ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಲ್ಪಸಖ್ಯಾಂತರಿಗೆ ಸರ್ಕಾರದ ಬಂಪರ್ ಕೊಡುಗೆ!

|
Google Oneindia Kannada News

ಬೆಂಗಳೂರು, ಅ, 28 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಲ್ಪ ಸಂಖ್ಯಾತರಿಗೆ ಬಂಪರ್ ಕೊಡುಗೆ ನೀಡಿದೆ. ಅಲ್ಪ ಸಂಖ್ಯಾತ ಹೆಣ್ಣು ಮಕ್ಕಳ ಮದುವೆಗೆ ರೂ. 50 ಸಾವಿರ ಸಹಾಯಧನ ಘೋಷಿಸಿದೆ. ಈ ಕುರಿತ ಆದೇಶ ಸೋಮವಾರ ಅಧಿಕೃತವಾಗಿ ಹೊರಬಿದ್ದಿದೆ.

ಸೋಮವಾರ ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ವಿವಾಹವಾಕ್ಕಾಗಿ 50 ಸಾವಿರ ರೂ. ಸಹಾಯಧನ ನೀಡುವುದಾಗಿ ಘೋಷಿಸಿದೆ. ವಾರ್ಷಿಕ ಆದಾಯ 1 ಲಕ್ಷದ 50 ಸಾವಿರ ರುಪಾಯಿಗಿಂತ ಕಡಿಮೆ ಇರುವವರು ಸರ್ಕಾರದ ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.

marriage

ಮುಖ್ಯಮಂತ್ರಿಯಾಗಿ ಚೊಚ್ಚಲ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಂ ಸಮುದಾಯಕ್ಕೆ ವಿಶೇಷ ಯೋಜನೆ ಪ್ರಕಟಿಸಿದ್ದರು. ಇದೀಗ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಅಲ್ಪಸಂಖ್ಯಾತರಿಗೆ ಬಂಪರ್ ಕೊಡುಗೆಯನ್ನು ನೀಡಿದೆ. ಮಹಿಳೆಯರು ತಮ್ಮ ಮದುವೆ ಆಮಂತ್ರಣ ಪತ್ರಿಕೆ ನೀಡಿ ಸಹಾಯಧನ ಪಡೆದುಕೊಳ್ಳಬಹುದು ಎಂದು ರಾಜ್ಯ ಅಲ್ಪ ಸಂಖ್ಯಾತ ಇಲಾಖೆ ಆದೇಶ ಹೊರಡಿಸಿದೆ.

ಸರ್ಕಾರದ ಸಹಾಯಧನ ಪಡೆಯಬೇಕಾದರೆ ಹೆಣ್ಣಿಗೆ 18 ವರ್ಷ ಮತ್ತು ಗಂಡಿಗೆ 21 ವರ್ಷ ವಯಸ್ಸು ಕಡ್ಡಾಯವಾಗಿ ಆಗಿರಲೇಬೇಕು. ವಿವಾಹದ ನಂತರ ವಿವಾಹವಾಗಿರುವ ಬಗ್ಗೆ ಧಾರ್ಮಿಕ ಸಂಸ್ಥೆಯಿಂದ ಮತ್ತು ಜಿಲ್ಲಾ ಉಪ ನೋಂದಣಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಿ ಸಹಾಯಧನ ಪಡೆಬಹುದುದಾಗಿದೆ.

ವಿವಾಹಕ್ಕೂ ಮೊದಲು ಸಹಾಯಧನ ಪಡೆಯಲು ಒಂದು ತಿಂಗಳ ಮೊದಲು ಮಾಹಿತಿ ನೀಡಿ ಸಹಾಯಧನ ಪಡೆದುಕೊಳ್ಳಬಹುದು. ನಂತರ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಈ ಸಹಾಯಧನದಲ್ಲಿ ಮಂಚ, ಬೀರು, ಪಾತ್ರೆ, ಕನ್ನಡ, ಹಾಸಿಗೆ, ದಿಂಬು ಮುಂತಾದ ಅಗತ್ಯ ವಸ್ತುಗಳನ್ನು ಪಡೆಯಲು 15 ಸಾವಿರ ರೂ. ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

English summary
Karnataka government announced Rs 50,000 grant to each of the poor girls from the Muslim and Christian communities for their first marriage, under ‘Bidai’ scheme. On Monday, October 28 government ordered that, annual family income of Rs 1.5 lakh will be eligible for the scheme. The government has set aside Rs five core for the purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X