ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂತರ ಜಿಲ್ಲೆ ಪ್ರಯಾಣಕ್ಕೆ ಪೊಲೀಸ್ ಇಲಾಖೆಯಿಂದ ಇ-ಪಾಸ್

|
Google Oneindia Kannada News

ಬೆಂಗಳೂರು, ಮೇ 3: ದೇಶಾದ್ಯಂತ ಇನ್ನೂ ಎರಡು ವಾರಗಳ ಕಾಲ ಲಾಕ್‌ಡೌನ್‌ ಮುಂದುವರಿದಿದ್ದು, ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು ಸ್ವಂತ ಊರುಗಳಿಗೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಈ ಸಂಬಂಧ ವಿಶೇಷ ರೈಲು ಮತ್ತು ಬಸ್‌ಗಳ ಮೂಲಕ ಅಂತರ ಜಿಲ್ಲೆ ಹಾಗೂ ಅಂತರ ರಾಜ್ಯಗಳಿಗೆ ಜನರು ಪ್ರಯಾಣ ಮಾಡುತ್ತಿದ್ದಾರೆ. ಮೇ 4ರ ನಂತರ ಗ್ರೀನ್ ಜೋನ್, ಆರೆಂಜ್‌ ಜೋನ್‌ಗಳಲ್ಲಿ ಅಂತರ ಜಿಲ್ಲೆ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ.

ವ್ಹಾವ್: ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಕರ್ನಾಟಕ ಸರ್ಕಾರವ್ಹಾವ್: ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ ಕರ್ನಾಟಕ ಸರ್ಕಾರ

ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಇ ಪಾಸ್ ನೀಡಲು ಚಿಂತನೆ ನಡೆಸಿದೆ. ಅನಗತ್ಯವಾಗಿ ಅಂತರ ಜಿಲ್ಲೆ ಪ್ರಯಾಣ ಮಾಡುವವರನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಯಾಣಿಕರಿಗೆ ಇ ಪಾಸ್ ನೀಡಲು ನಿರ್ಧರಿಸಿದೆ.

Karnataka DGP Planning To Issue E Passes For Inter District Journey

ಈ ಸಂಬಂಧ ಕರ್ನಾಟಕ ಡಿಜಿಪಿ ಟ್ವೀಟ್ ಮಾಡಿದ್ದು, ರಾಜ್ಯಾದಂತ್ಯ ಅಂತರ ಜಿಲ್ಲೆ ಪ್ರಯಾಣ ಮಾಡುವ ಜನರಿಗಾಗಿ ಇ ಪಾಸ್ ಆರಂಭಿಸಲು ಮುಂದಾಗಿದ್ದೇವೆ. ಇಂದು ಸಂಜೆಯೊತ್ತಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಕೇವಲ ಅಂತರ ಜಿಲ್ಲೆ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದ್ದು, ಅಂತರ ರಾಜ್ಯ ಪಾಸ್ ಕುರಿತು ಮಾಹಿತಿ ನೀಡಿಲ್ಲ. ಇ ಪಾಸ್ ಪಡೆಯಲು ಯಾವ ವೆಬ್‌ ಸೈಟ್‌ಗೆ ಭೇಟಿ ನೀಡಬೇಕು, ಯಾವ ದಾಖಲೆ ಸಲ್ಲಿಸಬೇಕು ಮತ್ತು ಪಾಸ್ ಪಡೆಯಲು ಯಾರು ಅರ್ಹರು ಎಂಬ ವಿಷಯಗಳ ಜೊತೆ ಡಿಜಿಪಿ ಲಿಂಕ್ ಹಂಚಿಕೊಳ್ಳಲಿದ್ದಾರೆ.

English summary
Karnataka DGP have planning to issue E-Passes for inter district journey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X