ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ, ಉಬರ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ ನಮ್ಮ ಯಾತ್ರಿ App

|
Google Oneindia Kannada News

ಬೆಂಗಳೂರು, ಅಕ್ಟೋಬರ್‌ 21: ಓಲಾ ಮತ್ತು ಉಬರ್‌ನಂತಹ ಅಪ್ಲಿಕೇಶನ್ ಆಧಾರಿತ ಆಟೋರಿಕ್ಷಾ ಅಗ್ರಿಗೇಟರ್‌ಗಳು ಹೆಚ್ಚಿನ ಶುಲ್ಕ ವಿಧಿಸುವುದರ ವಿರುದ್ಧ ಸೆಡ್ಡು ಹೊಡೆದಿರುವ ಬೆಂಗಳೂರು ಆಟೋ ಚಾಲಕರು ಖಾಸಗಿ ತಂತ್ರಜ್ಞರ ನೆರವಿನೊಂದಿಗೆ ನಮ್ಮ ಯಾತ್ರಿ ಹೆಸರಿನಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸಲು ಮುಂದೆ ಬಂದಿದ್ದಾರೆ.

ನಮ್ಮ ಯಾತ್ರಿ ಎಂಬ ಹೊಸ ಆ್ಯಪ್ ಬಿಡುಗಡೆಗೂ ಮುನ್ನವೇ ಒಂದು ವಾರದಲ್ಲಿ 1,000 ರಿಂದ 10,000ಕ್ಕಿಂತ ಹೆಚ್ಚು ಜನರು ಆಪ್‌ನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗಳ ಮೇಲಿನ ಹೆಚ್ಚಿನ ದರಗಳ ಮೇಲಿನ ಕೋಪಕ್ಕೆ ತಮ್ಮದೇ ಆಪ್‌ನ್ನು ಸೇವೆಗೆ ತರಲಿದೆ. ಅದಿ ಈಗ ಪರೀಕ್ಷಾ ಹಂತದಲ್ಲಿದೆ.

Breaking: ಆಟೋ ಪ್ರಯಾಣದ ದರ ಇಳಿಸಿದ ಊಬರ್Breaking: ಆಟೋ ಪ್ರಯಾಣದ ದರ ಇಳಿಸಿದ ಊಬರ್

ಒಪನ್‌ (ಬೆಕ್ನ್) ಪ್ರೋಟೋಕಾಲ್ ಅನ್ನು ಬಳಸಿಕೊಂಡು ಖಾಸಗಿ ಕಂಪನಿಯಿಂದ ನಮ್ಮ ಯಾತ್ರಿ ಆಪ್ ರಚಿಸಲ್ಪಟ್ಟಿದೆ. ಇದು ಖಾಸಗಿ ಅಗ್ರಿಗೇಟರ್‌ಗಳ ಏಕಸ್ವಾಮ್ಯವನ್ನು ಅಂತ್ಯಗೊಳಿಸಲು ಮತ್ತು ರೈಡ್ ಹೇಲಿಂಗ್ ಅನ್ನು ಸಾರ್ವಜನಿಕ ಸ್ನೇಹಿಗೊಳಿಸಲು ಪ್ರಯತ್ನಿಸುತ್ತದೆ. ಇದು ಸರ್ಕಾರವು ಸೂಚಿಸಿದ ದರಗಳ ಮಾತ್ರವೇ ಜನರಿಂದ ಹಣ ಪಡೆಯಲಿದೆ.

ಚಾಲಕರು ಪ್ರಯಾಣಿಕರು ಇರುವಲ್ಲಿಗೆ ತಲುಪಲು ಅವರು ಓಡಿಸುವ ದೂರವನ್ನು ಸರಿದೂಗಿಸಲು ಬುಕಿಂಗ್‌ನಲ್ಲಿ ಹೆಚ್ಚುವರಿ 10 ರೂ, 20 ರೂ ಅಥವಾ 30 ರೂ ನೀಡುವಂತೆ ವಿನಂತಿಸಬಹುದು. ಸಾರಿಗೆ ಇಲಾಖೆಯು ಓಲಾ, ಉಬರ್ ಮತ್ತು ರಾಪಿಡೊ ವಿರುದ್ಧ ಹೆಚ್ಚಿನ ದರವನ್ನು ವಿಧಿಸುವ ಕ್ರಮವನ್ನು ಪ್ರಾರಂಭಿಸಿದ ನಂತರ ಈ ವಿಷಯವು ಹೈಕೋರ್ಟ್‌ಗೆ ತಲುಪಿತು.

ಬೆಂಗಳೂರು: ಅ.12ರಿಂದ ಓಲಾ, ಉಬರ್ ಆಟೋ ಸೇವೆ ಸ್ಥಗಿತ, ಅಕ್ರಮ ರಸ್ತೆಗಿಳಿದರೆ 5000 ದಂಡಬೆಂಗಳೂರು: ಅ.12ರಿಂದ ಓಲಾ, ಉಬರ್ ಆಟೋ ಸೇವೆ ಸ್ಥಗಿತ, ಅಕ್ರಮ ರಸ್ತೆಗಿಳಿದರೆ 5000 ದಂಡ

ಕೇರಳದ ಕೊಚ್ಚಿಯಲ್ಲಿನ 'ಯಾತ್ರಿ' ಆ್ಯಪ್‌ನ ಯಶಸ್ಸಿನಿಂದ ಸ್ಫೂರ್ತಿ ಪಡೆದ ಆಟೋ ರಿಕ್ಷಾ ಚಾಲಕರ ಒಕ್ಕೂಟದ ಮನವಿಗೆ ಸ್ಪಂದಿಸಿ ನಮ್ಮ ಯಾತ್ರಿಯನ್ನು ನಿರ್ಮಿಸಲಾಗಿದೆ. ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಮಾತನಾಡಿ, ನಮ್ಮ ಯಾತ್ರಿಯಲ್ಲಿನ ರೈಡ್‌ಗಳು ಅಗ್ಗವಾಗಿವೆ. ಏಕೆಂದರೆ ಪ್ರಯಾಣಿಕರು ಅಥವಾ ಚಾಲಕರು ಬುಕ್ಕಿಂಗ್‌ಗೆ ಅನುಕೂಲವಾಗುವ ಕಂಪನಿಗೆ ಯಾವುದೇ ಕಮಿಷನ್ ಪಾವತಿಸುವುದಿಲ್ಲ ಎಂದರು.

