• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎನ್‌ಜಿಟಿ ರಚಿಸಿರುವ ತಜ್ಞರ ತಂಡದಿಂದ ಇಂದು ಕೆರೆಗಳ ಪರಿಶೀಲನೆ

|

ಬೆಂಗಳೂರು, ಏಪ್ರಿಲ್ 14: ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ಸಂರಕ್ಷಣೆಗೆ ಸ್ಥಳೀಯ ಪ್ರಾಧಿಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ವಾಸ್ತವ ಅಧ್ಯಯನಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ರಚಿಸಿರುವ ಸಮಿತಿ ಶನಿವಾರ ಮತ್ತು ಭಾನುವಾರ ಬೇಟಿ ಕೊಡಲಿವೆ.

ಬೆಳ್ಳಂದೂರು ಕೆರೆ: ಸರ್ಕಾರದ ಮಾಹಿತಿ ಪರಿಶೀಲನೆಗೆ ಎನ್‌ಜಿಟಿ ಸಮಿತಿ

ದೆಹಲಿಯಲ್ಲಿ ಹಿರಿಯ ವಕೀಲ ರಾಜ್ ಪಂಜ್ವಾನಿ ನೇತೃತ್ವದಲ್ಲಿ ಓರ್ವ ವಕೀಲ, ಐಐಎಸ್ ಸಿಯ ಓರ್ವ ಪ್ರಾಧ್ಯಾಪಕ, ಬಿಬಿಎಂಪಿ ಆಯುಕ್ತ, ಸಿಪಿಸಿಬಿಯ ಹಿರಿಯ ವಿಜ್ಞಾನಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗಳನ್ನು ಒಳಗೊಂಡಿರುವ ಎನ್ ಜಿಟಿ ತಂಡವು ಕೆರೆಗಳ ಪರಿಶೀಲನೆ ನಡೆಸಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಬೆಳ್ಳಂದೂರು ಕೆರೆಯಂಗಳದಲ್ಲಿ ಬೆಂಕಿ ಬಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಷ್ಟ್ರೀಯ ಹಸಿರುವ ನ್ಯಾಯಾಧೀಕರಣ ಸುಮೋಟೊ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು.

ಕೆರೆ ವಿಚಾರದಲ್ಲಿ ರಾಜ್ಯ ಸರ್ಕಾರದ ಬೇಜವಾಬ್ದಾರಿಗಾಗಿ ಛೀಮಾರಿ ಹಾಕಿತ್ತು. ಇದಲ್ಲದೆ ಕೆರೆಯ ಮೇಲುಸ್ತುವಾರಿಯನ್ನು ಪೀಠವೇ ನೇರವಾಗಿ ನೋಡಿಕೊಳ್ಳುವ ರೀತಿಯಲ್ಲಿ ಅಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪ್ರತಿ ತಿಂಗಳು ಕ್ರಿಯಾ ಯೋಜನೆ ಸಲ್ಲಿಸುವಂತೆಯೂ ಸೂಚಿಸಿತ್ತು.

ಕಳೆದ 3 ತಿಂಗಳಿನಿಂದ ಕ್ರಿಯಾ ಯೋಜನೆ ಸಲ್ಲಿಸುತ್ತಿರುವ ಸ್ಥಳೀಯ ಪ್ರಾಧಿಕಾರಗಳು ವರದಿಯಲ್ಲಿ ಸುಳ್ಳು ಮಾಹಿತಿಯನ್ನು ನಮೂದಿಸಿದ್ದು, ನ್ಯಾಯಪೀಠ ಗರಂ ಆಗಿದೆ. ಸಲ್ಲಿಕೆಯಾಗಿರುವ ಕ್ರಿಯಾಯೋಜನೆ ಮತ್ತು ವಾಸ್ತವದಲ್ಲಿ ನಡೆದಿರುವ ಕಾಮಗಾರಿಗಳಿಗೂ ವ್ಯತ್ಯಾಸ ಕಂಡುಬಂದಿರುವುದರಿಂದ ನ್ಯಾಯಮೂರ್ತಿ ಜಾವದ್ ರಹೀಮ್ ಅವರಿದ್ದ ನ್ಯಾಯಪೀಠ ತಜ್ಞರ ಸಮಿತಿ ರಚಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Senior advocate from Delhi, Raj Panjwani led expert team which was formed by National Green Tribunal will visit Bellandur, Agara and Varthur lakes on April 14 and 15 to review the development work taken by the state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more