷ್ಟ ಮಾಡಿಕೊಂಡ ಗೌತಮ್ ಅದಾನಿ ಅತಿಹೆಚ್ಚು ಸಾಲ ಹೊಂದಿದ್ದಾರೆ ಎಂಬ ಹಲವರ ಊಹೆ ತಪ್ಪಾಗಿರಬಹುದು. ಅವರು ಟಾಪ್10 ಸಾಲಗಾರರ ಪಟ್ಟಿಯಲ್ಲಿ ಇಲ್ಲ ಅಂತಾ ಟಿವಿ 9 ವರದಿ ಮಾಡಿದೆ.

ಅತಿ ಹೆಚ್ಚು ಸಾಲ ಹೊರೆ ಹೊತ್ತಿರುವ ಸಂಸ್ಥೆಗಳ ಪಟ್ಟಿ

1. ರಿಲಾಯನ್ಸ್ ಇಂಡಸ್ಟ್ರೀಸ್ - 3.13 ಲಕ್ಷ ಕೋಟಿ ರೂಪಾಯಿ
2. ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ (ಎನ್​ಟಿಪಿಸಿ) - 2.20 ಲಕ್ಷ ಕೋಟಿ ರೂಪಾಯಿ
3. ವೊಡಾಫೋನ್ ಐಡಿಯಾ - 2.01 ಲಕ್ಷ ಕೋಟಿ ರೂಪಾಯಿ
4. ಭಾರತಿ ಏರ್‌ಟೆಲ್ - 1.65 ಲಕ್ಷ ಕೋಟಿ ರೂಪಾಯಿ
5. ಇಂಡಿಯನ್ ಆಯಿಲ್ ಕಾರ್ಪೊರೆಶನ್ - 1.40 ಲಕ್ಷ ಕೋಟಿ ರೂಪಾಯಿ
6. ಒಎನ್​ಜಿಸಿ - 1.29 ಲಕ್ಷ ಕೋಟಿ ರೂಪಾಯಿ
7. ಪವರ್ ಗ್ರಿಡ್ ಕಾರ್ಪೊರೇಶನ್ - 1.26 ಲಕ್ಷ ಕೋಟಿ ರೂಪಾಯಿ
8. ಟಾಟಾ ಮೋಟಾರ್ಸ್ - 1.25 ಲಕ್ಷ ಕೋಟಿ ರೂಪಾಯಿ
9. ಎಲ್ ಅಂಡ್ ಟಿ - 1.18 ಲಕ್ಷ ಕೋಟಿ ರೂಪಾಯಿ
10. ಗ್ರಾಸಿಮ್ ಇಂಡಸ್ಟ್ರೀಸ್ - 1.01 ಲಕ್ಷ ಕೋಟಿ ರೂಪಾಯಿ

ಭಾರತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಟೆಲಿಕಾಂ ಕಂಪನಿಗಳಾಗಿದ್ದು, 5ಜಿ ನೆಟ್‌ವರ್ಕ್ ಅಳವಡಿಕೆಗೆ ಸಾಕಷ್ಟು ಹೂಡಿಕೆ ಮಾಡಿವೆ. ಈ ಕಾರಣಕ್ಕೆ ಸಾಲ ಹೆಚ್ಚಾಗಿರಬಹುದು. ಇನ್ನು, ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಿಲಾಯನ್ಸ್ ಜಿಯೋ ಕೂಡ 5ಜಿಗೆ ತುಂಬಾ ಹೂಡಿಕೆ ಮಾಡಿದೆ. ಈ ಮೇಲಿನ ಟಾಪ್ 10 ಸಾಲಗಾರ ಸಂಸ್ಥೆಗಳ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ 4 ಸಂಸ್ಥೆಗಳಿರುವುದು ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+