ಲೂಟಿಯನ್ನು ಕೊನೆಗೊಳಿಸಲು ಬಯಸುತ್ತೇವೆ

ಲೂಟಿಯನ್ನು ಕೊನೆಗೊಳಿಸಲು ಬಯಸುತ್ತೇವೆ

"ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳಲ್ಲಿ 30% ದರವನ್ನು ಕಮಿಷನ್ ಮತ್ತು ಜಿಎಸ್‌ಟಿಯಾಗಿ ಚಾಲಕರಿಗೆ ನೀಡಲಾದ ಅಲ್ಪ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ. ನಾವು ಈ ಲೂಟಿಯನ್ನು ಕೊನೆಗೊಳಿಸಲು ಬಯಸುತ್ತೇವೆ. ಸರ್ಕಾರದಿಂದ ಪ್ರಯಾಣ ದರದ ಸೂಚನೆ ಬಂದರೆ ನಮಗೆ ಸಂತೋಷವಾಗುತ್ತದೆ. ನಮಗೆ ಬೇಕಾಗಿರುವುದು ಪ್ರಯಾಣಿಕರನ್ನು ಯಾರಾದರೂ ಕರೆತರವುದು ಮತ್ತು ಈ ಅಪ್ಲಿಕೇಶನ್ ಅದನ್ನು ಮಾತ್ರ ಮಾಡುತ್ತದೆ ಎಂದು ಅವರು ಹೇಳಿದರು.

ದಿನಕ್ಕೆ ಸುಮಾರು 40 ರೂಪಾಯಿ ಪಾವತಿ

ದಿನಕ್ಕೆ ಸುಮಾರು 40 ರೂಪಾಯಿ ಪಾವತಿ

ಆಪ್‌ ಹಿಂದಿನ ಕಾರ್ಯಾಚರಣೆಗಳನ್ನು ಸರಿದೂಗಿಸಲು ಚಾಲಕರು ಚಂದಾದಾರಿಕೆಯನ್ನು ಪಾವತಿಸಲು ಸಿದ್ಧರಾಗಿದ್ದಾರೆ. ಆ್ಯಪ್ ಸಂಪೂರ್ಣವಾಗಿ ಕಾರ್ಯಾರಂಭವಾದಾಗ, ನಾವು ದಿನಕ್ಕೆ ಸುಮಾರು 40 ರೂಪಾಯಿಗಳನ್ನು ಪಾವತಿಸಬೇಕಾಗಬಹುದು. ಇದು ನಾವು ಓಲಾ, ಉಬರ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಿಗೆ ಪಾವತಿಸುವ ಮಾದರಿಯ ಒಂದು ಭಾಗವಾಗಿದೆ ಎಂದು ಅವರು ಹೇಳಿದರು.

ಶೀಘ್ರದಲ್ಲೇ ಆಪ್‌ ಜಾರಿ ನಿರೀಕ್ಷೆ

ಶೀಘ್ರದಲ್ಲೇ ಆಪ್‌ ಜಾರಿ ನಿರೀಕ್ಷೆ

ಸುಮಾರು 2,500 ಚಾಲಕರು ಈಗಾಗಲೇ ಅಪ್ಲಿಕೇಶನ್‌ಗೆ ನೋಂದಾಯಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಆಪ್‌ ಜಾರಿಯಾಗುವ ನಿರೀಕ್ಷೆಯಿದೆ. ಪರೀಕ್ಷಾ ಅವಧಿಯಲ್ಲಿ ಇದನ್ನು ಪ್ರಯತ್ನಿಸಿದ ಪ್ರಯಾಣಿಕರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಮಾದರಿಯ ಮಹತ್ವವನ್ನು ಸರ್ಕಾರ ಗುರುತಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ರುದ್ರಮೂರ್ತಿ ಹೇಳಿದರು.

ಸಮಯಾವಕಾಶ ಕೋರಿದ ಸರ್ಕಾರ

ಸಮಯಾವಕಾಶ ಕೋರಿದ ಸರ್ಕಾರ

ಆಪ್‌ ಆಧಾರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಅಗ್ರಿಗೇಟರ್‌ ಸಂಸ್ಥೆಗಳು ನ್ಯಾಯಾಲಯದ ಮೊರೆ ಹೋಗಿದ್ದವು. ಸರ್ಕಾರದ ಪರ ವಾದ ಮಂಡಿಸಿದ ಎಜಿ ಪ್ರಭುಲಿಂಗ ನಾವದಗಿ, ಗುರುವಾರ ನಡೆಸಿದ ಮಾತುಕತೆಯಲ್ಲಿ ಸಹಮತ ಮೂಡಿಲ್ಲ. ದರ ನಿಗದಿ ಮಾಡಲು ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಕೋರಿದ್ದರು.

English summary
Protesting against the exorbitant charging of app-based Autorickshaw aggregators like Ola and Uber, Bengaluru auto drivers have come forward to serve passengers in the name of our Yatri with the help of private technicians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X