ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತ ನಾಯಕ ಪುಟ್ಟಣ್ಣಯ್ಯ ನಿಧನಕ್ಕೆ ಗಣ್ಯರ ಕಂಬನಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 19 : ಮೇಲುಕೋಟೆ ಶಾಸಕ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅವರ ಅಕಾಲಿಕ ನಿಧನದಿಂದಾಗಿ ರಾಜ್ಯದ ರೈತ ಸಮುದಾಯ ಪ್ರಬಲ ಹೋರಾಟಗಾರರನ್ನು ಕಳೆದುಕೊಂಡಿದೆ. ಪುಟ್ಟಣ್ಣಯ್ಯ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ರೈತ ಮುಖಂಡ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ ರೈತ ಮುಖಂಡ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ವಿಧಿವಶ

ಸರ್ವೋದಯ ಪಕ್ಷದ ಶಾಸಕರಾದ ಹಿರಿಯ ರೈತ ಹೋರಾಟಗಾರ ಕೆ.ಎಸ್. ಪುಟ್ಟಣ್ಣಯ್ಯ ಅವರ ಸಾವಿನ ಸುದ್ದಿ ದಿಗ್ಭ್ರೆ ಉಂಟುಮಾಡಿದೆ. ರೈತ ಚಳವಳಿ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ಬಹುಕಾಲದ ಸ್ನೇಹಿತನ ಅಗಲಿಕೆ ನನಗೆ ಅತೀವ ದುಃಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ನನ್ನ ಸಾಂತ್ವನಗಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Leaders mourns Puttannaiah death

In Pics : ಅಗಲಿದ ರೈತ ನಾಯಕನಿಗೆ ಗಣ್ಯರ ಅಶ್ರುತರ್ಪಣ

ರೈತಪರ ಹೋರಾಟಗಾರ, ಪುಟ್ಟಣ್ಣಯ್ಯ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ರೈತಪರ ದನಿಯಾಗಿದ್ದ, ರೈತ ಹೋರಾಟದ ಮುಂಚೂಣಿ ನಾಯಕರಾಗಿದ್ದರು. ತಮ್ಮ ರೈತ ಹೋರಾಟಳಿಂದ ಜನಮಾನಸದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದ್ದರು. ನೀರು ಹಂಚಿಕೆ ವಿಷಯವಾಗಿ ವಿಧಾನಸಭೆಯೊಳಗೆ ಕೂಡ ಅಧಿಕಾರಯುತವಾಗಿ ಮಾತನಾಡುವ ದನಿಯಾಗಿದ್ದರು. ನಮ್ಮ ರೈತರ ಪರವಾಗಿ ಪುಟ್ಟಣ್ಣಯ್ಯ ಅವರ ದನಿ ಮತ್ತೆ ಮೊಳಗುವುದಿಲ್ಲ ಎನ್ನುವ ಕೊರತೆ ತೀವ್ರವಾಗಿ ಕಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

English summary
Including Chief minister Siddaramaiah and State BJP president BS Yeddyurappa and many leaders condoled death of Farmers' leader MLA KS Puttannaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X