ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರ‍್ಯಾಗಿಂಗ್‌ ಮಾಡಿದರೆ ಪೊಲೀಸರು ಬರ್ತಾರೆ ಹುಷಾರ್!

By Nayana
|
Google Oneindia Kannada News

ಬೆಂಗಳೂರು, ಜೂನ್‌ 11: ಶಾಲಾ ಕಾಲೇಜುಗಳು ಆರಂಭವಾಗಿದೆ, ಇದರ ಜತೆಜತೆಗೆ ರ‍್ಯಾಗಿಂಗ್‌ ಸಮಸ್ಯೆ ಕೂಡ ಮಿತಿಮೀರುತ್ತಿದೆ, ಹಳೆಯ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ರ‍್ಯಾಗಿಂಗ್‌ ಮಾಡುವ ಮೂಲಕ ಭಯ ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ ಆದರೆ ಇದು ಒಂದು ಅಪರಾಧ ನೆನಪಿರಲಿ.

ಕೆಲವು ತಮಾಷೆಗಾಗಿ ರ‍್ಯಾಗಿಂಗ್‌ ಮಾಡುತ್ತಾರೆ ಇನ್ನು ಕೆಲವರು ಅವರ ಬಗ್ಗೆ ಭಯ ಹುಟ್ಟಿಸಲು ರ‍್ಯಾಗಿಂಗ್‌ ಮಾಡುತ್ತಾರೆ, ಇದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ತುಂಬಾ ನೋವನ್ನು ಅನುಭವಿಸುತ್ತಾರೆ ಎಷ್ಟರ ಮಟ್ಟಿಗೆ ಎಂದರೆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಹಲವು ನಿದರ್ಶನಗಳು ನಮ್ಮ ಕಣ್ಮುಂದಿದೆ. ಹೀಗಿರುವಾಗ ರ‍್ಯಾಗಿಂಗ್‌ ಮಾಡುವುದು ಕೂಡ ಅಪರಾಧ ಎಂದು ಪೊಲೀಸ್‌ ಪೇದೆಯೊಬ್ಬರು ವಿಡಿಯೋ ಮೂಲಕ ಸಮಾಜಕ್ಕೆರ ಕಿವಿಮಾತು ಹೇಳಿದ್ದಾರೆ.

ಚುಡಾಯಿಸಿದ್ರೆ ಹುಷಾರ್... ಜೈಲಿಗೆ ಹೋಗೋದು ಪಕ್ಕಾ..!ಚುಡಾಯಿಸಿದ್ರೆ ಹುಷಾರ್... ಜೈಲಿಗೆ ಹೋಗೋದು ಪಕ್ಕಾ..!

ಶಾಲಾ ಕಾಲೇಜುಗಳು ಆರಂಭವಾಗುವ ಈ ಸಂದರ್ಭದಲ್ಲಿ ಪೊಲೀಸ್‌ ಪೇದೆಯೊಬ್ಬರು ರ‍್ಯಾಗಿಂಗ್‌ ಕುರಿತು ಸಂದೇಶವೊಂದನ್ನು ಸಾಮಾಜಿಕ ಜಾಲತಾಣದ ಮೂಲಕ ರವಾನಿಸಿದ್ದಾರೆ. ಶಾಲಾ ಕಾಲೇಜುಗಳು ಆರಂಭವಾಗುತ್ತಿದೆ, ಹೊಸ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬಂದು ಸೇರಿಕೊಳ್ಳುತ್ತಿದ್ದಾರೆ, ಹಳೆ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳನ್ನು ತಮ್ಮ ವಬಶದಲ್ಲಿರಿಸಕೊಳ್ಳಲು ರ‍್ಯಾಗಿಂಗ್‌ ಎಂಬ ತಂತ್ರವನ್ನು ಉಪಯೋಗಿಸುತ್ತಾರೆ ಇದು ಅಪರಾಧವಾಗಿದೆ.

