ಮುಸ್ಲಿಂ ಮುಖಂಡನ ಮಗಳ ಮದುವೆ ಪತ್ರಿಕೆಯಲ್ಲಿ ಗಣಪತಿ ಕ್ಯಾಲೆಂಡರ್!

ಮೈಸೂರು, ಮಾರ್ಚ್ 13: ರಾಜ್ಯದಲ್ಲಿ ಕೇಸರಿ ಮತ್ತು ಹಿಜಾಬ್ ವಿವಾದ ಸದ್ದು ಮಾಡುತ್ತಿರುವಾಗ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ತಮ್ಮ ಮಗಳ ಮದುವೆ ಆಹ್ವಾನ ಪತ್ರಿಕೆಯನ್ನು ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ರೀತಿ ಮುದ್ರಿಸಿದ್ದಾರೆ. ಪುತ್ರಿಯ ವಿವಾಹಕ್ಕೆ ಹಿಂದೂ ಸಮುದಾಯದ ಬಾಂಧವರನ್ನು ಆಮಂತ್ರಿಸಿದ್ದಾರೆ.

ರಾಮನಗರದ ಜೆಡಿಎಸ್ ಮುಖಂಡ ಸುಹೇಲ್ ಪಾಷಾ ತಮ್ಮ ಮಗಳ ಲಗ್ನಪತ್ರಿಕೆಯನ್ನು ಹಿಂದೂ ಸಂಪ್ರದಾಯ ರೀತಿಯಲ್ಲಿ ಮುದ್ರಿಸಿದ್ದಾರೆ. ಎಲ್ಲಾ ಹಿಂದೂ ಸ್ನೇಹಿತರನ್ನು ಮದುವೆಗೆ ಆತ್ಮೀಯವಾಗಿ ಕರೆಯುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ.

ಪ್ರಥಮ ವಂದಿತ ಗಣೇಶ ಚಿತ್ರವಿರುವ ಕ್ಯಾಲೆಂಡರ್‌ನಲ್ಲಿ ಮಗಳ ಲಗ್ನಪತ್ರಿಕೆಯನ್ನು ಆಕರ್ಷಕವಾಗಿ ಕನ್ನಡದಲ್ಲಿ ಮುದ್ರಿಸಿರುವ ಸುಹೇಲ್ ಪಾಷಾ, ತನ್ನ ಎಲ್ಲಾ ಹಿಂದೂ ಸ್ನೇಹಿತರನ್ನು ಭೇಟಿ ಮಾಡಿ ಮದುವೆಯಲ್ಲಿ ಪಾಲ್ಗೊಂಡು ವಧು-ವರರನ್ನು ಹರಸುವಂತೆ ಮನವಿ ಮಾಡಿದ್ದಾರೆ.

Muslim Man Printed Daughter Wedding Card In Lord Ganesha Calendar

ಪುತ್ರಿ ಗೌಸಿಯಾ ತಬಸ್ಸುಮ್ ಮತ್ತು ಸೈಯದ್ ರೋಷನ್ ಆರತಕ್ಷತೆಯನ್ನು ರಾಯಲ್ ಸುಲ್ತಾನ್ ಪ್ಯಾಲೇಸ್ ಎದುರು ಮೈದಾನದ, ಹುಣಸನಹಳ್ಳಿ ಮುಖ್ಯರಸ್ತೆ, ರಾಮನಗರ ಇಲ್ಲಿ ನೆರವೇರಿಸಲು ಗುರು-ಹಿರಿಯರು ನಿಶ್ಚಯಿಸಿರುವುದರಿಂದ ತಾವುಗಳು ಸಕುಟುಂಬ ಪರಿವಾರ ಸಮೇತರಾಗಿ ಆಗಮಿಸಿ ವಧು-ವರರನ್ನು ಆಶೀರ್ವದಿಸಬೇಕಾಗಿ ಕೋರುತ್ತೇವೆ ಎಂದು ಸುಹೇಲ್ ಪಾಷಾ ಹಿಂದೂ ಬಾಂಧವರಿಗೆ ಆಹ್ವಾನ ನೀಡಿದ್ದಾರೆ.

