ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಮಿಷಗಳಿಗೆ ಬಲಿಯಾಗಬೇಡಿ: ಜೆಡಿಎಸ್ ಶಾಸಕರಿಗೆ ಎಚ್‌ಡಿಕೆ ಸಲಹೆ

By Manjunatha
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 09: ರಾಜಕೀಯ ಬೆಳವಣಿಗೆಗಳು ಬಿರುಸು ಪಡೆದುಕೊಳ್ಳುತ್ತಿರುವ ಕಾರಣ ನಿನ್ನೆ ಕರೆದಿದ್ದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕರಿಗೆ ಕುಮಾರಸ್ವಾಮಿ ಹಾಗೂ ದೇವೇಗೌಡ ಕೆಲವು ಎಚ್ಚರಿಕೆಗಳನ್ನು ನೀಡಿದ್ದಾರೆ.

ಜೆಡಿಎಸ್ ಶಾಸಕರು ಸದಾ ಒಗ್ಗಟ್ಟಾಗಿರಿ, ಯಾವುದೇ ಪಕ್ಷದ ಆಸೆ, ಆಮೀಷಗಳಿಗೆ ಒಳಗಾಗಬೇಡಿ, ಬೆಳೆಸಿದ ಪಕ್ಷಕ್ಕೆ ಕೈಕೊಡಬೇಡಿ ಎಂದು ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರಿಗೆ ಕಿವಿ ಮಾತು ಹೇಳಿದ್ದಾರೆ.

ಖಂಡಿತಾ ಈ ಎಲ್ಲಾ ವಿಚಾರಗಳಿಗೆ ಭಾರತ ಬಂದ್ ಆಗಲೇಬೇಕು : ಟಿ.ಎ.ಶರವಣಖಂಡಿತಾ ಈ ಎಲ್ಲಾ ವಿಚಾರಗಳಿಗೆ ಭಾರತ ಬಂದ್ ಆಗಲೇಬೇಕು : ಟಿ.ಎ.ಶರವಣ

ದೇವೇಗೌಡ ಅವರು ಸಹ ಇದೇ ರೀತಿಯ ಕೆಲವು ಎಚ್ಚರಿಕೆ ಮಾತುಗಳನ್ನು ಹೇಳಿದ್ದು. ಯಾವುದೇ ಪಕ್ಷದವರು ಸಂಪರ್ಕ ಮಾಡಿದರೂ ಪಕ್ಷದ ವರಿಷ್ಠರ ಗಮನಕ್ಕೆ ತರಬೇಕು ಹಾಗೂ ಅಕ್ಕ ಪಕ್ಷದ ಕ್ಷೇತ್ರಗಳ ಶಾಸಕರ ಸ್ಥಿತಿಯ ಬಗ್ಗೆಯೂ ವರದಿ ನೀಡಬೇಕು ಎಂದು ಹೇಳಿದ್ದಾರೆ.

Do not fall for any lure: Kumaraswamy warn JDS MLAs

ಸಮ್ಮಿಶ್ರ ಸರ್ಕಾರ ಇರುವ ಕಾರಣ ಕೆಲವು ಕಾರ್ಯಗಳು ಆಗಲು ವಿಳಂಬವಾಗಿರಬಹುದು ಆದರೆ ಸಣ್ಣ-ಪುಟ್ಟ ಕಾರ್ಯಗಳಿಗೆ ಯಾರೂ ಬೇಸರ ಪಟ್ಟುಕೊಳ್ಳಬಾರದು. ಏನೇ ಸಮಸ್ಯೆ ಇದ್ದರೂ ಮಾತನಾಡಿ ಬಗೆಹರಿಸಿಕೊಳ್ಳೇಕು ಎಂದು ಕುಮಾರಸ್ವಾಮಿ ಅವರು ಶಾಸಕರಲ್ಲಿ ಮನವಿ ಮಾಡಿದ್ದಾರೆ.

ಸಿದ್ದರಾಮಯ್ಯ ಎಸೆದ ಬಾಂಬ್ 2019ರ ಚುನಾವಣೆಯ ತಂತ್ರವೇ?ಸಿದ್ದರಾಮಯ್ಯ ಎಸೆದ ಬಾಂಬ್ 2019ರ ಚುನಾವಣೆಯ ತಂತ್ರವೇ?

ನಮ್ಮದೇ ಸರ್ಕಾರವಿದ್ದರೂ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ. ನಮ್ಮ ಕ್ಷೇತ್ರಗಳ ಕೆಲಸಗಳನ್ನು ಮಾಡಿಸಿಕೊಳ್ಳಲು ಹೆಣಗಾಡಬೇಕಾಗಿದೆ. ಅಧಿಕಾರಿಗಳು ತಮ್ಮ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಗಮನ ಸೆಳೆದಿದ್ದಾರೆ. ಆಗ ಕುಮಾರಸ್ವಾಮಿ ಅವರು ಸ್ವಲ್ಪ ಕಾಲಾವಕಾಶ ಕೊಡಿ. ಎಲ್ಲವನ್ನೂ ಸರಿಪಡಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ ಎನ್ನಲಾಗಿದೆ.

English summary
Kumaraswamy warn JDS MLAs that do not fall for any lure by any political party. He talked in JDS legislature meeting. He said JDS MLAs should be unite.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X