ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಆಟೋ ಪ್ರಯಾಣದ ದರ ಇಳಿಸಿದ ಊಬರ್

|
Google Oneindia Kannada News

ಬೆಂಗಳೂರು, ಅಕ್ಟೋಬರ್ 16: ಕರ್ನಾಟಕ ಹೈಕೋರ್ಟ್ ಆದೇಶದ ಬೆನ್ನಲ್ಲೇ ಊಬರ್ ಕಂಪನಿ ಆಟೋ ಪ್ರಯಾಣದ ದರ ಇಳಿಸುವ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

ಮೊಬೈಲ್ ಅಪ್ಲಿಕೇಷನ್ ಆಧಾರಿತ ಓಲಾ, ಊಬರ್ ಕಂಪನಿಗಳು ಆಟೋಗಳ ಪ್ರಯಾಣಿಕರಿಂದ ಹೆಚ್ಚುವರಿ ಹಣ ಪಡೆಯುತ್ತಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಸಂಬಂಧ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಆದೇಶದ ಬೆನ್ನಲ್ಲೇ ಶನಿವಾರದಿಂದ ಅನ್ವಯವಾಗುವಂತೆ ಊಬರ್ ಕಂಪನಿ ಮಾತ್ರ ಆಟೋರಿಕ್ಷಾಗಳ ಪ್ರಯಾಣ ದರ ಇಳಿಕೆ ಮಾಡಿದೆ.

ಎಚ್ಚರಿಕೆ ಬಳಿಕವು ಓಲಾ, ಊಬರ್, ರಾಪಿಡೋ ಆಟೋ ಸೇವೆ ಎಚ್ಚರಿಕೆ ಬಳಿಕವು ಓಲಾ, ಊಬರ್, ರಾಪಿಡೋ ಆಟೋ ಸೇವೆ

ಊಬರ್ ಕಂಪನಿಯು ಎರಡು ಕಿಲೋ ಮೀಟರ್‌ ಪ್ರಯಾಣಕ್ಕೆ 40ರಿಂದ 45 ರೂಪಾಯಿ ನಿಗದಿಪಡಿಸಿದೆ. ಇದರಿಂದ ಆಟೋ ಪ್ರಯಾಣದ ದರ ಮೊದಲಿಗಿಂತ ಶೇ.25ರಿಂದ 30ರಷ್ಟು ದರದಲ್ಲಿ ಇಳಿಕೆ ಆಗಿದೆ. ಊಬರ್ ಹೊರತು ಓಲಾ ಕಂಪನಿ ಎರಡು ಕಿಲೋ ಮೀಟರ್‌ಗೆ 75ರಿಂದ 80ರೂ.ವರೆಗೆ ಹೆಚ್ಚುವರಿ ಹಣ ಪಡೆಯುವುದನ್ನು ಮುಂದುವರಿಸಿವೆ ಎಂದು ತಿಳಿದು ಬಂದಿದೆ.

After Karnataka High Court Order Uber Cuts Auto Travel Price

ಓಲಾದಿಂದ ಅಧಿಕ ಹಣ ವಸೂಲಿ; ಆಟೋರಿಕ್ಷಾ ಅನುಮತಿ ಹಾಗೂ ಹೆಚ್ಚು ದರ ವಿಧಿಸುವ ಪ್ರಕರಣ ವಿಚಾರವಾಗಿ ರಾಜ್ಯ ಹೈಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಆದೇಶದನ್ವಯ ರಾಜ್ಯ ಸರ್ಕಾರ ಮುಂದಿನ 15ದಿನದಲ್ಲಿ ಆಟೋ ರಿಕ್ಷಾಗಳ ಪ್ರಯಾಣದ ದರವನ್ನು ಹೊಸದಾಗಿ ನಿಗದಿಪಡಿಸಬೇಕು. ಈ ಸಂಬಂಧ ಕಂಪನಿಗಳ ಜತೆ ಚರ್ಚಿಸಿ ಎಂದಿರುವ ಹೈಕೋರ್ಟ್ ಸರ್ಕಾರದ ದರ ನಿಗದಿವರೆಗೆ ಓಲಾ, ಊಬರ್ ಕಂಪನಿಗಳು ನಿಗದಿತ ದರ ಮತ್ತು ಹೆಚ್ಚುವರಿ ಶೇ. 10ರಷ್ಟು ಹಣ, ಸೇವಾ ತೆರಿಗೆ ಮಾತ್ರ ಪಡೆಯಬೇಕು ಎಂದು ತಿಳಿಸಿದೆ. ಇದರಿಂದ ಕೂಡಲೇ ಎಚ್ಚೆತ್ತಿರುವ ಊಬರ್ ಪ್ರಯಾಣದ ದರ ಇಳಿಕೆ ಮಾಡಿದೆ.

