ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೊಡ್ಡಬಳ್ಳಾಪುರ: ಬಿಜೆಪಿ ʻಜನಸ್ಪಂದನʼ ಸಮಾವೇಶವನ್ನು 'ಜನವೇದನ' ಸಮಾವೇಶ ಎಂದ ಕಾಂಗ್ರೆಸ್

|
Google Oneindia Kannada News

ದೊಡ್ಡಬಳ್ಳಾಪುರ ಸೆಪ್ಟೆಂಬರ್ 10: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಎಡಿಜಿಪಿಯೊಬ್ಬರು ಅಕ್ರಮದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದು ನಿಮ್ಮ ಸಾಧನೆಯೇ ಬಿಜೆಪಿ? ಎಂದು ಟಿಕಿಸಿರುವ ಕಾಂಗ್ರೆಸ್ ಬಿಜೆಪಿ ಸಮಾವೇಶವನ್ನು 'ಜನವೇದನ' ಸಮಾವೇಶದ ಎಂದು ಕರೆದು ವಾಗ್ದಾಳಿ ಮಾಡಿದೆ. ಈ ಬಗ್ಗೆ ಸರಣಿ 'ಕೂ' ಮಾಡುವ ಮೂಲಕ ಕಾಂಗ್ರೆಸ್ ಬಿಜೆಪಿಯ ವಿರುದ್ಧ ಹರಿಹಾಯ್ದಿದೆ. ಜೊತೆಗೆ 'ಜನವೇದನ' ಸಮಾವೇಶವನ್ನು ಕುಟುಕಿದೆ.

ಸರ್ವರ ವಿಕಾಸ, ಸಮೃದ್ಧ ಕರ್ನಾಟಕದತ್ತ! ದೃಢ ಹೆಜ್ಜೆಗಳು ಎಂಬ ಧ್ಯೇಯದಡಿ ಬಿಜೆಪಿಯು ದೊಡ್ಡಬಳ್ಳಾಪುರದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ʻಜನಸ್ಪಂದನʼ ಸಮಾವೇಶ ನಡೆಸುತ್ತಿದೆ. ಇದನ್ನು ವ್ಯಂಗ್ಯವಾಡಿರುವ ಕಾಂಗ್ರೆಸ್ ಕರ್ನಾಟಕ ಜನತೆಗೆ ಬಿಜೆಪಿಯು ಏನು ಮಾಡಿದೆ ಎಂದು ಪ್ರಶ್ನಿಸಿದೆ. ರಾಜ್ಯದ ಜನತೆಗೆ ಯಾವ ಸಾಧನೆ, ಯೋಜನೆ, ಸ್ಪಂದನೆ ಮಾಡಿದ್ದಾರೆಂದು ಸರ್ಕಾರ ಸಮಾವೇಶ ಮಾಡುತ್ತಿದೆ? ಬಿಜೆಪಿ ಸರ್ಕಾರ ಬಿಟ್ಟರೆ ಬೇರೇನು ಮಾಡಿದೆ? ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ನಾಡಿನ ಸಾಹಿತಿಗಳಿಗೆ ಅವಮಾನಿಸಿದ್ದೇ ನಿಮ್ಮ ಸಾಧನೆಯೇ ಬಸವರಾಜ ಬೊಮ್ಮಾಯಿ ಅವರೇ? #PuppetCM ಅವರ ಒಂದು ವರ್ಷದ ವಾರ್ಷಿಕೋತ್ಸವಕ್ಕೆ ಸಜ್ಜಾಗಿರುವ ಸರ್ಕಾರ ತಮ್ಮ ಸಾಧನೆ ಏನು ಎಂದು ನಾಡಿನ ಜನತೆಗೆ ಉತ್ತರಿಸಬೇಕು. ಪಠ್ಯಪುಸ್ತಕಗಳಲ್ಲಿ ಅವಾಂತರ ಸೃಷ್ಟಿಸಿದ ಸರ್ಕಾರ ಇನ್ನೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಲಿಲ್ಲ. ದೇಶದ್ರೋಹಿಗಳನ್ನು ದೇಶಭಕ್ತರನ್ನಾಗಿ ಬಿಂಬಿಸಿದ್ದೇ ಸಾಧನೆಯೇ? ಎಂದು ಕಾಂಗ್ರೆಸ್ ಕಾರವಾಗಿ ನುಡಿದಿದೆ.

