ಮುಖೇಶ್ ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ಬಗ್ಗೆ ಆಸಕ್ತಿಕರ ವಿಷಯಗಳು ಇಲ್ಲಿವೆ
ನವದೆಹಲಿ, ಡಿ. 29: ಇವತ್ತು ರಾಧಿಕಾ ಮರ್ಚೆಂಟ್ ಎಲ್ಲರ ಮನೆಮಾತಾಗಿದ್ದಾರೆ. ಏಕೆಂದರೆ ಅವರು ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮನೆಯ ಸೊಸೆಯಾಗಲಿದ್ದಾರೆ.
ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಜೊತೆಗೆ ವೀರೇನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿಯಾಗಿರುವ ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ನಡೆದಿದೆ. ರಾಜಸ್ಥಾನದ ನಾಥದ್ವಾರದಲ್ಲಿರುವ ಶ್ರೀನಾಥ್‌ಜಿ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆದಿದೆ.
ಸುದ್ದಿಯಲ್ಲಿರುವ ಅಂಬಾನಿ ಮನೆಯ ಭಾವಿ ಸೊಸೆ ರಾಧಿಕಾ ಮರ್ಚೆಂಟ್ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ಎನ್ಕೋರ್ ಹೆಲ್ತ್‌ಕೇರ್‌ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1. ಅನಂತ್ ಅಂಬಾನಿ ಮತ್ತು ರಾಧಿಕಾ ಕೆಲವು ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದಾರೆ.
2. ರಾಧಿಕಾ ಅವರ ತಂದೆ ವೀರೇನ್ ಮರ್ಚೆಂಟ್ ಅವರು ಆಂಕರ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಮತ್ತು ಉಪಾಧ್ಯಕ್ಷರಾಗಿದ್ದಾರೆ. ಅಂಜಲಿ ಮರ್ಚೆಂಟ್ ರಾಧಿಕಾ ಅವರ ಕಿರಿಯ ಸಹೋದರಿ.
3. ರಾಧಿಕಾ ಮರ್ಚೆಂಟ್ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಿಭಾ ಆರ್ಟ್ಸ್‌ನ ಗುರು ಭಾವನಾ ಠಾಕರ್ ಅವರ ಶಿಷ್ಯೆ ಎಂದು ಹೇಳಲಾಗುತ್ತದೆ.
4. ರಾಧಿಕಾ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.
5. 2017 ರಲ್ಲಿ ಖಾಸಗಿ ಐಷಾರಾಮಿ ವಿಲ್ಲಾಸ್ ಚೈನ್ ಇಸ್ಪ್ರವಾದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.

6. ಪ್ರಸ್ತುತ ಎನ್ಕೋರ್ ಹೆಲ್ತ್‌ಕೇರ್ ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾರೆ.
7. 24 ವರ್ಷದ ರಾಧಿಕಾ ಮರ್ಚೆಂಟ್ ಜೂನ್‌ನಲ್ಲಿ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಆರಂಗೇಟ್ರಂ ಸಮಾರಂಭದಲ್ಲಿ ಭರತನಾಟ್ಯ ಪ್ರದರ್ಶಿಸಿದ್ದರು.
8. ಆರಂಗೇತ್ರಂ ಎಂದರೆ ನರ್ತಕಿಯು ಶಾಸ್ತ್ರೀಯ ನೃತ್ಯದಲ್ಲಿ ಔಪಚಾರಿಕ ತರಬೇತಿಯನ್ನು ಪೂರ್ಣಗೊಳಿಸುವುದು ಮತ್ತು ಅವರ ಮೊದಲ ವೇದಿಕೆಯ ಪ್ರದರ್ಶನವಾಗಿದೆ.
9. ಗುರುವಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಾಂಪ್ರದಾಯಿಕ ನಿಶ್ಚಿತಾರ್ಥ ಸಮಾರಂಭ ನಡೆದಿದೆ.
10. ನಿಶ್ಚಿತಾರ್ಥ ಸುದ್ದಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಸಮೂಹದ ಅಧ್ಯಕ್ಷ ಪರಿಮಳಾ ನಾಥ್ವಾನಿ ಖಚಿತಪಡಿಸಿದ್ದಾರೆ.
11. ಮದುವೆ ದಿನಾಂಕವನ್ನು ಕುಟುಂಬಸ್ಥರು ಪ್ರಕಟಿಸಿಲ್ಲ.
12. ಅನಂತ್ ಅಂಬಾನಿ 1995 ರಲ್ಲಿ ಜನಿಸಿದರು. ಇಶಾ ಮತ್ತು ಆಕಾಶ್ ಅಂಬಾನಿಯವರ ಕಿರಿಯ ಸಹೋದರ.
13. ಅನಂತ್ ಅಂಬಾನಿ ತಮ್ಮ ವಿದ್ಯಾಭ್ಯಾಸವನ್ನು ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಪ್ರಾರಂಭಿಸಿದರು, ಅವರು ಯುಎಸ್‌ನ ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದ್ದಾರೆ.
14. ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಇದು ಅಂಬಾನಿ ಕುಟುಂಬದ ಹೂಡಿಕೆಯ ಪ್ರಮುಖ ಕ್ಷೇತ್ರವಾಗಿದೆ.












Click it and Unblock the Notifications