After Karnataka High Court Order Uber Cuts Auto Travel Price

ಮೆಜೆಸ್ಟಿಕ್ ಮತ್ತು ಶಿವಾನಂದ ವೃತ್ತದಿಂದ ನಡುವೆ ಎರಡು ಕಿಲೋ ಮೀಟರ್‌ಗಿಂತಲೂ ಕಡಿಮೆ ದೂರ ಇದೆ. ಇಷ್ಟು ದೂರದ ಪ್ರಯಾಣಕ್ಕೆ ಶನಿವಾರ ಉಬರ್ ಆಪ್‌ನಲ್ಲಿ 36ರೂ. ದರ ತೋರಿಸಿದರೆ, ಓಲಾ ಆಪ್ ನಲ್ಲಿ 64ರೂ. ದರ ನಿಗದಿ ಇರುವುದನ್ನು ಕಾಣಬಹುದು.

ಹೈಕೋರ್ಟ್‌ಗೆ ಪ್ರತ್ಯೇಕ 2 ಪಿಐಎಲ್‌ ಸಲ್ಲಿಕೆ: ವಿಚಾರಣೆ

ಆ್ಯಪ್ ಆಧಾರಿತ ಓಲಾ ಹಾಗೂ ಉಬರ್ ಆಟೋರಿಕ್ಷಾಗಳ ಸೇವೆ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶವನ್ನು ರದ್ದು ಮಾಡುವಂತೆ ಕೋರಿ ಎಎನ್ಐ ಟೆಕ್ನಾಲಜೀಸ್ ಕಂಪನಿಯೊಂದು ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಈ ಎರಡು ಕಂಪನಿಗಳು ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳನ್ನು ಈ ಹಿಂದೆಯೆ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ ನ್ಯಾಯ ಸಮ್ಮತವಾಗಿ ದರ ನಿಗದಿಪಡಿಸಬೇಕು. ಅದಕ್ಕಾಗಿ ಓಲಾ ಮತ್ತು ಉಬರ್ ಕಂಪನಿಗಳ ಜತೆ ಚರ್ಚೆ ನಡೆಸಿ ಎಂದು ಸೂಚಿಸಿತ್ತು.

ನಂತರ ಗುರುವಾರ ವಿಚಾರ ನಡೆಸಿದ ಹೈಕೋರ್ಟ್ ಓಲಾ ಮತ್ತು ಉಬರ್ ಆಟೋರಿಕ್ಷಾಗಳ ಸಂಬಂಧಿಸಿದಂತೆ ಎದ್ದಿರುವ ಸಮಸ್ಯೆಗಳನ್ನು ಜನರಿಗೆ ತೊಂದರೆ ಆಗದಂತೆ ಪರಿಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಿಳಿಸಿ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿತ್ತು.

ಅದರಂತೆ ಶುಕ್ರವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಪೀಠವು ಮುಂದಿನ 15ದಿನದಲ್ಲಿ ರಾಜ್ಯ ಸರ್ಕಾರ ಕಂಪನಿಗಳ ಜತೆ ಚರ್ಚಿಸಿ ಹೊಸ ದರ ನಿಗದಿ ಮಾಡಿ ಎಂದು ಹೇಳಿತು. ಜತೆಗೆ ಕಂಪನಿಗಳಿಗೆ ಕೆಲವು ಸಲಹೆಗಳನ್ನು ನೀಡಿತು. ಇದರ ಬೆನ್ನಲ್ಲೆ ಉಬರ್ ಕಂಪನಿ ಮಾತ್ರ ಆಟೋ ರಿಕ್ಷಾಗಳ ಪ್ರಯಾಣದ ದರವನ್ನು ಶನಿವಾರದಿಂದಲೇ ಜಾರಿಗೆ ಬರುವಂತೆ ಇಳಿಕೆ ಮಾಡಿದೆ.

English summary
After Karnataka high court ordered Uber cut the auto fare. Passengers had complained that the minimum fare on apps had crossed Rs 100 for 2 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X