ಸಚಿವ ಹಾಗೂ ಸಹೋದರನ ಕೈವಾಡ

'ರಾಜ್ಯದ ಇತಿಹಾಸದಲ್ಲೇ ಎಡಿಜಿಪಿಯೊಬ್ಬರು ಅಕ್ರಮದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದು ಇದೇ ಮೊದಲು. ಉನ್ನತ ಮಟ್ಟದ ಅಧಿಕಾರಿಗಳು ಸರ್ಕಾರ ಹಾಗೂ ಮಂತ್ರಿಗಳು ಸಹಕಾರವಿಲ್ಲದೆ ಅಕ್ರಮವನ್ನು ನಡೆಸಲು ಸಾಧ್ಯವೇ ಇಲ್ಲ. ಮಂತ್ರಿಗಳ ವಿಚಾರಣೆ ನಡೆಸದೆ ಭ್ರಷ್ಟರನ್ನು ರಕ್ಷಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಒಂದೆಡೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮದು ಪಾರದರ್ಶಕ ತನಿಖೆ ಎನ್ನುತ್ತಾರೆ ಸಿಎಂ. ಇನ್ನೊಂದೆಡೆ PSI ಅಕ್ರಮದಲ್ಲಿ ಸಚಿವ ಅಶ್ವಥ್ ನಾಯಾರಾಯಣ್ (@drashwathnarayan) ತಮ್ಮ ಸಹೋದರರೊಂದಿಗೆ ಸೇರಿ ಅಕ್ರಮ ನಡೆಸಿದ ಸಂಗತಿ ಬೆಳಕಿಗೆ ಬಂದರೂ ಸಚಿವರ ತನಿಖೆ ಇಲ್ಲ. ಪ್ರಕರಣ ಮುಚ್ಚಿಹಾಕಲು ಯತ್ನಿಸುವುದೇ ನಿಮ್ಮ ಸಾಧನೆಯೇ?' ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನೆ ಮಾಡಿದೆ.

ಇದೇನಾ ಆರಗ ಜ್ಞಾನೇಂದ್ರ ಸಾಧನೆ?

ರಾಜ್ಯದ 54 ಸಾವಿರ PSI ಅಭ್ಯರ್ಥಿಗಳಿಗೆ ವಂಚಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರದ್ದು ಯಾವ ಸಾಧನೆ? ತಮ್ಮ ಕಛೇರಿಯೇ ಅಕ್ರಮದ ಅಡ್ಡೆಯಾಗಿದ್ದರೂ ಸದನದಲ್ಲಿ ಸುಳ್ಳು ಹೇಳಿ ನಾಡಿನ ದಿಕ್ಕು ತಪ್ಪಿಸಲು ಯತ್ನಿಸಿದ ಗೃಹಸಚಿವರದ್ದು 'ಜನಸ್ಪಂದನೆ'ಯ ಸಾಧನೆಯೇ? ಈ ವಂಚನೆಯನ್ನು ಸಮಾವೇಶದಲ್ಲಿ ಹೇಳುವಿರಾ? ಎಂದು 'ಕೈ' ಪ್ರಶ್ನೆ ಮಾಡಿದೆ.

