Budget 2023: ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತೆ ದುಬಾರಿ- ಆಭರಣ ಪ್ರಿಯರಿಗೆ ಬಿಗ್ ಶಾಕ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 'Union Budget 2023' ಅನ್ನು ಮಂಡಿಸಿದ್ದಾರೆ. ಈ ವೇಳೆ, ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಇದು ಚಿನ್ನ ಪ್ರಿಯರಿಗೆ ಆಘಾತ ನೀಡಿದೆ. ಇಲ್ಲಿದೆ ಮಾಹಿತಿ
ನವದೆಹಲಿ, ಫೆಬ್ರುವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 'Union Budget 2023' ಅನ್ನು ಮಂಡಿಸಿದ್ದಾರೆ. ಈ ವೇಳೆ, ಚಿನ್ನ, ಬೆಳ್ಳಿ, ವಜ್ರಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಇದು ಚಿನ್ನ ಪ್ರಿಯರಿಗೆ ಆಘಾತ ನೀಡಿದೆ. ಈಗಾಗಲೇ ಚಿನ್ನ ಹಾಗೂ ಬೆಳ್ಳಿಯ ದರಗಳು ಮುಗಿಲು ಮುಟ್ಟಿವೆ. ಈ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ದರವನ್ನು ಏರಿಸುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವು ಬಂಗಾರ ಪ್ರಿಯರಿಗೆ ಶಾಕ್ ನೀಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಇಂದು ಪ್ರತಿ 10 ಗ್ರಾಂ ಚಿನ್ನಕ್ಕೆ ರೂ 56,916 ಕ್ಕೆ ವಹಿವಾಟು ನಡೆಯುತ್ತಿದೆ. ರೂ 6 ಅಥವಾ ಶೇ 0.01 ರಷ್ಟು ಹೆಚ್ಚಾಗಿದೆ. ಬೆಳ್ಳಿಯು ಮಾರ್ಚ್ ಫ್ಯೂಚರ್ಸ್ ಎಂಸಿಎಕ್ಸ್‌ನಲ್ಲಿ ಪ್ರತಿ ಕೆಜಿಗೆ ರೂ 140 ಕಡಿಮೆಯಾಗಿ ರೂ 68,689ರಷ್ಟು ವಹಿವಾಟು ನಡೆಸುತ್ತಿದೆ.
ಕೇಂದ್ರದ ಬಜೆಟ್‌ನಲ್ಲಿ ಯಾವ ವಸ್ತುಗಳು ದುಬಾರಿಯಾಗಿವೆದುಬಾರಿಯಾಗುವುದು ಇಲ್ಲಿದೆ:
* ಚಿನ್ನ
* ಬೆಳ್ಳಿ
* ವಜ್ರಗಳು
* ಪ್ಲಾಟಿನಂ
* ಸಿಗರೇಟ್ ಮೇಲಿನ ಕಸ್ಟಮ್ ಡ್ಯೂಟಿ ಹೆಚ್ಚಳ
* ಸಂಯೋಜಿತ ರಬ್ಬರ್
* ಎಲೆಕ್ಟ್ರಿಕ್ ಕಿಚನ್ ಚಿಮಣಿ
* ತಾಮ್ರದ ತುಣುಕು

ಯಾವ ವಸ್ತುಗಳು ಅಗ್ಗವಾಗಲಿದೆ
* ಮೊಬೈಲ್
* ಕ್ಯಾಮೆರಾ ಲೆನ್ಸ್‌ಗಳು
* ಟಿವಿ
* ಬ್ಲೆಡ್ಡ್ ಸಿಎನ್‌ಜಿ
* ಪ್ರಯೋಗಾಲಯದಲ್ಲಿ ವಜ್ರಗಳ ತಯಾರಿಕೆಯಲ್ಲಿ ಬಳಸುವ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ
* ಲಿಥಿಯಂ-ಐಯಾನ್ ಕೋಶವನ್ನು ತಯಾರಿಸಲು ಸರಕುಗಳು/ಯಂತ್ರಗಳು
* ವಿದ್ಯುತ್ ಅಡಿಗೆ ಚಿಮಣಿಗಳ ತಯಾರಿಕೆಗಾಗಿ ಶಾಖ ಸುರುಳಿ
* ಡಿನೇಚರ್ಡ್ ಈಥೈಲ್ ಆಲ್ಕೋಹಾಲ್
* ವಜ್ರಗಳ ತಯಾರಿಕೆಯಲ್ಲಿ ಬಳಸುವ ಬೀಜಗಳು
* ಆಸಿಡ್ ದರ್ಜೆಯ ಫ್ಲೋರ್ಸ್ಪಾರ್
* ರಫ್ತು ಉತ್ತೇಜಿಸಲು ಸೀಗಡಿ ಆಹಾರದ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಯೋಚಿಸಿದೆ.
* ಆಟಿಕೆಗಳು ಮತ್ತು ಆಟಿಕೆಗಳ ಭಾಗ
* ಸೈಕಲ್

ವಜ್ರಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸಲು (ವಜ್ರಗಳನ್ನು ಕೃತಕವಾಗಿ ಉತ್ಪಾದಿಸಲಾಗುತ್ತದೆ. ಇವು ನೈಸರ್ಗಿಕ ವಜ್ರಗಳಂತೆಯೇ ಗುಣಲಕ್ಷಣಗಳನ್ನು ಹೊಂದಿರುತ್ತದೆ ಮತ್ತು ವೆಚ್ಚವೂ ಪರಿಣಾಮಕಾರಿಯಾಗಿದೆ). ಸರ್ಕಾರವು ಆರ್ & ಡಿ ಅನುದಾನವನ್ನು ನೀಡುತ್ತದೆ ಮತ್ತು ಪ್ರಮುಖ ಕಚ್ಚಾ ವಸ್ತುಗಳ (ಲ್ಯಾಬ್ ಬೆಳೆದ ಬೀಜಗಳು) ಕಸ್ಟಮ್ ಸುಂಕ ಕಡಿತವನ್ನು ಪರಿಗಣಿಸುತ್ತದೆ. ವಜ್ರಗಳು ದೇಶೀಯ ಮತ್ತು ರಫ್ತು ಮಾರುಕಟ್ಟೆಗಳಲ್ಲಿ ದೊಡ್ಡ ಸಾಮರ್ಥ್ಯವನ್ನು ಹೊಂದಿವೆ.












Click it and Unblock the Notifications