ಹಲವಾರು ವರ್ಷಗಳಿಂದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸೇರಿಂದತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಸುಹೇಲ್ ಪಾಷಾ ತಮ್ಮ ಮೆಚ್ಚಿನ ನಾಯಕರ ಭಾವಚಿತ್ರಗಳನ್ನು ಮಗಳ ಮದುವೆಯ ಆಹ್ವಾನ ಪತ್ರಿಕೆಯ ಕ್ಯಾಲೆಂಡರ್‌ನಲ್ಲಿ ಮುದ್ರಿಸಿಸುವ ಮೂಲಕ ತಮ್ಮ ಮತ್ತು ಜೆಡಿಎಸ್ ಪಕ್ಷದ ಬಾಂಧವ್ಯವನ್ನು ಪ್ರದರ್ಶಿಸಿದ್ದಾರೆ.

ಲಗ್ನಪತ್ರಿಕೆಯ ಕ್ಯಾಲೆಂಡರ್‌ನಲ್ಲಿ ಗಣೇಶ ಭಾವಚಿತ್ರದ ಕೆಳಗೆ ಮಾಜಿ ಪ್ರಧಾನ ಮಂತ್ರಿ ಎಚ್. ಡಿ. ದೇವೇಗೌಡ , ಮಾಜಿ ಮುಖ್ಯಮಂತ್ರಿ ಎಚ್. ಡಿ. ಕಮಾರಸ್ವಾಮಿ ಹಾಗೂ ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿ ಭಾವಚಿತ್ರಗಳನ್ನು ಪ್ರಿಂಟ್ ಮಾಡಿಸುವ ಮೂಲಕ ದೇವೇಗೌಡರ ಕುಟುಂಬದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

"ಧರ್ಮಕ್ಕಿಂತ ಮನುಷ್ಯನ ಬಾಂಧವ್ಯ ದೊಡ್ಡದು ಹಿಂದೂ ಮುಸ್ಲಿಂ ಎಂದು ಕಿತ್ತಾಡುವುದರಿಂದ ನೆಮ್ಮದಿ ಸಿಗುವುದಿಲ್ಲ ಎಲ್ಲರು ಒಟ್ಟಾಗಿ ಭಾವೈಕ್ಯದಿಂದ ಮುಂದೆ ನಡೆದರೆ ಅಲ್ಲಿ ಶಾಂತಿ ಸಿಗುತ್ತದೆ. ರೇಷ್ಮೆ ಹಾಗೂ ಮಾವು ವ್ಯಾಪಾರದಲ್ಲಿ ಬಹಳ ಹಿಂದಿನಿಂದಲೂ ಜಿಲ್ಲೆಯ ಹಿಂದು ಮುಸ್ಲಿಂಮರು ಪರಸ್ಪರ ಸಹಕಾರಿಯಾಗಿಯೇ ಜೀವನ ನಡೆಸುತ್ತಿದ್ದೇವೆ' ಎಂದು ಸುಹೇಲ್ ಪಾಷಾ ಹೇಳಿದ್ದಾರೆ.

"ನಾವು ಹಿಂದೂ ಸ್ನೇಹಿತರ ಮನೆಯ ಹಬ್ಬಗಳಿಗೆ ಹೋಗುತ್ತೇವೆ. ಅವರು ನಮ್ಮ ರಂಜಾನ್ ಸೇರಿದಂತೆ ಹಲವು ಹಬ್ಬಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿ ನಮ್ಮ ಮಗಳ ಮದುವೆ ನನ್ನ ಎಲ್ಲಾ ಹಿಂದೂ ಸ್ನೇಹಿತರನ್ನು ಭಾವನಾತ್ಮಕ ಆಹ್ವಾನಿಸಬೇಕು. ಅದು ಅವರ ಮನಸ್ಸಿನಲ್ಲಿ ಹಲವಾರು ತಿಂಗಳು ಉಳಿಯಬೇಕು ಎಂಬ ಸದುದ್ದೇಶದಿಂದ ಲಗ್ನಪತ್ರಿಕೆ ಮಾಡಿಸಿದ್ದೇನೆ" ಎನ್ನುತ್ತಾರೆ ಸುಹೇಲ್ ಪಾಷಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+