’ಜನವೇದನ’ ಸಮಾವೇಶ ಈ ಬಗ್ಗೆ ಪ್ರಸ್ತಾಪಿಸಿ - ಕಾಂಗ್ರೆಸ್ ಸೂಚನೆ

ಸಿಎಂ ಆಡಳಿತದಲ್ಲಿ ಹೊರಬಂದ PSI ಹಗರಣವೇ ನಿಮ್ಮ ಸಾಧನೆಯೇ? ಸಿಎಂ ಬಸವರಾಜ್ ಬೊಮ್ಮಾಯಿ ಅವರೇ, PSI ಅಕ್ರಮದಲ್ಲಿ ನಿಮ್ಮ ಸಂಪುಟ ಸಚಿವರು, ಶಾಸಕರ ಕೈವಾಡ ಬಯಲಾದರೂ ಕಣ್ಮುಚ್ಚಿ ಕುಳಿತಿರುವುದನ್ನು, 54,000 ಯುವಕರಿಗೆ ಮೋಸ ಮಾಡಿದ್ದನ್ನು ಸಾಧನೆ ಎಂದು 'ಜನವೇದನ' ಸಮಾವೇಶದಲ್ಲಿ ಹೇಳಿಕೊಳ್ಳುವಿರಾ? ಎಂದು (@bsbommai) ಕಾಂಗ್ರೆಸ್ ಪ್ರಶ್ನಿಸಿದೆ.

ಬಿಜೆಪಿಯ ಹಿಡನ್ ಅಜೆಂಡಾ

ಬಿಜೆಪಿಯ ಹಿಡನ್ ಅಜೆಂಡಾ

'ಸಂವಿಧಾನ ರಚನೆಯನ್ನು ಅಂಬೇಡ್ಕರ್‌ರವರು ಮಾಡಿದ್ದಲ್ಲ' ಎಂದು ಬಿಂಬಿಸುವುದು ಬಿಜೆಪಿಯ ಹಿಡನ್ ಅಜೆಂಡಾ. ಹಿಂದೆ ಶಿಕ್ಷಣ ಇಲಾಖೆಯ ಕೈಪಿಡಿಯಲ್ಲೂ ಈ ಪ್ರಯತ್ನ ಮಾಡಿ ಯೂ ಟರ್ನ್ ಹೊಡೆಯಲಾಗಿತ್ತು, ನಂತರ ಪಠ್ಯಪುಸ್ತಕದಲ್ಲೂ ಅದೇ ಪ್ರಯತ್ನ ಮುಂದುವರೆಸಿದೆ. ಎಷ್ಟಾದರೂ ಸಂವಿಧಾನ ಸುಟ್ಟವರ ಸಂತತಿಯಲ್ಲವೇ ಬಿಜೆಪಿಗರು ಎಂದು ಕಾಂಗ್ರೆಸ್ ಸರಣಿ ಪ್ರಶ್ನೆಗಳನ್ನು ಮಾಡಿದೆ.


ಜಾತಿ, ಮತ, ಪಂಥಗಳು ಅದೆಷ್ಟೇ ದ್ವೇಷದ ಗೋಡೆಗಳನ್ನು ಎಬ್ಬಿಸಿದರೂ ನಾವೆಲ್ಲರೂ ಸಹೋದರ ಸಮಾನರು ಎಂಬುದೇ ಸತ್ಯ- ಶ್ರೀ ನಾರಾಯಣ ಗುರು ಜಾತಿ, ಧರ್ಮಗಳನ್ನು ಒಡೆದಾಳುವ ಇರಾದೆ ಹೊಂದಿದ ಬಿಜೆಪಿಗೆ ನಾರಾಯಣ ಗುರುಗಳ ತತ್ವಗಳು ತಡೆಗೋಡೆಯಂತೆ ಭಾಸವಾಗುವುದು ಸಹಜ. ಆ ಕಾರಣಕ್ಕಾಗಿಯೇ ಗುರುಗಳಿಗೆ ನಿರಂತರ ಅವಮಾನ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರಿದೆ.

English summary
Congress mocked BJP's ''Janaspandan'' convention in Doddaballapur saying, 'BJP's achievement is to portray traitors as patriots'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X