ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಗಾಯತ್ರಿ ನಗರದ ಕರಗ ಮಹೋತ್ಸವಕ್ಕೆ ಚಾಲನೆ

|
Google Oneindia Kannada News

ಬೆಂಗಳೂರು, ಜುಲೈ, 20: ಬೆಂಗಳೂರಿನ ಗಾಯತ್ರಿ ನಗರದಲ್ಲಿ ಬುಧವಾರದಿಂದ ನಾಲ್ಕು ದಿನಗಳ ಕಾಲ 3ನೇ ವರ್ಷದ ಕಳಷಾಭಿಷೇಕ ಹಾಗೂ ಶ್ರೀ ಶಕ್ತಿದೇವಿ ಕುರುಮಾರಿಯಮ್ಮನವರ ಕರಗ ಮಹೋತ್ಸವ ನಡೆಯುತ್ತಿದೆ. ಶ್ರೀ ಶಕ್ತಿ ಮುನೇಶ್ವರ ಸೇವಾ ಮಂಡಳಿಯಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡಲಿದ್ದಾರೆ.

ಮಾರುತಿ ಬಡಾವಣೆಯ 3ನೇ ಮುಖ್ಯ ರಸ್ತೆಯ ಗಾಯತ್ರಿ ನಗರದಲ್ಲಿ ಜುಲೈ 20ರ ಬುಧವಾರದಿಂದ ಜುಲೈ 24ರವರೆಗೂ ಶ್ರೀ ಶಕ್ತಿದೇವಿ ಕುರುಮಾರಿಯಮ್ಮನವರ ಕರಗ ಮಹೋತ್ಸವವನ್ನು ಮಾಡಲಾಗುತ್ತದೆ. ನಾಲ್ಕು ದಿನಗಳ ಕಾಲ ನಡೆಯುವ ಕರಗದಲ್ಲಿ ನೂರಾರು ಜನರು ಪಾಲ್ಗೊಳ್ಳಲಿದ್ದಾರೆ.

ಮುಸ್ಲಿಂ ಮುಖಂಡನ ಮಗಳ ಮದುವೆ ಪತ್ರಿಕೆಯಲ್ಲಿ ಗಣಪತಿ ಕ್ಯಾಲೆಂಡರ್! ಮುಸ್ಲಿಂ ಮುಖಂಡನ ಮಗಳ ಮದುವೆ ಪತ್ರಿಕೆಯಲ್ಲಿ ಗಣಪತಿ ಕ್ಯಾಲೆಂಡರ್!

ಜುಲೈ 20ರ ಬುಧವಾರ ರೇವತಿ ನಕ್ಷತ್ರ ಪುಣ್ಯಾವಚನ ಶ್ರೀ ಗಣಪತಿ ಪೂಜೆ, ಗಂಗಪೂಜೆ, ಗೋಪೂಜೆ ಕಂಕಣ ಪೂಜೆ, ಧ್ವಜಾರೋಹಣ, ಹಾಗೂ ಎಲ್ಲಾ ದೇವರುಗಳಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಡೆಯಿತು.

Three Days Gayatri Nagar Karaga Festival Begins

ವಿವಿಧ ಕಲಾ ತಂಡಗಳು ಭಾಗವಹಿಸಿ ನೃತ್ಯ ಪ್ರದರ್ಶಿಸುವುದರ ಮೂಲಕ ಕರಗಕ್ಕೆ ಮೆರಗು ನೀಡಿದ್ದಾರೆ. ದೇವಿಯ ರೂಪದಲ್ಲಿ ರೌದ್ರವತಾರ ನೃತ್ಯ ಮಾಡಿ ಹಬ್ಬಕ್ಕೆ ಕಳೆ ತಂದಿದ್ದಾರೆ. ಇನ್ನು ಕೆಲವರು ಹುಲಿ ವೇಷ ಧರಿಸಿ ನೃತ್ಯ ಪ್ರರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇನ್ನು ಸಂಜೆ 5:30ರ ವೇಳೆಗೆ ಮಹಿಳಾ ಮಂಡಳಿಯಿಂದ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

ಜುಲೈ 21ರಂದು ಅಮ್ಮನವರಿಗೆ ವಿವಿಧ ರೀತಿಯ ಅಭಿಷೇಕಗಳ ಜೊತೆಗೆ, 108 ದಿಪೋತ್ಸವ, ಸೌಂದರ್ಯ ಲಹರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜುಲೈ 22ರಂದು ಮಹಾಮಂಗಳಾರತಿ ಮೂಲಕ ಕುರುಮಾರಿಯಮ್ಮನವರ ಹೂವಿನ ಕರಗವನ್ನು ಮಾಡಲಾಗುತ್ತದೆ. ಹೂವಿನ ಕರಗದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಮೆರವಣಿಗೆ ಮಾಡಲಿದ್ದಾರೆ. ಜುಲೈ 23ರಂದು ರಕ್ತದಾನ ಶಿಬಿರ, ಅನ್ನ ಸಂತರ್ಪಣೆ ಜೊತೆಗೆ ಗಾಯನೋತ್ಸವವನ್ನು ಏರ್ಪಡಿಸಿದ್ದಾರೆ.

Three Days Gayatri Nagar Karaga Festival Begins

ಕರಗ ಮಹೋತ್ಸವದ ಕೊನೆಯ ದಿನವಾದ ಜುಲೈ 24ರಂದು ಮುನೇಶ್ವರ ಸ್ವಾಮಿಯವರಿಗೆ ಬಲಿ ಪೂಜೆ, ಅಮ್ಮನವರಿಗೆ ದೀಪದ ಆರತಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಉತ್ಸವ ಮೂರ್ತಿಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಅಲಂಕರಿಸಿ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ನಡೆಯಲಿದೆ.

Recommended Video

ಅಗ್ನಿವೀರ್ ಪ್ರಾಜೆಕ್ಟ್ ನಿಂದಾಗಿ ಭಾರತ ರಕ್ಷಣಾ ಪಡೆಗೆ ಏನು ಲಾಭ | *Defence | OneIndia Kannada

English summary
The 3rd year Kalashabhisheka and Karaga Mahotsava of Shri Shaktidevi Kurumariyamma began at Bengaluru Gayatri Nagar, Festival will be held for Three days. Read more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X