ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 12: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬುಧವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಅವರಿಗೆ ಹೃದಯ ಸಂಬಂಧಿ ಕಾಯಿಲೆಗಳಿದ್ದವು. ಆದರೆ ಉಪ ಚುನಾವಣೆ ಸೋಲಿನ ಬಳಿಕ ಬುಧವಾರ ಮತ್ತೆ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬದ ವೈದ್ಯರ ಸಲಹೆ ಮೇರೆಗೆ ಕೂಡಲೇ ಆಸ್ಪತ್ರೆಗೆ ಹಾಜರಾದರು.

ಅನಾರೋಗ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ ಅನಾರೋಗ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಗೆ

ಸಿದ್ದರಾಯ್ಯಗೆ ಆಂಜಿಯೋಗ್ರಾಮ್ ನಡೆಸಿದ ವೈದ್ಯರು ಹೃದಯ ಸಂಬಂಧಿ ಸಮಸ್ಯೆ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಕೂಡಲೇ ಸಿದ್ದರಾಮಯ್ಯಗೆ ಆಂಜಿಯೋ ಪ್ಲಾಸ್ಟಿ ನಡೆಸಲು ವೈದ್ಯರು ನಿರ್ಧರಿಸಿದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು ಇಂದು ಮಧ್ಯಾಹ್ನದೊಳಗೆ ಟಿಸ್ಚಾರ್ಜ್ ಮಾಡುವ ಸಾಧ್ಯತೆ ಇದೆ.

Former CM Undergone Heart Related Treatment

ತಂದೆಯ ಆರೋಗ್ಯದಲ್ಲಿ ಸಣ್ಣ ಪ್ರಮಾಣದ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಆಂಜಿಯೋ ಗ್ರಾಮ್ ಬಳಿಕ ವೈದ್ಯರು ಆಂಜಿಯೋ ಪ್ಲಾಸ್ಟಿ ಮಾಡಿದ್ದಾರೆ. ಹಾಗೆಯೇ ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಇಂದೇ ವೈದ್ಯರು ಟಿಸ್ಚಾರ್ಜ್ ಮಾಡಲಿದ್ದಾರೆ ಎಂದು ಶಾಸಕರೂ ಹಾಗೂ ವೈದ್ಯರೂ ಆಗಿರುವ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ತಿಳಿಸಿದ್ದಾರೆ.

ಕುಟುಂಬ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರಿಗೆ ಇದು ಎರಡನೇ ಆಂಜಿಯೋ ಪ್ಲಾಸ್ಟರ್ ಆಗಿದ್ದು, ಸಿದ್ದರಾಮಯ್ಯಗೆ ಈ ಮೊದಲೂ ಹೃದಯ ಸಂಬಂಇ ಸಮಸ್ಯೆ ಕಂಡುಬಂದಿತ್ತು.

ಹೃದಯಕ್ಕೆ ರಕ್ತ ಪರಿಚಲನೆ ಸರಿಯಾಗಿ ಇಲ್ಲ ಎನ್ನುವುದನ್ನು ವೈದ್ಯರು ಧೃಡಪಡಿಸಿದ್ದರು. ವೈದ್ಯರು ಇಂಜಿಯೋ ಗ್ರಾಂ ಮಾಡಿ ಅಂತ ಸಲಹೆ ನೀಡಿದ್ದರು. ಜೊತೆಗೆ ಅಂಜೋ ಪ್ಲಾಸ್ಟ್ ಮಾಡಿ ಸ್ಟಂಟ್ ಅಳವಡಿಸಿದ್ದಾರೆ. ನಾಳೆ ಬೆಳಗ್ಗೆ ತನಕ ಐಸಿಯುನಲ್ಲಿ ಇರುತ್ತಾರೆ.

ಇಂದು ಸಂಜೆ ಡಿಸ್ಚಾರ್ಜ್ ಮಾಡಲಾಗುತ್ತೆ. ಸದ್ಯ ತಂದೆಯ ಆರೋಗ್ಯ ಸ್ಥಿರವಾಗಿದೆ. ಸಿದ್ದರಾಮಯ್ಯನವರಿಗೆ ಈ ಹಿಂದೆಯೂ ಹೃದಯ ಸಮಸ್ಯೆ ಇತ್ತು. 20 ವರ್ಷಗಳ ಹಿಂದೆ ಅಂಜಿಯೋ ಗ್ರಾಂ ಮಾಡಲಾಗಿತ್ತು ಎನ್ನಲಾಗಿದೆ.

ಮತ್ತೆ ಕೆಲ ದಿನಗಳಿಂದ ಎದೆ ನೋವು ಕಾಣಿಸಿಕೊಂಡಿತ್ತು. ಕೆಲವೊಂದು ಟೆಸ್ಟ್ ಮಾಡಲಾಗಿದ್ದು ಪಾಸಿಟಿವ್ ಬಂದಿದೆ. ಮಧ್ಯಾಹ್ನ ಮತ್ತೆ ಅಂಜಿಯೋ ಪ್ಲಾಸ್ಟ್ ಮಾಡಲಾಗಿದೆ. ಅಂಜಿಯೋ ಪ್ಲಾಸ್ಟ್ ಮಾಡಿರುವುದರಿಂದ ಒಂದು ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇಂದು ಜನರಲ್ ವಾರ್ಡ್​​ಗೆ ಶಿಫ್ಟ್ ಮಾಡಲಾಗುತ್ತದೆ.

English summary
Former Chief minister Siddaramaiah undergone heart related treatment. He likely to discharge Today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X