• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೌಕರಿ ಆಸೆಗೆ ಪ್ರಧಾನಿಯ ನಕಲಿ ಶಿಫಾರಸ್ಸು ಪತ್ರ ಕೊಟ್ಟು ಜೈಲು ಸೇರಿದ

|

ಬೆಂಗಳೂರು, ಡಿಸೆಂಬರ್ 22: ನೌಕರಿಯ ಆಸೆ ಮನುಷ್ಯನನ್ನು ಎಲ್ಲಿಯವರೆಗೆ ಕೊಂಡೊಯ್ಯುತ್ತದೆ ನೋಡಿ, ಇಲ್ಲೊಬ್ಬ ನೌಕರಿ ಆಸೆಗೆ ಪ್ರಧಾನಿಯ ನಕಲಿ ಶಿಫಾರಸ್ಸು ಪತ್ರವನ್ನು ಕೊಟ್ಟು ಜೈಲು ಪಾಲಾಗಿದ್ದಾನೆ.

ದರೋಡೆ ಮಾಡಲು ಆತ ಬೆಡ್‌ರೂಂನಲ್ಲೇ ಅಡಗಿ ಕುಳಿತಿದ್ದ

ಉಚ್ಚ ನ್ಯಾಯಾಲಯಲ್ಲಿ ಟೈಪಿಸ್ಟ್ ಹುದ್ದೆ ಪಡೆಯಲು ಪ್ರಧಾನಿಯವರ ನಕಲಿ ಶಿಫಾರಸು ಪತ್ರ ನೀಡಿದ್ದ, ಖಾನಾಪುರ ತಾಲೂಕಿನ ಸಂಜಯ ಕುಮಾರ ಬಂಧಿತ, ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇದ್ದ ಟೈಪಿಸ್ಟ್ ಹುದ್ದೆ ಭರ್ತಿಗೆ 2017ರ ಮಾರ್ಚ್ ನಲ್ಲಿ ಅರ್ಜಿ ಕರೆಯಲಾಗಿತ್ತು. ಸಂಜಯ್ ಕುಮಾರ್ ಕೂಡ ಅರ್ಜಿ ಹಾಕಿದ್ದ.

ಆದರೆ ಆತ ಸಲ್ಲಿಸಿದ್ದ ದಾಖಲಾತಿಗಳು ಸರಿ ಇಲ್ಲದ ಕಾರಣ ಆಯ್ಕೆಯಿಂದ ಕೈ ಬಿಡಲಾಗಿತ್ತು. ನೇಕಾತಿ ಅರ್ಜಿ ತಿರಸ್ಕೃತಗೊಳ್ಳುತ್ತಿದ್ದಂತೆ ಪ್ರಧಾನಮಂತ್ರಿಗಳ ಶಿಫಾರಸ್ಸು ಪತ್ರವನ್ನು ಉಚ್ಛ ನ್ಯಾಯಾಲಯದ ನೇಮಕಾತಿ ವಿಭಾಗಕ್ಕೆ ಅಂಚೆ ಮೂಲಕ ರವಾನಿಸಿ ಹುದ್ದೆ ಪಡೆಯುವ ಯತ್ನ ನಡೆಸಿದ್ದ.

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ನ್ಯಾಯಾಲಯದ ಡೆಪ್ಯೂಟಿ ರಿಜಿಸ್ಟ್ರಾರ್ ಎಂ ರಾಜೇಶ್ವರಿ ಡಿ.17ರಂದು ಅರ್ಜಿದಾರ ಸಂಜಯ್ ಕುಮಾರ್ ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಪೊಲೀಸರು ಆತನನ್ನು ಬಂಧಿಸಿದ್ದಾರೆ.

English summary
To get typist job in Karataka high court Young man forged the Prime minister Narendra modi's recommendation letter. He is arrested by police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X