ಇದನ್ನು ಹೋಗಲಾಡಿಸುವುದು ಸಮಾಜದಲ್ಲಿರುವ ಪ್ರತಿಯೊಬ್ಬನ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು, ಪೋಷಕರು ಅಥವಾ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ಯಾರೇ ಆಗಲಿ ಈ ಕುರಿತು ಮಾಹಿತಿ ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್‌ ಠಾಣೆಗೆ ಕರೆ ಮಾಡಬೇಕು, ಪೊಲೀಸರು ಎಂದಿಗೂ ಸಾರ್ವಜನಿಕರ ಸೇವೆಗೆ ಸಿದ್ಧವಾಗಿರುತ್ತದೆ, ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಎಂದು ಪೊಲೀಸ್‌ ಪೇದೆಯೊಬ್ಬರು ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ.

Police helping hand in curb ragging in educational institutions

ರಾಗಿಂಗ್ ಮಾಡುವುದು ಅಪರಾಧ. ವಿದ್ಯಾರ್ಥಿಗಳಲ್ಲಿ ಸದ್ವಿಚಾರಗಳು ಬೇಕು, ಅಹಿತಕರ ವಿಚಾರಗಳು ಬೇಡ. ಭವ್ಯ ಭಾರತದ ಮುಂದಿನ ಕನಸುಗಳೇ, ನಿಮ್ಮ ಸಹಪಾಠಿಗಳೊಂದಿಗೆ ಸಹೋದರತ್ವ ಭಾವನೆ ಇರಲಿ ಎಂದು ಐಪಿಎಸ್ ರವಿ ಡಿ ಚೆನ್ನಣ್ಣನವರ್ ಟ್ವೀಟ್‌ ಮಾಡಿದ್ದಾರೆ.

ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್‌ ಪ್ರಮಾಣ ದುಪ್ಪಟ್ಟುಗೊಂಡಿದ್ದು,2017ರಲ್ಲಿ 49 ಪ್ರಕರಣಗಳು ದಾಖಲಾಗಿದೆ. 2016ರಲ್ಲಿ 24 ಪ್ರಕರಣಗಳು ದಾಖಲಾಗಿತ್ತು. ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರ, 2017ರಲ್ಲಿ ಭಾರತದಲ್ಲಿನ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ಸೇರಿದಂತೆ ಒಟ್ಟು 901 ರ‍್ಯಾಗಿಂಗ್‌ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ 515 ಪ್ರಕರಣಗಳು ದಾಖಲಾಗಿತ್ತು.

ಗುಜರಾತ್ 2017ರಲ್ಲಿ 16 (2016ರಲ್ಲಿ 5), ಅಸ್ಸಾಂ 33 (2016ರಲ್ಲಿ 10), ಪಶ್ಚಿಮಬಂಗಾಳ 99 (2016ರಲ್ಲಿ 50), ಉತ್ತರಪ್ರದೇಶ 143 (2016ರಲ್ಲಿ 93), ಮಧ್ಯಪ್ರದೇಶ 100 (2016ರಲ್ಲಿ 55), ಬಿಹಾರ 53 (2016ರಲ್ಲಿ 24), ಮಹಾರಾಷ್ಟ್ರ 46 (2016ರಲ್ಲಿ 29), ಒಡಿಸ್ಸಾ 46 (2016ರಲ್ಲಿ 28), ರಾಜಸ್ತಾನ 40 (2016ರಲ್ಲಿ 20), ದೆಹಲಿ 13 (2016ರಲ್ಲಿ 8), ಕೇರಳ 45(2016ರಲ್ಲಿ 35) ಪ್ರಕರಣಗಳು ದಾಖಲಾಗಿದೆ.

English summary
As academic year resume, school and colleges were reopened in last week. Same time it is the time of new students entering different age group and different courses. Following this Bangalore police have released a video to create awareness on ragging in school and colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X